ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ 18 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿರುವ ಒಮರ್ ಅಬ್ದುಲ್ಲಾ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರ ತಂದೆ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಮಂಗಳವಾರ ಘೋಷಿಸಿದ್ದಾರೆ. ಮಿತ್ರಪಕ್ಷ ಕಾಂಗ್ರೆಸ್ ಜೊತೆಗೂಡಿ ಕೇಂದ್ರಾಡಳಿತ ಪ್ರದೇಶದಲ್ಲಿ ಪಕ್ಷ ಸರ್ಕಾರ ರಚಿಸಲಿದೆ

ತೀವ್ರ ವಾಗ್ವಾದದ ವೇಳೆ ಶಿರೋಮಣಿ ಅಕಾಲಿದಳದ ಮುಖಂಡರೊಬ್ಬರು ಹಾರಿಸಿದ ಗುಂಡು ತಗುಲಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರೊಬ್ಬರು ಗಾಯಗೊಂಡಿದ್ದಾರೆ. ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.ಗಾಯಗೊಂಡ ಸ್ಥಳೀಯ ಎಎಪಿ ನಾಯಕ ಮನದೀಪ್ ಸಿಂಗ್ ಬ್ರಾರ್ ಅವರನ್ನು ಪಂಜಾಬ್‌ನ ಜಲಾಲಾಬಾದ್ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು

ಮುಂಬೈ: ವಾಣಿಜ್ಯ ನಗರಿ ಮುಂಬೈನ ಚೆಂಬೂರ್ ನಲ್ಲಿ ಎರಡು ಅಂತಸ್ತಿನ ಅಂಗಡಿ ಮತ್ತು ವಸತಿ ಕಟ್ಟಡದಲ್ಲಿ ಭಾನುವಾರ ಬೆಳಗ್ಗೆ ಅಗ್ನಿ ಅವಘಡ ಉಂಟಾಗಿ ಏಳು ವರ್ಷದ ಬಾಲಕಿ ಸೇರಿದಂತೆ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೆಂಬೂರ್ ಪ್ರದೇಶದ ಸಿದ್ಧಾರ್ಥ್ ಕಾಲೋನಿಯಲ್ಲಿ ಇಂದು ಮುಂಜಾನೆ 5.20ರ

ಇಸ್ರೇಲ್ ಮೇಲೆ ಕ್ಷಿಪಣಿಗಳ ಮೂಲಕ ಇರಾನ್‌ ದಾಳಿ ನಡೆಸಿದ ಬೆನ್ನಲ್ಲೇ ವಿಮಾನ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.ಸ್ವಿಜರ್ಲ್ಯಾಂಡ್ ರಾಜಧಾನಿ ಜ್ಯೂರಿಕ್‌ನಿಂದ ದುಬೈಗೆ ಬಂದು ದುಬೈನಿಂದ ಬೆಂಗಳೂರಿಗೆ ಕನ್ನಡಿಗರು ಬರುತ್ತಿದ್ದರು. ಈ ವೇಳೆ ಇರಾನ್‌ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಕ್ಷಿಪಣಿ ದಾಳಿಯ ಬೆನ್ನಲ್ಲೇ ವಿಮಾನವನ್ನು ಟರ್ಕಿಯ ಇಸ್ತಾಂಬುಲ್‌ನಲ್ಲಿ ಲ್ಯಾಂಡ್‌ ಮಾಡಲಾಗಿದೆ.

ನವದೆಹಲಿ: ಆಸ್ತಿ ಧ್ವಂಸ ವಿಚಾರದಲ್ಲಿ ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಮೀಸಲಾಗಿರದೆ ಎಲ್ಲಾ ಧರ್ಮದ ನಾಗರಿಕರಿಗೆ ಅನ್ವಯವಾಗುವ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಕೋರ್ಟ್ ನಿರ್ದೇಶನಗಳು ಭಾರತದಾದ್ಯಂತ ಅನ್ವಯಿಸುತ್ತವೆ ಹೊರತು ಒಬ್ಬ ವ್ಯಕ್ತಿ ಆರೋಪಿ ಅಥವಾ ಅಪರಾಧಿ ಎಂಬ ಕಾರಣಕ್ಕೆ ಅದು ಆಸ್ತಿ ಧ್ವಂಸಕ್ಕೆ ಆಧಾರವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ನಮ್ಮದು

