ಮಂಡ್ಯ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರ ಎಂದು ಹೇಳಿಕೊಂಡಿರುವ ಮುಸುಕುಧಾರಿಯ ಕುರಿತು ಆತನ ಮೊದಲ ಪತ್ನಿಯೇ ನೀಡಿರುವ ಹೇಳಿಕೆಗಳು ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ ಮಾಸ್ಕ್
ನವದೆಹಲಿ: ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರು ಇಂದು ಬುಧವಾರ ಭಾರತದ ಉಪ ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಸಂಸತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಅವರು ಸೆಪ್ಟೆಂಬರ್ 9ರಂದು ನಡೆಯಲಿರುವ ಉಪ ರಾಷ್ಟ್ರಪತಿ ಚುನಾವಣೆಗೆ ಇಂಡಿಯಾ ಬಣದ ನಾಮನಿರ್ದೇಶಿತ ಅಭ್ಯರ್ಥಿಯಾಗಿ ಇಂದು ಗುರುವಾರ ನಾಮಪತ್ರ ಸಲ್ಲಿಸಿದರು. ಎನ್‌ಡಿಎ ಮೈತ್ರಿಕೂಟದಿಂದ ಸಿ.ಪಿ. ರಾಧಾಕೃಷ್ಣನ್ ವಿರುದ್ಧ ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಚುನಾವಣೆಗೆ ಔಪಚಾರಿಕ ಪ್ರವೇಶ ಇದಾಗಿದೆ.
ಬೆಂಗಳೂರು: 2018ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತಗಳನ್ನು ಖರೀದಿಸಿದ್ದಾರೆ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರು ಆರೋಪಿಸಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಬಿಜೆಪಿ ನಾಯಕರ ನಿಯೋಗ ಗುರುವಾರ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮಾಜಿ ಎಂಎಲ್‌ಸಿ ಮತ್ತು ಮುಖ್ಯ ವಕ್ತಾರ ಸಿ.ಎನ್.
ನವದೆಹಲಿ: ಒಂದು ತಿಂಗಳ ಕಾಲ ನಡೆದ ಸಂಸತ್ ಮುಂಗಾರು ಅಧಿವೇಶನಕ್ಕೆ ಗುರುವಾರ ತೆರೆ ಬಿದಿದ್ದು, ಪ್ರತಿಪಕ್ಷಗಳ ಪ್ರತಿಭಟನೆ, ಮುಂದೂಡಿಕೆ ಮತ್ತು ಸಭಾತ್ಯಾಗದ ನಡುವೆಯೇ ಲೋಕಸಭೆಯಲ್ಲಿ ಹನ್ನೆರಡು ಮಸೂದೆಗಳು ಮತ್ತು ರಾಜ್ಯಸಭೆಯಲ್ಲಿ 15 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಈ ಬಾರಿಯ ಮುಂಗಾರು ಅಧಿವೇಶನ ಜುಲೈ 21 ರಂದು ಆರಂಭವಾಯಿತು. ಎರಡೂ ಸದನಗಳಲ್ಲಿ ಆಪರೇಷನ್ ಸಿಂಧೂರ್
ಉಡುಪಿಯ ಪ್ರಸಿದ್ಧ ಜವಳಿಮಳಿಗೆ ಕುಲ್ಯಾಡಿಕಾರ್ಸ್ ನೂತನ್ ಸಿಲ್ಕ್ ನ ಕುಲ್ಯಾಡಿ ರಾಮಚ೦ದ್ರ ಪೈಯವರ ಧರ್ಮಪತ್ನಿಯಾಗಿದ್ದ ಸೀತಾ ಪೈ(60)ರವರು ಅಲ್ಪಕಾಲ ಅಸೌಖ್ಯದಿ೦ದಾಗಿ ಬುಧವಾರದ೦ದು ದೈವಾಧೀನರಾಗಿದ್ದಾರೆ. ಮೃತರು ಪತಿ,ಪುತ್ರರಿಬ್ಬರು ಮತ್ತು ಪುತ್ರಿಯೊಳನ್ನು ಹಾಗೂ ಕುಟು೦ಬದ ಸದಸ್ಯರನ್ನು ಅಗಲಿದ್ದಾರೆ
ಮಂಗಳೂರು :ಪಾಲಿಕೆ ಆಡಳಿತ ನಿದ್ರಿಸುತ್ತಿರುವಾಗ ಸಾಮಾನ್ಯ ನಾಗರಿಕರು ಸಮಾಜದ ಉನ್ನತಿಗೆ ಕೈಜೋಡಿಸುವ ದೃಷ್ಟಾಂತಗಳು ಜನರಿಂದ ಶ್ಲಾಘಿಸಲ್ಪಡುತ್ತಿದೆ. ಕರಾವಳಿ ವೃತ್ತದ ಬಳಿ, ಆಟೋ ಚಾಲಕ ಬೂಬಣ್ಣ ಮಾದರಿ ಕೆಲಸವೊಂದನ್ನು ಮಾಡಿದ್ದಾರೆ. ಸರಕಾರ ಅಥವಾ ಮಹಾನಗರ ಪಾಲಿಕೆ ಮಾಡಬೇಕಾದ ಕೆಲಸವನ್ನು, ತಮ್ಮ ದೈನಂದಿನ ದುಡಿಮೆಯಿಂದ ಬದುಕು ಸಾಗಿಸುತ್ತಿರುವ ಬೂಬಣ್ಣ ತಮ್ಮ ಹೊಣೆಗಾರಿಕೆಯಂತೆ ನಿರ್ವಹಿಸಿದ್ದು,
ಉಡುಪಿ:ಉದ್ಯಮಿ ಕೃಷ್ಣರಾಜ್ ಹೆಗ್ಡೆ (45) ಆತ್ರಾಡಿಯಲ್ಲಿರುವ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕೃತ್ಯಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಬೈಲೂರು ಮೂಲದ ಕೃಷ್ಣರಾಜ್ ಹೆಗ್ಡೆ ಆತ್ರಾಡಿಯಲ್ಲಿ ವಾಸಿಸುತ್ತಿದ್ದರು. ಅವರ ತಾಯಿ, ಪತ್ನಿ ಮತ್ತು ಒಬ್ಬ ಮಗ ಇದ್ದಾರೆ. ಮಣಿಪಾಲದಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದ
ಮುಂಬೈ: ವರುಣನ ಅಬ್ಬರಕ್ಕೆ ಮಹಾರಾಷ್ಟ್ರ ರಾಜ್ಯ ತತ್ತರಿಸಿದೆ. ಕಳೆದ ಎರಡು ದಿನಗಳಿಂದ ಅನೇಕ ಜಿಲ್ಲೆಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು, ಆರು ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮಂಗಳವಾರ ರಾಜಧಾನಿ ಮುಂಬೈಯಲ್ಲಿಯೂ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ವಿಪತ್ತು ನಿರ್ವಹಣಾ ಇಲಾಖೆಯೊಂದಿಗೆ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದ ಮುಖ್ಯಮಂತ್ರಿ
ಜೈಪುರ: ರಾಜಸ್ಥಾನದ ಮಣಿಕಾ ವಿಶ್ವಕರ್ಮ 2025 ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ, ಮುಂದಿನ ನವೆಂಬರ್ 21ರಂದು ಥೈಲ್ಯಾಂಡ್‌ನಲ್ಲಿ ನಡೆಯಲಿರುವ 74 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಶ್ರೀ ಗಂಗಾನಗರದ ಮಣಿಕಾ ಈ ಗೆಲುವನ್ನು ರಾಜಸ್ಥಾನ ಮತ್ತು ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ ಎಂದು