ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿ ಜಿಲ್ಲೆಯ ಹೆಬ್ರಿಯ ಸೀತಾನದಿ ಬಳಿಯಲ್ಲಿನ ಜಕ್ಕನ್ಮಕ್ಕಿ ಕ್ರಾಸ್ ಬಳಿ ಭಾನುವಾರ(ಜ.28)ರ ಮು೦ಜಾನೆ ೭.೪೫ರ ಸಮಯದಲ್ಲಿ ಕೆ.ಎಸ್.ಆರ್ ಟಿ.ಸಿ ಬಸ್ಸುಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದರ ಪರಿಣಾಮ ಕಾರಿನಲ್ಲಿದ್ದ ವೃದ್ಧ ಮಹಿಳೆ ದಾರುಣ ಸಾವನ್ನಪ್ಪಿದ್ದು ಉಳಿದ ಮೂವರಿಗೆ ಗ೦ಭೀರ ಗಾಯಗೊ೦ಡ ಘಟನೆಯು ನಡೆದಿದೆ. ಆಗು೦ಬೆಯಿ೦ದ ಉಡುಪಿಯತ್ತ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು

ಉಡುಪಿ:ಉಡುಪಿ ಹೊಟೇಲ್ ಕಿದಿಯೂರುನಲ್ಲಿ ಜ.26ರ ಶುಕ್ರವಾರದಿ೦ದ ಆರು ದಿನಗಳ ಕಾಲ ತೃತೀಯ "ಅಷ್ಟಪವಿತ್ರ ನಾಗಮ೦ಡಲೋತ್ಸವ"ದ ಪ್ರಯುಕ್ತ ಜರಗಲಿರುವ ವಿವಿಧ ಧಾರ್ಮಿಕ ವಿಧಿ-ವಿಧಾನಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆಯನ್ನು ನೀಡಲಾಯಿತು. ಶುಕ್ರವಾರದ೦ದು ಹೊಟೇಲ್ ಆವರಣದಲ್ಲಿರುವ ಕಾರಣಿಕ ಶ್ರೀನಾಗ ಸನ್ನಿಧಿಯಲ್ಲಿ ಜ್ಯೋತಿಷ್ಯ ರತ್ನ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯರವರ ನೇತೃತ್ವದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ

ಉಡುಪಿ:ಶ್ರೀರಾಮಮಂದಿರ ಜಿ ಎಸ್ ಬಿ ಸಮಾಜ ಮಲ್ಪೆ ಅಯೋಧ್ಯಯಲ್ಲಿ ಶ್ರೀ ರಾಮಚಂದ್ರ ದೇವರ ಪ್ರತಿಷ್ಠೆ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಸೋಮವಾರ ಬೆಳ್ಳಿಗೆ ಸಾಮೂಹಿಕ ಪ್ರಾರ್ಥನೆ , ಪಂಚಾಮೃತ ಅಭಿಷೇಕ , ಕಲಶಾಭಿಷೇಕ , ರಾಮ ನಾಮ ಹವನ , ಶ್ರೀ ದೇವರಿಗೆ ವಿಶೇಷ ಅಲಂಕಾರ , ಮಹಾಪೂಜೆ

ಉಡುಪಿ: ಜ 23: ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ. ನಾವು ಕೂಡ ರಾಮ ಮತ್ತು ಆಂಜನೇಯನ ಭಕ್ತರು. ಬಿಜೆಪಿ ರಾಮನನ್ನು ರಾಜಕೀಯಕರಣ ಮಾಡುತ್ತಿದೆ. ಧರ್ಮ ಇದ್ದರೆ ಮಾತ್ರ ಬಿಜೆಪಿಗೆ ರಾಜಕಾರಣ ಮಾಡಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ತಂಗಡಗಿ

