ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದ ನೂಲ್ವಿ ಕ್ರಾಸ್ ಬಳಿ ಭಾನುವಾರ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದರೇ, ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಸುಜಾತಾ ಹಿರೇಮಠ(60), ಗಾಯತ್ರಿ ಮಾಂತನಮಠ(67), ಶಕುಂತಲಾ ಹಿರೇಮಠ(72) ಸಂಪತ್ ಕುಮಾರಿ (63) ಎಂದು ಗುರುತಿಸಲಾಗಿದೆ. ಮೃತರು
ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಟ್ಯಾರಿಫ್ ಹುಚ್ಚಾಟಕ್ಕೆ ಜಾಗತಿಕ ಷೇರು ಮಾರುಕಟ್ಟೆ ತಲ್ಲಣಿಸಿದ್ದು, ಇದರ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲೂ ಕಂಡುಬಂದಿದೆ. ಏಷ್ಯಾದ ಷೇರುಪೇಟೆಗಳು ಮತ್ತು ಅಮೆರಿಕದ ಷೇರುಪೇಟೆಗಳಲ್ಲಿ ಮಾರಾಟ ಕುಸಿತವು ಗಮನಾರ್ಹ ನಷ್ಟವನ್ನು ಸೂಚಿಸಿದ್ದು, ಸೆನ್ಸೆಕ್ಸ್ 4,000 ಅಂಕ ಕುಸಿತ ದಾಖಲಿಸಿದೆ. ಟ್ರಂಪ್ ಸುಂಕ ಯುದ್ಧದ ಪರಿಣಾಮವಾಗಿ ಜಾಗತಿಕ
ಉಡುಪಿಯ ಇತಿಹಾಸ ಪ್ರಸಿದ್ಧ ದೇವಾಲಯವಾದ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಶ್ರೀರಾಮನವಮಿಯನ್ನು ಸ೦ಭ್ರಮದಿ೦ದ ಆಚರಿಸಲಾಯಿತು. ಕಳೆದ ಒ೦ದು ವಾರಗಳಿ೦ದಲೂ ವಿವಿಧ ಧಾರ್ಮಿಕ ಹಾಗೂ ಸಾ೦ಸ್ಕೃತಿಕ ಕಾರ್ಯಕ್ರಮಗಳು ನಿತ್ಯವೂ ನಡೆಸಲಾಯಿತು.ಭಾನುವಾರದ ದಿನದ೦ದು ಶ್ರೀರಾಮನವಮಿಯ ಪ್ರಯುಕ್ತ ಶ್ರೀರಾಮ ದೇವರ ಉತ್ಸವ ಮೂರ್ತಿಯನ್ನು ಚ೦ದ್ರ ಮ೦ಡಲರಥದಲ್ಲಿ ಕುಳ್ಳಿರಿಸಿ ಉತ್ಸವನ್ನು ಪರ್ಯಾಯ ಶ್ರೀಪುತ್ತಿಗೆ ಮಠದ ಹಿರಿಯ ಶ್ರೀಗಳಾದ ಶ್ರೀಸುಗುಣೇ೦ದ್ರ
ಉಡುಪಿಯ ಶ್ರೀಕೃಷ್ಣ ದೇವರಿಗೆ ಇ೦ದು ಭಾನುವಾರದ೦ದು ಶ್ರೀರಾಮನವಮಿಯ ಪ್ರಯುಕ್ತ ವಿಶೇಷ ಅಲ೦ಕಾರ. ಹಾಗೂ ಶ್ರೀಮುಖ್ಯಪ್ರಾಣದೇವರಿಗೆ ವಿಶೇಷ ಅಲ೦ಕಾರವನ್ನು ಮಾಡಲಾಯಿತು.
