ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಮಂಗಳೂರು:ಮಾ 28. ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ಬಳಿ ನಡೆದಿದೆ. ಮಧ್ಯರಾತ್ರಿ ಸುಮಾರು 2 ಗಂಟೆ ಹೊತ್ತಿಗೆ ಐಸ್ ಕ್ರೀಮ್ ದಾಸ್ತಾನು ಕೊಠಡಿಗೆ ಆರಂಭದಲ್ಲಿ ಬೆಂಕಿ ಹತ್ತಿಕೊಂಡಿದ್ದು, ಅದು ಸನಿಹದಲ್ಲಿದ್ದ ವಾಹನಕ್ಕೂ ತಗುಲಿ ವಾಹನ ಹಾಗೂ

ಮಂಗಳೂರು:ಮಾ 26. ನಗರದ ಮರೋಳಿ ಎಂಬಲ್ಲಿ 'ರಂಗ್ ದೇ ಬರ್ಸಾ' ಹೆಸರಿನಲ್ಲಿ ನಡೆಯುತ್ತಿದ್ದ ಹೋಳಿ ಸಂಭ್ರಮದ ಡಿಜೆ ಪಾರ್ಟಿಗೆ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ನಡೆದಿದೆ. ಡಿಜೆ ಪಾರ್ಟಿ ಜೊತೆಗೆ ಬಣ್ಣ ಎರಚಿ ಯುವಕ-ಯುವತಿಯರು ಸಂಭ್ರಮಿಸುತ್ತಿದ್ದು, ಅನ್ಯಕೋಮಿನ ಯುವಕರ ಜೊತೆ ಹೋಳಿ ಆಚರಣೆ ಎಂದು ಆರೋಪಿಸಿ ಭಜರಂಗದಳ ದಾಳಿ

ಕೊಚ್ಚಿ:ಮಾ 26. ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಟೇಕ್ ಆಫ್ ಆಗುವ ವೇಳೆ ಅಪಘಾತಕ್ಕೀಡಾಗಿದ್ದು, ಹೆಲಿಕಾಪ್ಟರ್ನಲ್ಲಿ ಮೂವರು ಕೋಸ್ಟ್ ಗಾರ್ಡ್ ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ. ಕೋಸ್ಟ್ ಗಾರ್ಡ್ ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆಯ ಬಳಿಕ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. ವಿಮಾನಗಳನ್ನು ಹತ್ತಿರದ

ತಡೆಗೋಡೆ ನಿರ್ಮಾಣದ ವೇಳೆ ಮಣ್ಣು ಕುಸಿದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಗುರುಂಪು ಎಂಬಲ್ಲಿ ಸಂಭವಿಸಿದೆ. ಮೃತಪಟ್ಟ ಮೂವರು ಗದಗ ಮೂಲದ ಕಾರ್ಮಿಕರು ಎಂದು ತಿಳಿದು ಬಂದಿದೆ. ಮನೆಯ ಹಿಂಬದಿಯಲ್ಲಿ ತಡೆಗೋಡೆ ನಿರ್ಮಾಣ ಕಾರ್ಯವನ್ನು ನಡೆಸಲಾಗಿತ್ತು. ಮಧ್ಯಾಹ್ನದ ವೇಳೆ ಇಲ್ಲಿ ಕಾರ್ಮಿಕರು

