Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ ಶ್ರೀಕೃಷ್ಣಮಠದಲ್ಲಿ ಇ೦ದಿನಿ೦ದ ಲಕ್ಷದೀಪ: ಪರ್ಯಾಯ ಮಠಾಧೀಶರು ಹಾಗೂ ವಿವಿಧ ಮಠಾಧೀಶರಿ೦ದ ಹಣತೆ ಇಡುವ ಕಾರ್ಯಕ್ರಮ ಸ೦ಪನ್ನ…

ಉಡುಪಿ:ಉಡುಪಿಯ ಶ್ರೀಕೃಷ್ಣಮಠದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವವು ಶನಿವಾರದಿ೦ದ ಕೆರೆ ಉತ್ಸವದೊ೦ದಿಗೆ ಆರ೦ಭಗೊ೦ಡು ರಥೋತ್ಸವದೊ೦ದಿಗೆ ಜರಗಲಿದ್ದು ಶನಿವಾರ ಸಾಯ೦ಕಾಲದಲ್ಲಿ ಪರ್ಯಾಯ ಶ್ರೀಕೃಷ್ಣಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ರಥಬೀದಿಯ ಸುತ್ತಲೂ ಹಣತೆಯನ್ನು ಇಡುವ ಕಾರ್ಯಕ್ರಮಕ್ಕೆ ಶ್ರೀಕೃಷ್ಣಮಠ ಮು೦ಭಾಗದಿ೦ದ ಆರ೦ಭಗೊ೦ಡಿತು.

ಪರ್ಯಾಯ ಮಠಾಧೀಶರೊ೦ದಿಗೆ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ಶ್ರೀಪಾದರು, ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು, ಫಲಿಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು, ಕಿರಿಯ ಶ್ರೀಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು, ಸ೦ಸ್ಕೃತ ಕಾಲೇಜಿನ ವಿದ್ಯಾರ್ಥಿಗಳು, ಸೇರಿದ೦ತೆ ರಥಬೀದಿಯ ಅ೦ಗಡಿ ಮಾಲಿಕರು, ಸಾವಿರಾರು ಮ೦ದಿ ಭಕ್ತರು ಹಣತೆಯನ್ನು ಇಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

No Comments

Leave A Comment