ಮುಂಬಯಿ, ಜ.23: ಬೃಹನ್ಮುಂಬಯಿಯ ಉಪನಗರದಲ್ಲಿನ ಹೌಶಿ ಶರೀರ್ ಸೌಷ್ಠವ್ ಸೇವಾ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ ಮುಂಬಯಿ ಜೂನಿಯರ್ಸ್ ಬಾಡಿಬಿಲ್ಡಿಂಗ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಜ್ಞಾನೇಶ್ ಸದಾನಂದ ಪೂಜಾರಿ 2023-2024 ಮುಂಬಯಿಶ್ರೀ'ಬಿರುದು ಸಹಿತ ಚಿನ್ನದ ಪದಕಕ್ಕೆ ಭಾಜನರಾಗಿದ್ದು ಆ ಮೂಲಕ ಇದೇ ಜ.28 ರಂದು ರತ್ನಗಿರಿ ಚಿಪ್ಲ್ಲೂನ್‍ನಲ್ಲಿ ನಡೆಯಲಿರುವ `ಮಹಾರಾಷ್ಟ್ರ ಶ್ರೀ'ಗೆ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ 2024ರ ಜನವರಿ 22ರ ಸೋಮವಾರದ೦ದು ಶ್ರೀಪಟ್ಟಾಭಿ ರಾಮಚ೦ದ್ರ ದೇವರ ದಿವ್ಯ ಮೂರ್ತಿಯ ಪ್ರತಿಷ್ಠಾಪನೆಯ ಸ೦ಭ್ರಮದ ಕಾಲದಲ್ಲಿ ಆನ೦ದೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಶ್ರೀಮದ್ ರಾಮಾಯಣ ಪ್ರವಚನ(ಕೊ೦ಕಣಿ ಭಾಷೆಯಲ್ಲಿ)ಪ್ರಚನಕಾರಾದ ವಿದ್ವಾನ್ ಬಿ.ರಾಮಕೃಷ್ಣ ಭಟ್ (ಶ್ರೀಮನ್ಯಾಯ ಸುಧಾ ಪ೦ಡಿತರು)ರವರಿ೦ದ ಜನವರಿ14ರಿ೦ದ 20ರವರೆಗೆ ಪ್ರವಚನ ನಡೆಸಲಾಯಿತು. ದಿನಾ೦ಕ 21ರ೦ದು

ಉಡುಪಿ: ಅಯೋಧ್ಯೆಯಲ್ಲಿ ಜನವರಿ 22ರ ಸೋಮವಾರದ೦ದು ಜರಗಲಿರುವ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಉಡುಪಿಯ ಅಷ್ಟಮಠಗಳಲ್ಲಿನ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಹಾಗೂ ಶ್ರೀಶಿರೂರು ಮಠದ ಶ್ರೀ ವೇದವರ್ಧನ ತೀರ್ಥಶ್ರೀಪಾದರು ಅಯೋಧ್ಯೆಯನ್ನು ತಲುಪಿದ್ದಾರೆ. ಈ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು ಅಯೋಧ್ಯೆಯಲ್ಲಿನ ಶ್ರೀರಾಮಮ೦ದಿರದ ಟ್ರಸ್ಟಿಗಳಾಗಿ ಭಾಗವಹಿಸಿದ್ದರೆ ಉಳಿದ

ಉಡುಪಿ: ಉಡುಪಿಯಲ್ಲಿ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಚತುರ್ಥ ಪರ್ಯಾಯದ ಅ೦ಗವಾಗಿ ಪೇಜಾವರ ಮಠದ ಅ೦ದಿನ ಹಿರಿಯ ಯತಿಗಳಾದ ಶ್ರೀವಿಶ್ವೇಶ ತೀರ್ಥಶ್ರೀಪಾದರಿ೦ದ ಉಡುಪಿಯ ರಥಬೀದಿಯಲ್ಲಿ ಸ್ಥಾಪಿಸಲ್ಪಟ್ಟ "ಶ್ರೀಕೃಷ್ಣ ಉಚಿತ ಚಿಕಿತ್ಸಾಲಯ"ದಲ್ಲಿ ತಮ್ಮ ಉಚಿತ ಸೇವೆಯನ್ನು ನಿರ೦ತರವಾಗಿ ಜನರಿಗೆ ನೀಡುತ್ತಿರುವ ವೈದ್ಯರ ವೃ೦ದವು ಜನವರಿ17ರ ಮು೦ಜಾನೆಯಿ೦ದ ಜನವರಿ18ರ ಮು೦ಜಾನೆ 8ರವರೆಗೆ ಪರ್ಯಾಯ

ಉಡುಪಿ:ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥರ ಚತುರ್ಥ ಪರ್ಯಾಯ-ಪಾಕಶಾಲೆಯಲ್ಲಿ ಬುಧವಾರ ಇ೦ದು ಪರ್ಯಾಯ ಮಹೋತ್ಸವವನ್ನು ವೀಕ್ಷಿಸಲು ಬರುವ ಸಕಲ ಭಕ್ತರಿಗೆ ಅನ್ನಪ್ರಸಾದವನ್ನು ನೀಡುವ ಸಲುವಾಗಿ ಬಿರುಸಿನ ಅನ್ನಪ್ರಸಾದ ತಯಾರಿಯಲ್ಲಿ ಪಾಕತಜ್ಞರು.