ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಜಕಾರ್ತ: ಜಾಗತಿಕ ಬೆಳವಣಿಗೆಯಲ್ಲಿ ಆಸಿಯಾನ್ ರಾಷ್ಟ್ರಗಳ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಡೋನೇಷ್ಯಾದ ಜಕಾರ್ತದಲ್ಲಿ ಗುರುವಾರ ಆಸಿಯಾನ್- ಭಾರತ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆಸಿಯಾನ್ ವಿಷಯಗಳು: ಬೆಳವಣಿಗೆಯ ಕೇಂದ್ರಬಿಂದು ಈ ವರ್ಷದ ಥೀಮ್ ಆಗಿದೆ. ಜಾಗತಿಕವಾಗಿ ಪ್ರಮುಖ ಪಾತ್ರ ವಹಿಸುವುದರಿಂದ ಆಸಿಯಾನ್ ವಿಷಯಗಳು ಇಲ್ಲಿ ಪ್ರಮುಖವಾಗಿವೆ.

ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷೆಯ ಸೂರ್ಯ ಅಧ್ಯಯನಕ್ಕಾಗಿ ಕಳುಹಿಸಿರುವ ಆದಿತ್ಯಾ ಎಲ್ 1 ಬಾಹ್ಯಾಕಾಶ ನೌಕೆ ಸೂರ್ಯನ ಕಕ್ಷೆಯತ್ತ ದಾಪುಗಾಲಿರಿಸಿದ್ದು, ಇದೀಗ ಮಾರ್ಗ ಮಧ್ಯೆಯೇ ಸೆಲ್ಫಿ ಕ್ಲಿಕ್ಕಿಸಿ ಭೂಮಿ, ಚಂದ್ರನ ಫೋಟೋ ರವಾನಿಸಿದೆ. ಹೌದು.. ಆದಿತ್ಯ-ಎಲ್ 1, ಇಂದು ಭೂಮಿಯ ಚಿತ್ರಗಳನ್ನು ಕಳುಹಿಸಿದ್ದು, ಭೂಮಿಯಿಂದ ಸುಮಾರು 1.5

ನವದೆಹಲಿ: ವಿಶೇಷ ಭದ್ರತಾ ಪಡೆ(ಎಸ್‌ಪಿಜಿ) ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ ಅವರು ಬುಧವಾರ ಗುರುಗ್ರಾಮ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. 1987ರ ಬ್ಯಾಚ್‌ನ ಕೇರಳ ಕೇಡರ್‌ನ ಐಪಿಎಸ್ ಅಧಿಕಾರಿ ಸಿನ್ಹಾ ಅವರು ಕಳೆದ ಮೇ 31 ರಂದು ನಿವೃತ್ತಿಯಾಗಿದ್ದು, ಅವರ ಸೇವೆಯನ್ನು ಒಂದು ವರ್ಷ ವಿಸ್ತರಿಸಲಾಗಿತ್ತು. ಯಕೃತ್ತು ಸಂಬಂಧಿತ ಕಾಯಿಲೆಯಿಂದ

ಮುಂಬೈ: 'ಒಂದು ರಾಷ್ಟ್ರ, ಒಂದು ಚುನಾವಣೆ' ಸಿದ್ದತಾ ಕಾರ್ಯವನ್ನು ಜೂನ್ ತಿಂಗಳಲ್ಲಿಯೇ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆರಂಭಿಸಿದ್ದಾರೆ. ಸಂಸತ್ತಿನ ಹೊಸ ಕಟ್ಟಡ ಉದ್ಘಾಟಿಸಿದ ನಾಲ್ಕು ದಿನಗಳ ನಂತರ ಜೂನ್ 2 ರಂದು ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ

ನವದೆಹಲಿ: ರಾಷ್ಟ್ರಪತಿಗಳ ಕಚೇರಿಯಿಂದ ಜಿ20 ಪ್ರತಿನಿಧಿಗಳಿಗೆ ಕಳುಹಿಸಲಾದ ಔತಣಕೂಟದ ಆಮಂತ್ರಣದಲ್ಲಿ ದ್ರೌಪದಿ ಮುರ್ಮು ಅವರನ್ನು 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಕರೆಯಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಟ್ವಿಟರ್‌ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸಂವಿಧಾನ ಒಂದನೇ ವಿಧಿಯಡಿ,  ಭಾರತ, ಅದು ಇಂಡಿಯಾ, ರಾಜ್ಯಗಳ ಒಕ್ಕೂಟ ಎಂದು

