Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಕೊಹ್ಲಿಗೆ 34ನೇ ಹುಟ್ಟುಹಬ್ಬದ ಸಂಭ್ರಮ; ಮ್ಯಾಕ್ಸ್ ವೆಲ್, ದಹನಿ ಸೇರಿದಂತೆ ಹಲವರಿಂದ ಶುಭಾಶಯಗಳ ಮಹಾಪೂರ

ನವದೆಹಲಿ: ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿಗೆ ಇಂದು 34ನೇ ಹುಟ್ಟಹಬ್ಬದ ಅಂಗವಾಗಿ ಬೆಳಗ್ಗೆಯಿಂದಲೇ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್, ಪಾಕಿಸ್ತಾನದ ಶೆಹನ್ವಾಜ್ ದಹನಿ ಸೇರಿದಂತೆ ಹಲವು ಗಣ್ಯರು ವಿರಾಟ್ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಗ್ಲೇನ್ ಮ್ಯಾಕ್ಸ್ ವೆಲ್ ಹಾಗೂ ದಹನಿ ನಿನ್ನೆಯೇ ವಿರಾಟ್ ಕೊಹ್ಲಿ ಅವರಿಗೆ ಟ್ವೀಟ್ ಮೂಲಕ ಜನ್ಮ ದಿನಕ್ಕೆ ಶುಭ ಕೋರಿದ್ದಾರೆ. ಕೊಹ್ಲಿ ಮತ್ತು ಮ್ಯಾಕ್ಸ್ ವೆಲ್ ಕಳೆದ ಎರಡು ಆವೃತ್ತಿಗಳಿಂದ ಆರ್ ಸಿಬಿ ತಂಡದಲ್ಲಿದ್ದಾರೆ. ಕ್ರಿಕೆಟ್ ನ್ನು ಸುಂದರವಾಗಿಸಿರುವ ಕೊಹ್ಲಿ ಸಹೋದರ ಸಂತೋಷವಾಗಿರು, ಜಗತ್ತನ್ನು ರಂಜಿಸು ಎಂದು ದಹನಿ ಟ್ವೀಟ್ ಮಾಡಿದ್ದಾರೆ.

ಬಿಸಿಸಿಐ ಕೂಡಾ ವಿರಾಟ್ ಕೊಹ್ಲಿ ಜನ್ಮ ದಿನಕ್ಕೆ ಶುಭ ಹಾರೈಸಿದೆ. ಟಿ-20 ವಿಶ್ವಕಪ್ ನಲ್ಲಿ ಅದ್ಬುತ ಪ್ರದರ್ಶನ ತೋರುತ್ತಿರುವ ವಿರಾಟ್ ಕೊಹ್ಲಿ, ನಾಲ್ಕು ಪಂದ್ಯಗಳಲ್ಲಿ ಇಲ್ಲಿಯವರೆಗೂ 220 ರನ್ ಗಳಿಸಿದ್ದಾರೆ.

No Comments

Leave A Comment