ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ರೇಣುಕಾ ಸ್ವಾಮಿ ಹತ್ಯೆ ಕೇಸ್: ಪವಿತ್ರಾ ಗೌಡ ಮನೆಯಲ್ಲಿ ಮಹಜರು ನಡೆಸಿದ ಪೊಲೀಸರು

ಬೆಂಗಳೂರು, ಜೂ. 1.ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪವಿತ್ರಾ ಗೌಡ ಬೆಂಗಳೂರಿನ ಮನೆಯಲ್ಲಿ ಪೊಲೀಸರು ಇಂದು ಮಹಜರು ನಡೆಸಿದ್ದಾರೆ.

ಸುಮಾರು 10 ವರ್ಷದಿಂದ ಇದೇ ಮನೆಯಲ್ಲಿ ಪವಿತ್ರಾ ಗೌಡ ವಾಸವಾಗಿದ್ದು, ಮೂರು ಫ್ಲೋರ್‌ನ ಡುಪ್ಲೆಕ್ಸ್ ಮನೆ ಇದಾಗಿದೆ. ಕೆಳಗಡೆ ಪಾರ್ಕಿಂಗ್‌ಗೆ ಜಾಗವಿದೆ. ಹಾಗೂ ಪ್ರಕರಣದ ಇನ್ನೋರ್ವ ಆರೋಪಿ ಪವನ್ ವಾಸಿಸುತ್ತಿದ್ದ ಮನೆ ಕೂಡ ಇದೆ. ಈತ ಪವಿತ್ರಾ ಗೌಡಗೆ ಮನೆ ಕೆಲಸಗಾರ ಹಾಗೂ ನಾಯಿಯನ್ನ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಪವಿತ್ರಾಗೆ ಅಕ್ಕಪಕ್ಕ ಮನೆಯವರ ಜೊತೆಗೆ ಸಂಪರ್ಕವೇ ಇರಲಿಲ್ಲ. ಪವಿತ್ರಾಗೆ ಒಬ್ಬಳು ಮಗಳಿದ್ದು, ಆಕೆ ಹಾಸ್ಟೆಲ್‌ನಲ್ಲಿ ಇದ್ದಳು. ಆಗಾಗ ಇಲ್ಲಿಗೆ ಬರುತ್ತಿದ್ದಳು. ಮೊದಮೊದಲು ದರ್ಶನ್ ಪವಿತ್ರಾ ಮನೆಗೆ ಬರೋದನ್ನ ನೋಡಿ ಇಲ್ಲಿ ವಿಜಯಲಕ್ಷ್ಮೀ ಇದ್ದಾರೆ ಅಂತ ಅಕ್ಕಪಕ್ಕದ ಮನೆಯವರು ತಿಳಿದಿದ್ದರು. ಆದರೆ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಒಂದೊಂದೇ ವಿಚಾರಗಳು ಹೊರಬರುತ್ತಿವೆ.

ನಟಿ ಪವಿತ್ರಾ ಗೌಡ, ನಟ ದರ್ಶನ್ ಸೇರಿದಂತೆ 13 ಮಂದಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಇದೀಗ ಜೂನ್ 20ರವರೆಗೆ ಎಲ್ಲರ ಪೊಲೀಸ್ ಕಸ್ಟಡಿ ಮುಂದುವರಿದಿದೆ. ಈಗಾಗಲೇ ನಟ ದರ್ಶನ್ ಅವರ ಮನೆಯನ್ನು ಹಾಗೂ ಕೊಲೆ ನಡೆದ ಬಳಿಕ ಮೈಸೂರಿನಲ್ಲಿ ದರ್ಶನ್ ತಂಗಿದ್ದ ಹೋಟೆಲ್ ನಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಇದರೊಂದಿಗೆ ರೇಣುಕಾ ಸ್ವಾಮಿ ಶವ ಎಸೆದ ಸ್ಥಳ ಹಾಗೂ ಕೊಲೆ ಮಾಡಿದ ಸ್ಥಳಗಳಲ್ಲಿ ಪೊಲೀಸರು ಮಹಜರು ನಡೆಸಿದ್ದಾರೆ.

No Comments

Leave A Comment