Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮೂರನೇ ವಿವಾಹವಾದ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್

ಇಸ್ಲಾಮಾಬಾದ್, ಡಿ 23: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಮೂರನೇ ಬಾರಿಗೆ ವಿವಾಹವಾಗಿದ್ದು, ಬ್ರಿಟಿಷ್-ಪಾಕಿಸ್ತಾನಿ ನಟ ಮಿರ್ಜಾ ಬಿಲಾಲ್ ಅವರೊಂದಿಗೆ ನಿಕಾ ಮಾಡಿಕೊಂಡಿದ್ದಾರೆ.ಯುಎಸ್‌ನ ಸಿಯಾಟಲ್‌ನಲ್ಲಿ ಸರಳವಾಗಿ ನಿಕಾ ಮಾಡಿಕೊಂಡಿರುವ ರೆಹಮ್ ಖಾನ್ ಮತ್ತು ಮಿರ್ಜಾ ಬಿಲಾಲ್ ಬಳಿಕ ತಮ್ಮ ಮದುವೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿಕೊಂಡಿದ್ದಾರೆ. ಬಿಲಾಲ್ ಜೊತೆಗಿನ ಫೋಟೋ ಹಂಚಿಕೊಂಡಿರುವ ರೆಹಮ್ ಖಾನ್, ಕೊನೆಗೂ ನಾನು ನಂಬಬಹುದಾದ ವ್ಯಕ್ತಿಯನ್ನು ಕಂಡುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ರೆಹಮ್ ಖಾನ್‌ಗೆ ಇದು ಮೂರನೇ ಮದುವೆಯಾಗಿದೆ. 1993ರಲ್ಲಿ ತಮ್ಮ ಸೋದರ ಸಂಬಂಧಿಯಾಗಿದ್ದ ಬ್ರಿಟೀಷ್ ಮನೋವೈದ್ಯ ಇಜಾಜ್ ರೆಹಮಾನ್ ಅವರೊಂದಿಗೆ ಮದುವೆಯಾಗಿದ್ದರು. ಆದರೆ 2005ರಲ್ಲಿ ಈ ವಿವಾಹ ಕೊನೆಗೊಂಡಿತ್ತು. ಬಳಿಕ 2014ರಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ವರಿಸಿದ್ದರು. ಆದರೆ ಈ ಮದುವೆ ಕೇವಲ ಹತ್ತೇ ತಿಂಗಳಲ್ಲಿ ಮುರಿದು ಬಿದ್ದಿತ್ತು.

No Comments

Leave A Comment