ನವದೆಹಲಿ:ಚಂದ್ರಯಾನ-3 ಕಾರ್ಯಾಚರಣೆಯ ವಿಕ್ರಮ್ ಲ್ಯಾಂಡರ್ ಮತ್ತೆ ಚಂದ್ರನ ಮೇಲೆ ಇಳಿದಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಹೇಳಿದೆ. ಈ ಕುರಿತು ಟ್ವೀಟ್ ಮಾಡಿರುವ ಇಸ್ರೋ,ತನ್ನ ಯೋಜನೆಯ ಉದ್ದೇಶಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದೆ.ಭಾನುವಾರ ನಡೆದ ಚಂದ್ರಯಾನ-3 ಲ್ಯಾಂಡರ್ ಹಾಪ್ ಪರೀಕ್ಷೆ (ಮತ್ತೊಂದು ಕಡೆಗೆ ಜಿಗಿತ) ಯಶಸ್ವಿಯಾಗಿದೆ. ಆಜ್ಞೆಯ ಮೇರೆಗೆ ವಿಕ್ರಮ್ ಲ್ಯಾಂಡರ್ ತನ್ನ

ನವದೆಹಲಿ: ಮಧ್ಯಪ್ರದೇಶದಲ್ಲಿ ತಮ್ಮದೇ ಬಿಜೆಪಿ ಪಕ್ಷ ಹಮ್ಮಿಕೊಂಡಿರುವ ಜನಾಶೀರ್ವಾದ್ ಯಾತ್ರೆಗೆ ಆಹ್ವಾನಿಸದಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದ ಬಿಜೆಪಿ ಫೈರ್ ಬ್ರಾಂಡ್ ನಾಯಕಿ ಉಮಾಭಾರತಿ ಇದೀಗ ಯಾತ್ರೆಗೆ ಆಹ್ವಾನ ನೀಡಿದರೂ ಹೋಗುವುದಿಲ್ಲ ಎಂದು ಖಜಕ್ ಆಗಿ ಹೇಳಿದ್ದಾರೆ. ಉಮಾಭಾರತಿ ಅವರ ಹೇಳಿಕೆ ಪಕ್ಷದೊಳಗೆ ಬಿರುಗಾಳಿ ಎಬ್ಬಿಸಿದ್ದು, ಅವರು ಯಾತ್ರೆಯ ಸಮಯದಲ್ಲಿ ಹಾಜರಿದ್ದರೆ ಬಿಜೆಪಿ ನಾಯಕರು

ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಮೊದಲ ಸೂರ್ಯ ಯೋಜನೆ ಆದಿತ್ಯಾ ಎಲ್ 1  ನ ಮೊದಲ ಹಂತದ ಕಾರ್ಯಾಚರಣೆ ಯಶಸ್ವಿಯಾಗಿದೆ. ಹೌದು.. ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಏರಿಸುವ ಮೊದಲ ಹಂತದ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

ಮುಂಬೈ: ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಿನ್ನೆ ಶನಿವಾರ ಹಿಂಸಾಚಾರ ಸಂಭವಿಸಿದ್ದು, ಸರ್ಕಾರಿ ಉದ್ಯೋಗಗಳಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ಕೋರಿ ಪ್ರತಿಭಟನಾಕಾರರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಂಬಾಡ್‌ನಲ್ಲಿ ಟ್ರಕ್‌ಗೆ ಬೆಂಕಿ ಹಚ್ಚಲಾಗಿದ್ದು, ಇತರೆ ವಾಹನಗಳು ಧ್ವಂಸಗೊಂಡಿವೆ. ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ ನಂತರ ಶುಕ್ರವಾರವೂ ಹಿಂಸಾಚಾರ ಭುಗಿಲೆದ್ದಿತು

ನವದೆಹಲಿ: ಚಂದ್ರಯಾನ-3 ಮಿಷನ್ ನ ಪ್ರಗ್ಯಾನ್ ರೋವರ್ ತನ್ನ ಕೆಲಸವನ್ನು ಪೂರ್ಣಗೊಳಿಸಿದೆ. ಪ್ರಗ್ಯಾನ್ ರೋವರ್ ಅನ್ನು ಸ್ಲೀಪ್ ಮೋಡ್‌ನಲ್ಲಿ ಇರಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇದೇ ವೇಳೆ ಅದರ ಪೇಲೋಡ್‌ಗಳಾದ APXS ಮತ್ತು LIBS ಎರಡನ್ನೂ ಸ್ಥಗಿತಗೊಳಿಸಲಾಗಿದೆ. ಲ್ಯಾಂಡರ್ ಮೂಲಕ ಭೂಮಿಯ ಮೇಲೆ ಪೇಲೋಡ್‌ನ ಎಲ್ಲಾ ಡೇಟಾವನ್ನು ಸ್ವೀಕರಿಸಲಾಗಿದೆ ಎಂದು