ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಸೌತ್‌ಫೋರ್ಕ್ ಡೈರಿ ಫಾರ್ಮ್‌ನಲ್ಲಿ ಸ್ಫೋಟ -18,000ಕ್ಕೂ ಅಧಿಕ ಹಸುಗಳು ಮೃತ್ಯು
ವಾಷಿಂಗ್ಟನ್: ಏ 14. ಅಮೇರಿಕಾದ ಟೆಕ್ಸಾಸ್ ನಲ್ಲಿ ಸೌತ್‌ಫೋರ್ಕ್ ಡೈರಿ ಫಾರ್ಮ್‌ನಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದಾಗಿ ಅದರಲ್ಲಿದ್ದ ಸುಮಾರು 18,000 ಕ್ಕೂ ಅಧಿಕ ಹಸುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಡೈರಿಯಲ್ಲಿ ಸ್ಫೋಟವಾದ ಬೆನ್ನಲ್ಲೇ ಬೆಂಕಿ ಹೊತ್ತಿ ಉರಿದಿದ್ದು, ಈ ಘಟನೆಯಲ್ಲಿ ಹಸುಗಳು ಸಜೀವ ದಹನಗೊಂಡಿವೆ. ಆದರೆ ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಇನ್ನು ಘಟನೆಯ ಬಗ್ಗೆ ಡೈರಿಯ ಮಾಲಿಕರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.
ಫಾರ್ಮ್ ನಲ್ಲಿ ಸಿಲುಕಿಕೊಂಡಿದ್ದ ಒಬ್ಬ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.