ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಹೈದರಾಬಾದ್: ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್‌ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಶುಕ್ರವಾರ ತಿಳಿಸಿದ್ದಾರೆ. ರಜನಿಕಾಂತ್ ಮತ್ತು ಪವನ್ ಕಲ್ಯಾಣ ಅವರಂತಹ ಟಾಪ್ ನಟರ ಜೊತೆ ನಟಿಸಿದ್ದ ಖುಷ್ಬೂ ಸುಂದರ್ ಚಿತ್ರರಂಗದಲ್ಲಿ ಭಾರಿ ಹೆಸರು ಮಾಡಿದ್ದಾರೆ. ಅವರ ಆಕರ್ಷಕ ನೋಟ ಮತ್ತು ಪ್ರಾಮಾಣಿಕ ಅಭಿನಯದಿಂದಾಗಿ ಅನೇಕರು ಅವರನ್ನು

ಬೆಂಗಳೂರು: ಕಷ್ಟದ ಸಮಯದಲ್ಲಿ ನನ್ನ ಜೊತೆಗಿದ್ದರು. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ನಾನು ಬೆಂಬಲ ನೀಡುತ್ತೇನೆಂದು ನಟ ಕಿಚ್ಚ ಸುದೀಪ್ ಅವರು ಬುಧವಾರ ಹೇಳಿದ್ದಾರೆ. ನಟ ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿಯೇ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ

ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಇಂದು ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಹಾಲಿವುಡ್‌ನಲ್ಲಿಯೂ ತನ್ನ ಸದೃಢ ನಟನೆಯಿಂದ ವಿಶೇಷ ಖ್ಯಾತಿ ಗಳಿಸಿದ್ದಾರೆ. ಶೀಘ್ರದಲ್ಲೇ ನಟಿ ಪ್ರಿಯಾಂಕಾ ಚೋಪ್ರಾ ಅವರು ರಿಚರ್ಡ್ ಮ್ಯಾಡೆನ್ ಅಭಿನಯದ ರುಸ್ಸೋ ಬ್ರದರ್ಸ್ ಸಿಟಾಡೆಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಪ್ರಿಯಾಂಕಾ ಅನೇಕ ಅಂತಾರಾಷ್ಟ್ರೀಯ ಪ್ರಾಜೆಕ್ಟ್‌ಗಳಲ್ಲಿ ಸಹ ಭಾಗವಾಗಿದ್ದಾರೆ. ಅದೇ ಸಮಯದಲ್ಲಿ, ಇತ್ತೀಚಿನ

ಮುಂಬೈ: ತಮ್ಮ ವಿರುದ್ಧ ಮಾನಹಾನಿಕರ ಮತ್ತು ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರು ತಮ್ಮ ಮಾಜಿ ಪತ್ನಿ ಆಲಿಯಾ ಅಲಿಯಾಸ್ ಜೈನಾಬ್ ಸಿದ್ದಿಕಿ ಮತ್ತು ಅವರ ಸಹೋದರ ಶಾಮಸ್ ನವಾಬ್ ಸಿದ್ದಿಕಿ ವಿರುದ್ಧ 100 ಕೋಟಿ ರೂ. ನಷ್ಟ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಮಾನನಷ್ಟ

ವಾರಣಾಸಿ:ಮಾ 26. ಭೋಜ್‌ಪುರಿ ನಟಿ ಅಕಾಂಕ್ಷಾ ದುಬೆ ಅವರು ವಾರಣಾಸಿಯ ಖಾಸಗಿ ಹೊಟೇಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಭೋಜ್‌ಪುರಿ ಚಿತ್ರರಂಗದ ಡ್ರೀಮ್ ಗರ್ಲ್‌ ಎಂದೇ ಖ್ಯಾತರಾಗಿದ್ದ 25 ವರ್ಷದ ಆಕಾಂಕ್ಷಾ ದುಬೆ ಶೂಟಿಂಗ್ ಹಿನ್ನೆಲೆಯಲ್ಲಿ ವಾರಣಾಸಿಗೆ ಆಗಮಿಸಿದ್ದರು. ಶೂಟಿಂಗ್ ಮುಗಿದ ಬಳಿಕ ಹೊಟೇಲ್‌ಗೆ ಹೋಗಿದ್ದು, ಭಾನುವಾರ ಬೆಳಗ್ಗೆ ಅವರಿದ್ದ

