Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟಗೊಂಡ ಸ್ಥಳಕ್ಕೆ‌ ಗೃಹ ಸಚಿವರ‌ ಭೇಟಿ, ಪರಿಶೀಲನೆ

ಮಂಗಳೂರು, ನ 23. ನಗರದ ನಾಗುರಿಯಲ್ಲಿ ಇತ್ತೀಚೆಗೆ ಆಟೋದಲ್ಲಿ ಕುಕ್ಕರ್‌ಬಾಂಬ್ ಸ್ಪೋಟಗೊಂಡ ಸ್ಥಳಕ್ಕೆ ಗೃಹ ಸಚಿವ ಆರಗ‌ ಜ್ಞಾನೇಂದ್ರ ಅವರು‌ ನವೆಂಬರ್ 23ರ ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಶಾಸಕ ಡಾ. ವೈ. ಭರತ್ ಶೆಟ್ಟಿ, ಡಿಜಿಪಿ ಪ್ರವೀಣ್ ಸೂದ್, ಐಜಿಪಿ ಚಂದ್ರಗುಪ್ತ, ನಗರ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್, ಜಿಲ್ಲಾಧಿಕಾರಿ ರವಿಕುಮಾರ್‌, ಡಿಸಿಪಿ ಅನ್ಶು ಕುಮಾರ್, ದಿನೇಶ್, ಎಸಿಪಿ ಪಿ.ಎ. ಹೆಗ್ಡೆ ಮತ್ತಿತರರು ಈ ವೇಳೆ ಹಾಜರಿದ್ದರು.

ಸ್ಥಳ ಪರಿಶೀಲನೆ ಬಳಿಕ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಗೃಹ ಸಚಿವರು ಭೇಟಿ ನೀಡಿದರು. ಬಳಿಕ ಸ್ಪೋಟ ಪ್ರಕರಣದ ಆರೋಪಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‌ನ ಆರೋಗ್ಯದ ಕುರಿತು ಮಾಹಿತಿ ಪಡೆದ ಸಚಿವರು, ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

No Comments

Leave A Comment