Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಕುಂದಾಪುರ: ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಯು.ದಾಸ ಭಂಡಾರಿ ನಿಧನ

ಕುಂದಾಪುರ, ನ 23 . ಜಿಲ್ಲೆಯ ಸಿಪಿಐಎಂ ಪಕ್ಷದ ಹಿರಿಯ ಮುಖಂಡರಾದ ಯು‌. ದಾಸ ಭಂಡಾರಿ (80) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ತಡರಾತ್ರಿ ಕೋಣಿಯ ತಮ್ಮ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.

ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆಗಳನ್ನು‌ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಭೂಸುಧಾರಣೆಯ ಹೋರಾಟದ ಸಮಯದಲ್ಲಿ ದೈಹಿಕ ಹಲ್ಲೆಗೆ ಒಳಗಾಗಿದ್ದರೂ ಹೋರಾಟದಿಂದ‌ ಹಿಂದೆ ಸರಿದಿರಲಿಲ್ಲ. ವಿವಿಧ ಕಾರ್ಮಿಕ‌ ಸಂಘಟನೆಯನ್ನು ಕಟ್ಟುವಲ್ಲಿ ಶ್ರಮಿಸಿದ್ದ ಅವರು, ಸರ್ಕಾರದ ಸೌಲಭ್ಯಗಳನ್ನು‌ ಕಾರ್ಮಿಕರಿಗೆ ಕೊಡಿಸುವಲ್ಲಿ ಅವಿರತ ಹೋರಾಟವನ್ನು‌ ನಡೆಸಿದ್ದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಟನೆಯ ಸ್ಥಾಪಕಾಧ್ಯಕ್ಷರಾಗಿ, ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾಗಿ, ಕೃಷಿಕೂಲಿಕಾರರ ಸಂಘಟನೆಯಲ್ಲಿಯೂ ಸಕ್ರಿಯರಾಗಿದ್ದರು. ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿಯೂ ಸಿಪಿಐಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಅನಾರೋಗ್ಯದ ಕಾರಣದಿಂದ ಕಳೆದ ಕೆಲ‌ ದಿನಗಳಿಂದ‌ ಮನೆಯಲ್ಲೇ ವಿಶ್ರಾಂತಿ‌ ಪಡೆಯುತ್ತಿದ್ದರು. ಮೃತರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ.

ಯು ದಾಸ ಭಂಡಾರಿ ಅವರ ನಿಧನಕ್ಕೆ ಸಿಪಿಐಎಂ, ತಾಲೂಕು‌ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಸಂಘ, ಕೃಷಿಕೂಲಿಕಾಋ ಸಂಘ ಸೇರಿದಂತೆ ವಿವಿಧ ಕಾರ್ಮಿಕ‌ ಸಂಘಟನೆಗಳು‌ ಸಂತಾಪ ವ್ಯಕ್ತಪಡಿಸಿದೆ.

No Comments

Leave A Comment