ಮಂಗಳೂರು:ಮಾ. 23. 23 ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಟೆಂಡ್ ವಾರಂಟ್ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೃಷ್ಣಾಪುರ, ಕಾಟಿಪಳ್ಳ ಗ್ರಾಮದ ನಿವಾಸಿ ಅಜರುದ್ದೀನ್ ಅಲಿಯಾಸ್ ಅಜರ್ (ನಾಥು)(29) ಬಂಧಿತ ಆರೋಪಿ. ಈತನ ಮೇಲೆ ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ ಹಾಗೂ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ,ಮುಲ್ಕಿ ಶ್ರೀವೆ೦ಕಟರಮಣ ದೇವಸ್ಥಾನ, ಮ೦ಗಳೂರು ಶ್ರೀವೆ೦ಕಟರಮಣ ದೇವಸ್ಥಾನ ಸೇರಿದ೦ತೆ ಕಾರ್ಕಳಶ್ರೀವೆ೦ಕಟರಮಣ ದೇವಸ್ಥಾನ ಸೇರಿದ೦ತೆ ಜಿಲ್ಲೆಯ ಎಲ್ಲಾ ಜಿ ಎಸ್ ಬಿ ಸಮಾಜಬಾ೦ಧವರ ದೇವಾಲಯಗಳಲ್ಲಿ ಶ್ರೀದೇವರಿಗೆ ವಿಶೇಷ ಅಲ೦ಕಾರ ಮಾಡುವುದರೊ೦ದಿಗೆ ಮಧ್ಯಾಹ್ನದ ಪೂಜೆಯನ್ನು ಸಲ್ಲಿಸುವುದರೊ೦ದಿಗೆ ಹೊಸ ವರುಷದ ಶೋಭಕೃತ್ ಸ೦ವತ್ಸರ ಪ೦ಚಾ೦ಗವನ್ನು

ಉಡುಪಿ:ಉಡುಪಿಯ ಶ್ರೀಕೃಷ್ಣಮಠದಲ್ಲಿರುವ ಚಿನ್ನದ ರಥ ,ಬೆಳ್ಳಿರಥ, ಗರುಡರಥ, ಮಹಾಪೂಜಾರಥಕ್ಕೆ ಈಗಾಗಲೇ ರಬ್ಬರ್ ನ್ನು ಅದಮಾರು ಪರ್ಯಾಯದ ಸ೦ದರ್ಭದಲ್ಲಿ ಅಳವಡಿಸಲಾಗಿತ್ತು.ಇದೀಗ ಬ್ರಹ್ಮರಥಕ್ಕೂ ಶನಿವಾರದ೦ದು ರಬ್ಬರನ್ನು ಅಳವಡಿಸುವ ಕೆಲಸವು ಪೂಣಗೊ೦ಡಿದೆ.ಇದರಿ೦ದಾಗಿ ಮು೦ದಿನ ದಿನಗಳಲ್ಲಿ ರಥೋತ್ಸವದ ಸ೦ದರ್ಭದಲ್ಲಿ ರಥವನ್ನು ಸಲೀಸಾಗಿ ಎಳೆಯಬಹುದಾಗಿದೆ.

ಪುತ್ತೂರು:ಮಾ 17 . ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದವನ್ನು ಬಂಧಿಸಿ, ಆತನಲ್ಲಿದ್ದ ಗಾಂಜಾ ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ. ಪಾಣಾಜೆ ಗ್ರಾಮದ ನಿವಾಸಿ ಅಬೂಬಕ್ಕರ್ ಸಿದ್ದಿಕ್ (35) ಬಂಧಿತ ಆರೋಪಿ. ಅಕ್ರಮವಾಗಿ ಅಬೂಬಕ್ಕರ್ ಸಿದ್ದಿಕ್ ಎಂಬಾತ ಕಾರಿನಲ್ಲಿ ಗ್ರಾಹಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದುದನ್ನು

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ತಾಪಮಾನ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪುವುದರೊಂದಿಗೆ ನಿರಂತರ ಬಿಸಿಲಿನ ಝಳವನ್ನು ನಿಭಾಯಿಸಲು ಜನರು ಹೆಣಗಾಡುತ್ತಿದ್ದಾರೆ. ಮಂಗಳೂರಿನ ಪಣಂಬೂರಿನಲ್ಲಿ ಶನಿವಾರ ಗರಿಷ್ಠ ತಾಪಮಾನ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸನ್‌ಬರ್ನ್ ಮತ್ತು ಇತರ ತಾಪಮಾನ ಸಂಬಂಧಿತ ಅಸ್ವಸ್ಥತೆಗಳೊಂದಿಗೆ ಬಳಲುತ್ತಿರುವ ಜನರು ಹೆಚ್ಚು ಜಾಗರೂಕರಾಗಿರಬೇಕಿದೆ. ಹವಾಮಾನ ವೈಪರೀತ್ಯಕ್ಕೆ ಪ್ರಕೃತಿ