Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಜಾತಿ ಸ೦ಘಟನೆಯಿ೦ದಲೂ ಬಿ ವಿ ಲಕ್ಷ್ಮೀನಾರಾಯಣ ದ೦ಪತಿಗಳಿಗೆ ಗೇಟ್ ಪಾಸ್ ಭಾರೀ ಛೀಮಾರಿ…

ಉಡುಪಿ:ಇತ್ತೀಚಿಗೆ ಉಡುಪಿಯಲ್ಲಿ ಭಾರೀ ಆಶ್ಚರ್ಯ ಸ೦ಗತಿಗೆ ಎಡೆಮಾಡಿಕೊಟ್ಟ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸ೦ಘ(ರಿ)ದಲ್ಲಿ ಕೋಟ್ಯಾ೦ತರ ರೂಪಾಯಿ ಹಣವನ್ನು ಸಾರ್ವಜನಿಕರಿಗೆ ವ೦ಚಿಸಿ ತಲೆಮರೆಸಿಕೊ೦ಡಿರುವ ಬಿ ವಿ ಲಕ್ಷ್ಮೀನಾರಾಯಣ ಹಾಗೂ ಅವರ ಪತ್ನಿ ರಾಧಿಕಾ ಲಕ್ಷ್ಮೀನಾರಾಯಣರನ್ನು ಈಗಾಗಲೇ ಉಡುಪಿ ರೋಟರಿ ಕ್ಲಬಿನಿ೦ದ ಅವರ ಸದಸ್ಯತ್ವ, ಹಾಗೂ ಎಲ್ಲಾ ಹುದ್ದೆಯಿ೦ದ ತೆಗೆದು ಹಾಕಲಾಗಿದ ಬೆನ್ನಲ್ಲೇ ರೋಟರಿ ಕ್ಲನ್ ಇನ್ನರ್ ವೀಲ್ ನಿ೦ದಲೂ ತೆಗೆದು ಹಾಕಲಾಗಿದೆ.ಇದರ ಬೆನ್ನಲ್ಲೇ ಮತ್ತೊ೦ದು ದೊಡ್ಡ ನಿರ್ಧಾರವನ್ನು ಉಡುಪಿಯ ಅವರ ಸಮಾಜದ ಸ೦ಘಟನೆಯು ಕೈಗೆತ್ತಿಕೊ೦ಡಿದೆ ಎ೦ದು ತಿಳಿದು ಬ೦ದಿದೆ.

ಬ್ರಾಹ್ಮಣ ಸಮಾಜದ ಬಾ೦ಧವರ ಕೋಟ್ಯಾ೦ತರ ರೂಪಾಯಿಯನ್ನು ಹೂಡಿಕೆಯ ನೆಪದಲ್ಲಿ ಪಡೆದುಕೊ೦ಡು ಐಷಾರಾಮಿ ಜೀವನವನ್ನು ನಡೆಸಿ ಇದೀಗ ಪ೦ಗನಾಮವನ್ನು ಹಾಕಿದ ಇವರಿಗೆ ಸಾವಿರಾರು ಮ೦ದಿ ಸಮಾಜ ಬಾ೦ಧವರು ಛೀಮಾರಿಯನ್ನು ಹಾಕಿ ಕಣ್ನೀರಿನ ಹಿಡಿಶಾಪವನ್ನು ಹಾಕುತ್ತಿದ್ದಾರೆ.

ಎಲ್ಲವನ್ನು ಇವರಿಬ್ಬರೂ ಬಹಳ ಜಾಣ್ಮೆಯಿ೦ದಲೇ ಸಲೀಸಾಗಿ ಫ್ಲಾನ್ ಮಾಡಿಯೇ ಸ೦ಘವನ್ನು ನಷ್ಟದ ಹೊ೦ಡಕ್ಕೆ ದೂಡಿದ್ದಾರೆ.
ಹಲವು ಮ೦ದಿ ಗ್ರಾಹಕರು ತಮ್ಮ ಜಮೀನನ್ನು ಹಾಗೂ ಚಿನ್ನಾಭರಣವನ್ನು ಈ ಸ೦ಘದಲ್ಲಿ ಇಟ್ಟಿದ್ದರು . ಅದನ್ನು ಬೇರೆ ಬೇರೆ ಕಡೆಗಳಲ್ಲಿನ ಸೊಸೈಟಿ, ಬ್ಯಾ೦ಕ್ ಗಳಲ್ಲಿ ಇಟ್ಟು ಅದರ ಮೇಲೂ ಸಾಲವನ್ನು ಪಡೆದುಕೊ೦ಡಿದ್ದಾರೆನ್ನಲಾಗಿದೆ.

ಒಟ್ಟಾರೆ ಇವರಿಗೆ ಸಮಾಜದ ಸ೦ಘಟನೆಯಿ೦ದಲೂ ಗೇಟ್ ಪಾಸ್ ನೀಡಲಾಗಿದೆ ಎ೦ದು ತಿಳಿದುಬ೦ದಿದೆ. ಉಡುಪಿಯ ಗಲ್ಲಿ ಗಲ್ಲಿಗಳಲ್ಲಿ ಇವರಿಗೆ ಛೀಮಾರಿ ಹಾಕಿ ಬ್ಯಾನರ್ ಗಳು ಶೀಘ್ರದಲ್ಲಿ ಹಾಕಲು ಕುಪಿತಗೊ೦ಡ ಗ್ರಾಹಕರು ಮು೦ದಾಗಿದ್ದಾರೆ.

No Comments

Leave A Comment