ಮಾಜಿ ರಕ್ಷಣಾ ಸಚಿವ ಶಿಗೆರು ಇಶಿಬಾ ಅವರು ಜಪಾನ್‌ನ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಫ್ಯೂಮಿಯೊ ಕಿಶಿಡಾ ಅವರ ಉತ್ತರಾಧಿಕಾರಿಯಾಗಲು ಒಂಬತ್ತು ಅಭ್ಯರ್ಥಿಗಳ ನಡುವೆ ನಡೆದ ಪೈಪೋಟಿಯಲ್ಲಿ ಶಿಗೆರು ಗೆಲುವು ಸಾಧಿಸಿದ್ದಾರೆ. ಅಕ್ಟೋಬರ್ 1 ರಂದು ಇಶಿಬಾ ಜಪಾನ್‌ನ 102 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ, ಅದೇ ದಿನ

ಕೋಲ್ಕತಾ: ಬಾಗ್ದಾದ್‌ನಿಂದ ಚೀನಾದ ಗುವಾಂಗ್‌ಝೌಗೆ ತೆರಳುತ್ತಿದ್ದ ಇರಾಕಿ ಏರ್‌ವೇಸ್ ವಿಮಾನವೊಂದರಲ್ಲಿ ಪ್ರಯಾಣಿಕರೊಬ್ಬರು ಹಠಾತ್ತನೆ ಅಸ್ವಸ್ಥಗೊಂಡ ನಂತರ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ಬಳಿಕ 16 ವರ್ಷದ ಇರಾಕಿನ ಯುವತಿಯನ್ನು ನಗರದ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದಾಗ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. 100 ಪ್ರಯಾಣಿಕರು ಮತ್ತು 15 ಸಿಬ್ಬಂದಿಯನ್ನೊಳಗೊಂಡ IA-473 ವಿಮಾನ ಮಾರ್ಗ

ತ್ರಿಶೂರ್: ತ್ರಿಶೂರ್ ನಲ್ಲಿ ರಾತ್ರೋರಾತ್ರಿ 5 ಮಂದಿ ಇದ್ದ ದರೋಡೆ ಗ್ಯಾಂಗ್ ಎಸ್ ಬಿ ಐ ಎಟಿಎಂ ಲೂಟಿ ಮಾಡಿ 65 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿದೆ. ಒಂದೇ ಬಾರಿಗೆ 3 ಬೇರೆ ಬೇರೆ ಪ್ರದೇಶಗಳ ಎಟಿಎಂ ಗಳಲ್ಲಿ ತಡ ರಾತ್ರಿ ಈ ದರೋಡೆ ನಡೆದಿದೆ. ಮಧ್ಯರಾತ್ರಿ 2: 30 ರ

ಸಮಷ್ಟಿಪುರ: ಜಯನಗರ್-ನವದೆಹಲಿ ನಡುವಿನ ಸ್ವತಂತ್ರ ಸೇನಾನಿ ಎಕ್ಸ್ ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಬಿಹಾರದ ಸಮಷ್ಟಿಪುರದ ಬಳಿ ಈ ಘಟನೆ ನಡೆದಿದೆ ಎಂದು ಇಸಿಆರ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ವ್ಯಕ್ತಿ ಗಾಯಗೊಂಡಿಲ್ಲ ಆದರೆ ಪ್ಯಾಂಟ್ರಿ ಕಾರು ಸೇರಿದಂತೆ ಮೂರು ಕೋಚ್‌ಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು

ದೆಹಲಿ: ದೆಹಲಿಯ ಎಂಟನೇ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ನಾಯಕಿ ಆತಿಶಿ ಇಂದು  ಅಧಿಕಾರ ವಹಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ಭಗವಾನ್ ರಾಮನ ಪಾದಗಳನ್ನು ಸಿಂಹಾಸನದ ಮೇಲೆರಿಸಿ ಭರತ ಆಡಳಿತ ನಡೆಸಿದ ರೀತಿಯಲ್ಲೇ ಮುಂದಿನ ನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿ ನಾನು ಕಾರ್ಯ ನಿರ್ವ ಹಿಸುತ್ತೇನೆ. ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನಸಭೆ