ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಉಡುಪಿ: ದೇಶಾದ್ಯಂತ 180ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳನ್ನು ಹೊಂದಿರುವ ‘ದ ಓಶಿಯನ್ ಪರ್ಲ್ ಗ್ರೂಫ್ ಆಪ್ ಹೊಟೇಲ್’ನಿಂದ ಉಡುಪಿಯಲ್ಲಿ 2ನೇ ಹೊಟೇಲ್ ‘ಓಶಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್ ಹೋಟೆಲ್’ ಉಡುಪಿ ಹೃದಯ ಭಾಗದಲ್ಲಿರುವ ಟೈಮ್ಸ್ ಸ್ಕ್ವೇರ್ ಮಾಲ್‌ನಲ್ಲಿ ಬುಧವಾರ ಉದ್ಘಾಟಿಸಲಾಯಿತು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಕುಕ್ಕೆ

ಮಂಗಳೂರು: ಹಲ್ಲೆ, ಜೀವಬೆದರಿಕೆಯೊಡ್ಡಿದ ಪ್ರಕರಣಕ್ಕೆ  ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ಘನ ನ್ಯಾಯಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಬಂಟ್ವಾಳದ ಫರಂಗಿಪೇಟೆ ಕೊಡಿಮಜಲು ಹೌಸ್ ನಿವಾಸಿ ಮೊಹಮ್ಮದ್ ಅತಾವುಲ್ಲಾ(40), ಬಂಟ್ವಾಳದ ಫರಂಗಿಪೇಟೆ ಕುಂಜತ್ಕಲ್ ಹೌಸ್ ನಿವಾಸಿ ತೌಸೀರ್ ಅಲಿಯಾಸ್ ಪತ್ತೊಂಜಿ ತೌಚಿ(31) ದಸ್ತಗಿರಿ ಮಾಡಿದ ಆರೋಪಿಗಳು. ಮಂಗಳೂರು

ಸುಳ್ಯ ಸರಕಾರಿ ಆಸ್ಪತ್ರೆಗೆ ತಪಾಸಣೆಗೆಂದು ಕರೆತಂದ ಕೈದಿಯೊರ್ವ ಪರಾರಿಯಾದ ಘಟನೆ ನಡೆದಿದೆ. ಕೈದಿ ಓರ್ವನನ್ನು ಆರೋಗ್ಯ ತಪಾಸಣೆ ಮಾಡಿಸಲು ಆಸ್ಪತ್ರೆಗೆ ಇಬ್ಬರು ಪೊಲೀಸ್ ಸಿಬ್ಬಂದಿ ಕರೆ ತಂದಿದ್ದು ಈ ವೇಳೆ ಓರ್ವ ಪೊಲೀಸ್ ಚೀಟಿ ಮಾಡಿಸುವ ಸಂದರ್ಭದಲ್ಲಿ ಕೈದಿ ತಪ್ಪಿಸಿಕೊಂಡಿದ್ಧಾನೆ. ತನ್ನ ಕೈಯಲ್ಲಿ ಇದ್ದ ಕೋಳದೊಂದಿಗೆ ಎಸ್ಕೆಪ್ ಆಗಿದ್ದು ಇದೀಗ ಪೊಲೀಸ್

ಮಂಗಳೂರು: ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಸೋದರ ಮುಮ್ತಾಜ್ ಅಲಿಯ ಕಾರು ಕೂಳೂರು ಸೇತುವೆ ಬಳಿ ಇಂದು ಭಾನುವಾರ ಬೆಳಗ್ಗೆ ಪತ್ತೆಯಾಗಿದೆ. ಮುಮ್ತಾಜ್ ನಾಪತ್ತೆಯಾಗಿದ್ದು, ಅವರು ನದಿಗೆ ಬಿದ್ದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಹೀಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕೂಳೂರು ನದಿಯ ಸೇತುವೆ ಬಳಿ ಕಪ್ಪು ಬಣ್ಣದ ಬಿಎಂಡಬ್ಲ್ಯು ಕಾರು ಪತ್ತೆಯಾಗಿದೆ.

