Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಪ್ರೀತಿಯನ್ನು ನಿರಾಕರಿಸಿದಳೆಂದು ನಡುರಸ್ತೆಯಲ್ಲಿ ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನು ಮನಬಂದಂತೆ ಚುಚ್ಚಿ ಕೊಲೆ

ದಾವಣಗೆರೆ: ದಾವಣಗೆರೆ ನಗರದ ಬಿಜೆ ಬಡಾವಣೆಯಲ್ಲಿ ಪ್ರೀತಿಯನ್ನು ನಿರಾಕರಿಸಿದಳೆಂದು ಪಾಗಲ್ ಪ್ರೇಮಿಯೊಬ್ಬ ಹಾಡುಹಗಲೇ ನಡುರಸ್ತೆಯಲ್ಲಿ ಯುವತಿಯನ್ನು ಮನಬಂದಂತೆ ಚುಚ್ಚಿ ಸಾಯಿಸಿದ ಘಟನೆ ನಡೆದಿದೆ.

ವಿನೋಭ ನಗರದ ನಿವಾಸಿ 28 ವರ್ಷದ ಚಾಂದ್ ಸುಲ್ತಾನಾ ಮೃತ ಯುವತಿ ಎಂದು ಗುರುತಿಸಲಾಗಿದೆ. ಆರೋಪಿ ಪಾಗಲ್ ಪ್ರೇಮಿ ಚಾಂದ್ ಫೀರ್ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ನೋಭ ನಗರದ ನಿವಾಸಿ ಚಾಂದ್ ಸುಲ್ತಾನಾ ದಾವಣಗೆರೆ ವಿವಿಯಲ್ಲಿ ಎಂಕಾಂ ಪದವಿ ಮುಗಿಸಿ ತೆರಿಗೆ ಸಲಹೆಗಾರರಾದ ಕೆ.ಮಹ್ಮದ್ ಭಾಷಾ ಅವರ ಬಳಿ ಸಿ.ಎ.ಗಾಗಿ ತೆರಬೇತಿ ಪಡೆಯುತ್ತಿದ್ದಳು. ಇದೇ ಕಚೇರಿಯಲ್ಲಿನ ಹುಡುಗನ ಜೊತೆಗೆ ಇತ್ತೀಚಿಗೆ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಳು ಇದರಿಂದ ಕೆರಳಿದ ಪಾಗಲ್ ಪ್ರೇಮಿ ಚಾಂದ್ ಫೀರ್ ಆಕೆಯನ್ನು ನಡು ರಸ್ತೆಯಲ್ಲೇ ಕೊಂದು ಹಾಕಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ನಂತರ ಚಾಂದ್ ಫೀರ್ ವಿಷ ಸೇವಿಸಿದ್ದು ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಜಿಲ್ಲಾ ರಕ್ಷಣಾಧಿಕಾರಿ ಸಿಬಿ ರಿಷ್ಯಂತ್ ಘಟನಾ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment