Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾದ ಜೀಪು-ಚಾಲಕಿ ಸಾವು

ಚಿಕ್ಕಮಗಳೂರು, ನ 23: ಚಾಲಕಿಯ ನಿಯಂತ್ರಣ ತಪ್ಪಿ ಜೀಪು ಹಳ್ಳಕ್ಕೆ ಉರುಳಿ ಬಿದ್ದು ಚಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಅಕ್ಷತಾ(35 ) ಮೃತ ಚಾಲಕಿ. ಅಕ್ಷತಾ ಅವರು ಹೊಸಗದ್ದೆಯಿಂದ ಹೊರನಾಡಿಗೆ ಜೀಪಿನಲ್ಲಿ ಸಂಚರಿಸುತ್ತಿದ್ದ ವೇಳೆ ಮಾರ್ಗಮಧ್ಯೆ ಜೀಪು ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಜೀಪ್‌ನಲ್ಲಿ ಅಕ್ಷತಾ ಒಬ್ಬರೇ ಇದ್ದರು. ಜೀಪು ಹಳ್ಳಕ್ಕುರುಳಿದ ವಿಚಾರ ತಿಳಿದ ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಓಡಿ ಬಂದಿದ್ದು, ಅಕ್ಷತಾರನ್ನು ಮೇಲಕ್ಕೆತ್ತಿದರು. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು.

ಮೃತ ಅಕ್ಷತಾ ಅವರಿಗೆ 12 ಹಾಗೂ 6 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment