ವ್ಯಾಟಿಕನ್:ಮಾ 30. ಪೋಪ್ ಫ್ರಾನ್ಸಿಸ್ ಅವರು ಇತ್ತೀಚಿನ ದಿನಗಳಲ್ಲಿ ಉಸಿರಾಟದ ತೊಂದರೆ ಅನುಭವಿಸಿದ ನಂತರ ಮಾರ್ಚ್ 29 ರಂದು ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ, ಚಿಕಿತ್ಸೆಗಾಗಿ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯುತ್ತಾರೆ ಎಂದು ವ್ಯಾಟಿಕನ್ ಮಾಹಿತಿ ನೀಡಿದೆ. 86 ವರ್ಷದ ಪೋಪ್‌ಗೆ COVID-19 ಇಲ್ಲ ಎಂದು ವಕ್ತಾರ
ಬೀದರ್:ಮಾ 31. ರಾಮನವಮಿ ಶೋಭಾಯಾತ್ರೆ ವೇಳೆ ಶಾಸಕರೊಬ್ಬರು ಶ್ರೀರಾಮನ ತೊಡೆ ಮೇಲೆ ನಿಂತು ಕೊರಳಿಗೆ ಹೂವಿನ ಹಾರ ಹಾಕುತ್ತಿರುವ ಫೋಟೋ ವೈರಲ್ ಆಗಿದ್ದು, ಶ್ರೀರಾಮನಿಗೆ ಅವಮಾನ ಮಾಡಿದ ಆರೋಪ ಕೇಳಿ ಬಂದಿದೆ. ಬಸವಕಲ್ಯಾಣದಲ್ಲಿ ನಡೆದ ರಾಮನವಮಿ ಶೋಭಾಯಾತ್ರೆಯಲ್ಲಿ ಈ ಘಟನೆ ನಡೆದಿದೆ. ಶಾಸಕ ಶರಣು ಸಲಗರ ಅವರು ಶ್ರೀರಾಮನ ಮೂರ್ತಿಯ
ಮಧ್ಯಪ್ರದೇಶ: ಶ್ರೀರಾಮ ನವಮಿ ಆಚರಣೆ ವೇಳೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ಭಾರೀ ಅವಘಡವೊಂದು ಸಂಭವಿಸಿದ್ದು, ಇಂದೋರ್ ನ ಮಹಾದೇವ್ ಜುಲೇಲಾಲ್ ದೇವಸ್ಥಾನದ ಮೆಟ್ಟಿಲುಬಾವಿ ಕುಸಿದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದಾರೆ. ರಾಮನವಮಿ ಅಂಗವಾಗಿ ಹೆಚ್ಚಿನ ಜನ ಸೇರಿದ್ದ್ ಅಹಿನ್ನೆಲೆಯಲ್ಲಿ ಬಾವಿಯ ಮೇಲ್ಭಾಗ ಕುಸಿದಿದೆ. ಈ ಭಾಗದಲ್ಲಿ ದೇವಾಲಯವಿತ್ತು. ಮಹಿಳೆಯರು, ಮಕ್ಕಳು ಸೇರಿದಂತೆ
ಉಡುಪಿ ಸಮೀಪದ ಚಕ್ರತೀರ್ಥದ ಶ್ರೀಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಧ್ವಜಸ್ತ೦ಭದ ಶೋಭಾ ಯಾತ್ರೆ ಮೆರವಣಿಗೆಗೆ ಉಡುಪಿಯ ಶ್ರೀಕೃಷ್ಣಮಠದ ರಾಜಾ೦ಗಣದ ಪಾರ್ಕಿ೦ಗ್ ಸ್ಥಳದಲ್ಲಿ ಬುಧವಾರದ೦ದು ಉಡುಪಿಯ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಧ್ವಜಸ್ತ೦ಭಕ್ಕೆ ಆರತಿಯನ್ನು ಬೆಳಗಿಸಿ ಧ್ವಜಸ್ತ೦ಭವನ್ನು ಇಡಲಾರದ ವಾಹನಕ್ಕೆ ತೆ೦ಗಿನಕಾಯಿಯನ್ನು ಹೊಡೆದು ಚಾಲನೆಯನ್ನು ನೀಡಿದರು.
ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ ಮತ್ತು
ಚಿಕ್ಕಮಗಳೂರು: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತರೀಕರೆ ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಬಳಿ ನಡೆದಿದೆ. ಡಿಕ್ಕಿಯ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಮೃತರನ್ನು ತರೀಕೆರೆ ಪಟ್ಟಣದ ಬಿಲಾಲ್ ಮತ್ತು ಅಜೀಮ್ ಎಂದು ಗುರುತಿಸಲಾಗಿದೆ. ಇನ್ನು ಅಪಘಾತದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು ಕೂಡಲೇ
ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐದು ದಿನಗಳ ಕಾಲ ಲೋಕಾಯುಕ್ತ ಪೊಲೀಸ್ ಕಸ್ಟಡಿಗೆ ನೀಡಿ ಮಂಗಳವಾರ ಆದೇಶ ಹೊರಡಿಸಿದೆ. ಜಾಮೀನು ರದ್ದಾದ ನಂತರ ನಿನ್ನೆ ಸಂಜೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು, ಇಂದು
ನವದೆಹಲಿ: ತೆರಿಗೆದಾರರಿಗೆ ಇನ್ನೂ ಸ್ವಲ್ಪ ಸಮಯಾವಕಾಶ ನೀಡುವ ಸಲುವಾಗಿ, ಪ್ಯಾನ್ ಸಂಖ್ಯೆ ಮತ್ತು ಆಧಾರ್ ನ್ನು ಲಿಂಕ್ ಮಾಡುವ ದಿನಾಂಕವನ್ನು 2023ರ ಜೂನ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ, ಆ ಮೂಲಕ ವ್ಯಕ್ತಿಗಳು ಯಾವುದೇ ಪರಿಣಾಮಗಳನ್ನು ಎದುರಿಸದೆ ತಮ್ಮ ಆಧಾರ್ ಅನ್ನು ಪ್ಯಾನ್-ಆಧಾರ್ ಲಿಂಕ್ ಮಾಡಲು ನಿಗದಿತ ಪ್ರಾಧಿಕಾರಕ್ಕೆ ತಿಳಿಸಬಹುದು. 2023ರ
ಹಾಸನ: ಹಾಸನ ಜಿಲ್ಲೆಯ ಬೇಲೂರಿನಲ್ಲಿ ಕುರಾನ್ ಪಠಣ ವಿರೋಧಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಬೇಲೂರು ಚನ್ನಕೇಶವ ರಥೋತ್ಸವದ ವೇಳೆ ಕುರಾನ್ ಪಠಣ ರದ್ದುಗೊಳಿಸುವಂತೆ ಆಗ್ರಹಿಸಿ ಬಜರಂಗದಳ
ಮೆಕ್ಸಿಕೋ: ಅಮೆರಿಕಾ ಮತ್ತು ಮೆಕ್ಸಿಕನ್ ಗಡಿಯಲ್ಲಿರುವ ಸಿಯುಡಾಡ್ ಜುವಾರೆಜ್‌ನ ವಲಸಿಗರ ಕೇಂದ್ರದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಇದರಲ್ಲಿ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದು ಸುಮಾರು 100 ಮಂದಿ ಗಾಯಗೊಂಡರು. ಮೆಕ್ಸಿಕೊ ಮತ್ತು ಅಮೆರಿಕಾವನ್ನು ಸಂಪರ್ಕಿಸುವ ಸ್ಟಾಂಟನ್-ಲೆಡ್ರೆ ಸೇತುವೆಯ ಬಳಿ ಇರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೈಗ್ರೇಷನ್ (INM) ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡು ಈ