ಧ್ರುವ ಸರ್ಜಾ ಅಭಿನಯದ ಮುಂಬರುವ ಚಿತ್ರ ಕೆಡಿ ಮೂಲಕ ನಟಿ ಶಿಲ್ಪಾ ಶೆಟ್ಟಿ ಕನ್ನಡ ಇಂಡಸ್ಟ್ರಿಗೆ ಮತ್ತೆ ಬರಲಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ಕೆ.ಡಿ ಸಿನಿಮಾ ಮೂಲಕ ಶಿಲ್ಪಾ ಶೆಟ್ಟಿ ಕನ್ನಡಕ್ಕೆ ಕಮ್ ಬ್ಯಾಕ್ ಆಗುತ್ತಿದ್ದು,  ನಿರ್ದೇಶಕರು ಬುಧವಾರ ಶಿಲ್ಪಾ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆ ಮಾಡುವ

ಮೊದಲ ಸಿನಿಮಾದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ತಮಿಳು ನಟಿ ಕೀರ್ತಿ ಸುರೇಶ್, ತನ್ನ ಗೆಲುವಿಗೆ ಕಾರಣರಾಗುತ್ತಿರುವ ವ್ಯಕ್ತಿಗಳಿಗೆ ಬರೋಬ್ಬರಿ 75 ಲಕ್ಷ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ಯುಗಾದಿ ಹಬ್ಬಕ್ಕಾಗಿ ಅವರು ಈ ಉಡುಗೊರೆಯನ್ನು ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಮಾಡಿರೋ

ವಾಷಿಂಗ್ ಟನ್: ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಭಾರತೀಯ ಅಮೇರಿಕನ್ ನಟಿ, ನಿರ್ಮಾಪಕಿ ಮೈಂಡಿ ಕಲಿಂಗ್ ಗೆ ರಾಷ್ಟ್ರೀಯ ಮಾನವೀಯತೆ ಪದಕ ನೀಡಿ ಗೌರವಿಸಿದ್ದಾರೆ. ಹೊಸ ಪೀಳಿಗೆಯ ಕಥೆಗಾರರಿಗೆ ಬೆಂಬಲ ನೀಡುತ್ತಿರುವುದನ್ನು ಗುರುತಿಸಿ ಶ್ವೇತ ಭವನದಲ್ಲಿ ರಾಷ್ಟ್ರೀಯ ಮಾನವೀಯತೆ ಪದಕ ನೀಡಿ ಗೌರವಿಸಲಾಗಿದೆ. ನ್ಯಾಷನಲ್ ಮೆಡಲ್ ಆಫ್ ಆರ್ಟ್ಸ್ ಎಂಬುದು US ಸರ್ಕಾರದಿಂದ

ಬೆಂಗಳೂರು: ಹಿಂದೂ ಧರ್ಮ, ಸಾಹಿತ್ಯ ಇತ್ಯಾದಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವ ನಟ ಚೇತನ್ ಅಹಿಂಸ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್‌ ಮಾಡಿದ್ದರು ಎಂದು ಶಿವಕುಮಾರ್ ಎಂಬುವವರು ನೀಡಿದ ದೂರಿನಡಿ ನಟ ಚೇತನ್ ಅವರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ. ನಟ

ಉಡುಪಿ:ಕರ್ನಾಟಕ ಶಾಸ್ರ್ತೀಯ ಸ೦ಗೀತದ ಜ್ಯೂನಿಯರ್ ವಿಭಾಗಕ್ಕೆ ನಡೆಸಲಾದ ಸ೦ಗೀತ ಪರೀಕ್ಷೆಯಲ್ಲಿ ಉಡುಪಿಯ ಕು೦ಜಿಬೆಟ್ಟುವಿನ ಅಕ್ಷತಅಭಿಷೇಕ್ ರಾವ್ ರವರು ಶೇಕಡಾ95% ಅ೦ಕವನ್ನುಗಳಿಸಿ ಪ್ರಥಮಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ. ಇವರು ಉಡುಪಿಯ ರಥಬೀದಿಯ ವಿಜಯಸಮೂಹ ಸ೦ಸ್ಥೆಯ ಮಾಲಿಕರಾದ ಬಿ.ವಿಜಯರಾಘವ ರಾವ್ ಮತ್ತು ಶ್ರೀಮತಿ ಸುಧಾ ವಿ ರಾವ್ ರವರ ದ್ವಿತೀಯ ಪುತ್ರರಾದ ಅಭಿಷೇಕ್ ರಾವ್