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ‌ಸಮೀಪ ಮನೆಯ ಅಂಗಳದಲ್ಲಿ ಕಾರು ಹಿಂದಕ್ಕೆ ತೆಗೆಯುವಾಗ ಆಕಸ್ಮಿಕವಾಗಿ ಕಾರಿನಡಿಗೆ ಸಿಲುಕಿ ನಾಲ್ಕನೇ ತರಗತಿಯ ವಿದ್ಯಾರ್ಥಿ ಮೃತಪಟ್ಟ ಘಟನೆ ಕೊಕ್ಕಡದ ಮಲ್ಲಿಗೆ ಮಜಲ್ ಎಂಬಲ್ಲಿ ಸಂಭವಿಸಿದೆ. ಮಲ್ಲಿಗೆ ಮಜಲ್ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ 4ನೇ ತರಗತಿಯ ವಿದ್ಯಾರ್ಥಿ ನವಾಫ್ ಇಸ್ಮಾಯಿಲ್

ನಿಷೇಧಿತ ಎಂಡಿಎಂಎ ಮಾದಕ ದ್ರವ್ಯ ಮಾರಾಟ ಮತ್ತು ಸಾಗಾಟದಲ್ಲಿ ತೊಡಗಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ 70 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಬಂಧಿತ ವ್ಯಕ್ತಿಗಳನ್ನು ಶಿವಮೊಗ್ಗ ಟಿಪ್ಪು ನಗರದ ಅಬ್ದುಲ್ ಶಾಕೀರ್ (24) ಎಂದು ಗುರುತಿಸಲಾಗಿದೆ. ಬಿ.ಎಸ್.ನಗರ, ಮಂಜೇಶ್ವರ, ಉದ್ಯಾವರ ನಿವಾಸಿ ಹಸನ್ ಆಶೀರ್ (34); ಕಣ್ಣೂರಿನ ಪಯ್ಯನೂರಿನ

ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಡಿ.10ರಿಂದ 15ರವರೆಗೆ ಆಳ್ವಾಸ್ ವಿರಾಸತ್ 2024, 30ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ‌ಉತ್ಸವ ನಡೆಯಲಿದೆ ಎಂದು ಆಳ್ವಾಸ್ ಅಧ್ಯಕ್ಷ‌ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೊದಲ 5 ದಿನಗಳು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಹಾರೋತ್ಸವ, ಕರಕುಶಲ ವಸ್ತು‌ ಸಹಿತ‌ ವಸ್ತು ಪ್ರದರ್ಶನಗಳಿಗೆ ಅವಕಾಶವಿದ್ದು,

ಮಂಗಳೂರು: ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಟ ಬೆಂಗ್ರೆಯ ಸಮುದ್ರ ಕಿನಾರೆಯಲ್ಲಿ ನಡೆದ ಮುತ್ತು ಬಸವರಾಜ ವಡ್ಡ‌ರ್‌ ಅಲಿಯಾಸ್ ಮುದುಕಪ್ಪ ನವರ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಮೊಬೈಲ್ ವಿಚಾರಕ್ಕೆ ಬಾಗಲಕೋಟೆ ಮೂಲದ ಬಸವರಾಜ ವಡ್ಡ‌ ಅಲಿಯಾಸ್ ಮುದುಕಪ್ಪ (39) ಎಂಬುವವರ ಹತ್ಯೆ ಪ್ರಕರಣಕ್ಕೆ

ಮಂಗಳೂರು: ನಗರದ ಹತ್ತಿರ ಅಂಬ್ಯುಲೆನ್ಸ್ ವಾಹನವೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಮಂಗಳೂರು ಹೊರವಲಯದ ಪಡೀಲ್ ನಲ್ಲಿ ಸಂಭವಿಸಿದೆ‌‌. ಅಪಘಾತದಲ್ಲಿ ಅಂಬ್ಯುಲೆನ್ಸ್ ನಲ್ಲಿದ್ದ ರೋಗಿ ಸಾವನಪ್ಪಿದ್ದಾರೆ.  ಮೃತಪಟ್ಟ ವ್ಯಕ್ತಿಯನ್ನು ಹಳೆನರೇಂಕಿ ನಿವಾಸಿ ದಾಸಪ್ಪ ರೈ ಎಂದು ತಿಳಿದುಬಂದಿದೆ. ಇವರನ್ನು ಪುತ್ತೂರಿನ ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ಈ