ರಾಮೇಶ್ವರಂ: ರಾಮೇಶ್ವರಂ ದ್ವೀಪ ಮತ್ತು ಮುಖ್ಯ ಭೂಭಾಗದ ನಡುವೆ ರೈಲು ಸಂಪರ್ಕವನ್ನು ಒದಗಿಸುವ ಪಂಬನ್ ಸಮುದ್ರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು. ಪಂಬನ್ ಸೇತುವೆಯನ್ನು ತೆರೆದ ನಂತರ, ಪ್ರಧಾನಿ ಮೋದಿ ರಾಮೇಶ್ವರಂ - ತಾಂಬರಂ ಎಕ್ಸ್‌ಪ್ರೆಸ್‌ನಿಂದ ಹೊಸ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿದರು. ರೈಲು ಪಂಬನ್ ಸೇತುವೆಯನ್ನು
ಕೊಲಂಬೋ, ಏಪ್ರಿಲ್ 06: ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಶ್ರೀಲಂಕಾ ಭೇಟಿ ಪೂರ್ಣಗೊಂಡಿದೆ. ಇಂದು ಅನುರಾಧಪುರದಲ್ಲಿ ಮಹೋ-ಅನುರಾಧಪುರ ರೈಲು ಮಾರ್ಗ ಉದ್ಘಾಟಿಸಿದರು. ಶ್ರೀಲಂಕಾ ಪ್ರವಾಸದ ಕೊನೆಯ ದಿನವಾದ ಇಂದು ಬೆಳಗ್ಗೆ ಬೇಗನೆ ಅನುರಾಧಪುರಕ್ಕೆ ಭೇಟಿ ನೀಡಿದ್ದರು. ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರೊಂದಿಗೆ ಜಯ ಶ್ರೀ ಮಹಾ ಬೋಧಿ
ಉತ್ತರ ಕನ್ನಡ, ಏಪ್ರಿಲ್ 06: ವಿಶ್ವಗುರು ಆಗಬೇಕನ್ನುವ ಭಾರತ (India), ವಿವಿಧ ರಂಗದಲ್ಲಿ ತನ್ನದೆ ಆದ ಛಾಪು ಮೂಡಿಸುವುದರ ಮೂಲಕ ಈಡಿ ಜಗತ್ತೆ ತನ್ನತ್ತ ನೋಡುವಂತ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಹಿಂದೂ ಮಹಾಸಾಗರಕ್ಕೆ (Indian Ocean) ಅಂಟಿಕೊಂಡಿರುವ 9 ದೇಶಗಳ ಜೊತೆ ಮೈತ್ರಿ ಮಾಡಿಕೊಂಡು, ನೌಕಾಪಡೆಯಲ್ಲಿ ವಿನೂತನ ಕಾರ್ಯಾಚರಣೆಗೆ ಮುಂದಾಗಿದ್ದು,
ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಚರ್ಚಾಸ್ಪದ ವಕ್ಫ್ ತಿದ್ದುಪಡಿ ಮಸೂದೆ-2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ನಿನ್ನೆ ಶನಿವಾರ ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ, 2025 ಕ್ಕೆ ಸಹ ತಮ್ಮ ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಸಂಸತ್ತಿನ ಈ ಕಾಯ್ದೆಗೆ ಏಪ್ರಿಲ್ 5,
ವಾಷಿಂಗ್ಟನ್: ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಡೊನಾಲ್ಡ್ ಟ್ರಂಪ್ ಅವರು ದೇಶದೊಳಗೆ ವಿರೋಧ ಎದುರಿಸಿದ್ದು, ಅವರು ಒಡೆದು ಆಳುವ ನೀತಿ ಹೊಂದಿದ್ದಾರೆ ಎಂದು ಆರೋಪಿಸಿ ಅಮೆರಿಕದ ಪ್ರಮುಖ ನಗರಗಳ ಬೀದಿಗಳಲ್ಲಿ ಹತ್ತಾರು ಸಾವಿರ ಜನರು ಪ್ರತಿಭಟನೆ ನಡೆಸಿದರು. ಸರ್ಕಾರದ ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕಡಿತದಿಂದ ಹಿಡಿದು ವ್ಯಾಪಾರ
ಥೈಲ್ಯಾಂಡ್: ಥೈಲ್ಯಾಂಡ್‌ನಲ್ಲಿ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರೊಂದಿಗಿನ ಪ್ರಧಾನಿ ಮೋದಿ ಅವರ ಭೇಟಿಯ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದ್ದಾರೆ. "ಪ್ರಜಾಪ್ರಭುತ್ವ, ಸ್ಥಿರ, ಶಾಂತಿಯುತ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ" ಎಂದು ವಿಕ್ರಮ್ ಮಿಸ್ರಿ ಹೇಳಿದ್ದಾರೆ. ಬಾಂಗ್ಲಾದೇಶದೊಂದಿಗೆ ಸಕಾರಾತ್ಮಕ