ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ನೆವಾಡಾ: ಫೆ ,26. ಅಮೇರಿಕಾದ ಉತ್ತರ ನೆವಾಡಾದ ಪರ್ವತ ಪ್ರದೇಶದಲ್ಲಿ ವಿಮಾನವೊಂದು ಪತನಗೊಂಡು ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ನೆ ವಾಡಾದ ಸ್ಟೇಜ್‌ಕೋಚ್ ಬಳಿ ಶುಕ್ರವಾರ ರಾತ್ರಿ 9:15 ರ ಸುಮಾರಿಗೆ ವೈದ್ಯಕೀಯ ವಿಮಾನ ಪತನವಾಗಿದೆ ಮೃತರಲ್ಲಿ ಪೈಲಟ್, ಫ್ಲೈಟ್ ನರ್ಸ್, ಫ್ಲೈಟ್ ಪ್ಯಾರಾಮೆಡಿಕ್, ರೋಗಿ ಮತ್ತು ರೋಗಿಯ ಕುಟುಂಬದ ಸದಸ್ಯರು ಸೇರಿದ್ದಾರೆ