ವಿಶಾಖಪಟ್ಟಣ: ಮಹಾರಾಣಿಪೇಟೆಯ ರಾಮಜೋಗಿಪೇಟೆಯಲ್ಲಿ ಗುರುವಾರ ಮುಂಜಾನೆ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆದಿತ್ತು, ಮಧ್ಯರಾತ್ರಿ 2 ಗಂಟೆವರೆಗೆ ದೊಡ್ಡ ಶಬ್ದಕೇಳಿ ಬಂದಿತ್ತು. ಹೊರಗೆ ಬಂದು ನೋಡುವಷ್ಟರಲ್ಲಿ ಕಟ್ಟಡ ಕುಸಿದಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಬೆಳಗಿನ
ಕೊಯಂಬತ್ತೂರು: ನ್ಯಾಯಾಲಯದ ವಿಚಾರಣೆಗಾಗಿ ಕಾಯುತ್ತಿದ್ದ ಪತ್ನಿ ಮೇಲೆ ಪತಿಯೇ ಆ್ಯಸಿಡ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಕೊಯಂಬತ್ತೂರಿನ ರಾಮನಾಥಪುರಂನ ಕಾವೇರಿ ನಗರದ 33 ವರ್ಷದ ಕವಿತಾ 2016 ರಲ್ಲಿ ಬಸ್ ಪ್ರಯಾಣಿಕರೊಬ್ಬರ ಚೈನ್ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದಳು, ಜಾಮೀನಿನ ಮೇಲೆ ಹೊರಗಿದ್ದಳು. ಆಕೆ
ನವದೆಹಲಿ: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಕೇಂದ್ರ ನಾಯಕತ್ವವು ಬಿಹಾರ, ರಾಜಸ್ಥಾನ, ಒಡಿಶಾ ಮತ್ತು ದೆಹಲಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನು ಗುರುವಾರ ನೇಮಕ ಮಾಡಿದೆ. ಬಿಹಾರ ಬಿಜೆಪಿ ಅಧ್ಯಕ್ಷರಾಗಿ ಸಾಮ್ರಾಟ್ ಚೌಧರಿ ಅವರನ್ನು ನೇಮಕ ಮಾಡಲಾಗಿದೆ. ಅವರು ಬಿಜೆಪಿಯಿಂದ ಬಿಹಾರ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಇವರು ಆರ್‌ಜೆಡಿ ತೊರೆದು
ನವದೆಹಲಿ: ಉದ್ಯಮಿ ಗೌತಮ್ ಅದಾನಿಯನ್ನು ಅವರನ್ನು ಬಂಧಿಸುವಂತೆ ಒತ್ತಾಯಿಸಿ ಟಿಎಂಸಿ ಸಂಸದರ ನಿಯೋಗ ಗುರುವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಟಿಎಂಸಿ ಲೋಕಸಭಾ ಸಂಸದರಾದ ಪ್ರತಿಮಾ ಮಂಡಲ್, ಅಬು ತಾಹೆರ್ ಖಾನ್, ಖಲೀಲುರ್ ರೆಹಮಾನ್, ಸುನಿಲ್ ಮಂಡಲ್ ಮತ್ತು ರಾಜ್ಯಸಭಾ ಸದಸ್ಯರಾದ ಸಂತಾನು ಸೇನ್,
ನವದೆಹಲಿ: ಮೋದಿ ಉಪನಾಮ ಟೀಕೆಗಳಿಗೆ ಸಂಬಂಧಿಸಿದಂತೆ ಎಐಸಿಸಿ ಮಾಜಿ ಅಧ್ಯಕ್ಷ ದೋಷಿ ಎಂದು ಪರಿಗಣಿಸಿ, ಸೂರತ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿ ಜಾಮೀನು ಮಂಜೂರು ಮಾಡಿದ ನಂತರ ಆಮ್ ಆದ್ಮಿ ಪಕ್ಷ ರಾಹುಲ್ ಬೆಂಬಲಕ್ಕೆ ಬಂದಿದೆ. ಬಿಜೆಪಿಯೇತರ ನಾಯಕರು ಮತ್ತು ಪಕ್ಷಗಳನ್ನು ವಿಚಾರಣೆಗೆ ಒಳಪಡಿಸುವ ಮೂಲಕ ಅವರನ್ನು
ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಈ ಬಾರಿ ಭಾರತ ಆಯೋಜಿಸುತ್ತಿದ್ದು ಅಕ್ಟೋಬರ್ 5ರಿಂದ ಟೂರ್ನಿ ಪ್ರಾರಂಭವಾಗಲಿದೆ. ಫೈನಲ್ ಪಂದ್ಯ ನವೆಂಬರ್ 19ರಂದು ನಡೆಯಲಿದೆ ಎಂದು ವರದಿಯಾಗಿದೆ. ESPNcricinfo ವರದಿಯ ಪ್ರಕಾರ, ಭಾರತದಲ್ಲಿ ನಡೆಯಲಿರುವ ODI ವಿಶ್ವಕಪ್ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ. ಅದೇ ಸಮಯದಲ್ಲಿ, ಅದರ ಅಂತಿಮ ಪಂದ್ಯವು ನವೆಂಬರ್
ನವದೆಹಲಿ: ದೇಶದಲ್ಲಿ ಸದ್ದಿಲ್ಲದೆ ಮಹಾಮಾರಿ ಕೊರೋನಾ ತಲೆ ಎತ್ತುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,133 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,46,98,118ಕ್ಕೆ ಏರಿಕೆಯಾಗಿದೆ. ಅಲ್ಲದೇ, ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,30,813ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ
ನವದೆಹಲಿ: ಕೇಂದ್ರ ಸರ್ಕಾರದೊಂದಿಗಿನ ಸಂಘರ್ಷದ ನಡುವೆ ದೆಹಲಿಯ ಆಮ್ ಆದ್ಮಿ ಸರ್ಕಾರ 2023-24 ನೇ ಸಾಲಿಗೆ 78,800 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದೆ. ಹಣಕಾಸು ಸಚಿವ ಕೈಲಾಶ್ ಗೆಹ್ಲೋಟ್ ಬಜೆಟ್ ಮಂಡಿಸಿದರು. 2022-23 ನೇ ಸಾಲಿನಲ್ಲಿ ದೆಹಲಿ ಸರ್ಕಾರದ ಬಜೆಟ್ ನ ಗಾತ್ರ 75,800 ಕೋಟಿ ರೂಪಾಯಿಯಷ್ಟಿತ್ತು. ಅದಕ್ಕೂ ಮೊದಲು
ವಾಷಿಂಗ್ ಟನ್: ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಭಾರತೀಯ ಅಮೇರಿಕನ್ ನಟಿ, ನಿರ್ಮಾಪಕಿ ಮೈಂಡಿ ಕಲಿಂಗ್ ಗೆ ರಾಷ್ಟ್ರೀಯ ಮಾನವೀಯತೆ ಪದಕ ನೀಡಿ ಗೌರವಿಸಿದ್ದಾರೆ. ಹೊಸ ಪೀಳಿಗೆಯ ಕಥೆಗಾರರಿಗೆ ಬೆಂಬಲ ನೀಡುತ್ತಿರುವುದನ್ನು ಗುರುತಿಸಿ ಶ್ವೇತ ಭವನದಲ್ಲಿ ರಾಷ್ಟ್ರೀಯ ಮಾನವೀಯತೆ ಪದಕ ನೀಡಿ ಗೌರವಿಸಲಾಗಿದೆ. ನ್ಯಾಷನಲ್ ಮೆಡಲ್ ಆಫ್ ಆರ್ಟ್ಸ್ ಎಂಬುದು US ಸರ್ಕಾರದಿಂದ
ಉಡುಪಿ ಜಿಲ್ಲಾ ಕಾ೦ಗ್ರೆಸ್ ಪಕ್ಷದಲ್ಲಿ ಮೊದಲಿನಿ೦ದಲೂ ಅಭ್ಯರ್ಥಿಗಳ ಆಯ್ಕೆಯ ಸ೦ದರ್ಭದಲ್ಲಿ ಗೊ೦ದಲವು ಮೂಡಿಬರುತ್ತಿರುವುದು ಸಹಜ.ಆಸ್ಕರ್ ಫೆರ್ನಾ೦ಡೀಸ್ ಕಾಲದಲ್ಲಿ ಎಲ್ಲರೂ ಆಸ್ಕರ್ ಭೇಟಿ ಮಾಡಿ ತಮ್ಮ ತಮ್ಮ ಎ೦ ಎಲ್ ಎ ಸ್ಥಾನವನ್ನು ಪಡೆಯುವುದಕ್ಕಾಗಿ ದೆಹಲಿಯಲ್ಲಿ ಝ೦ಡವೂರುತ್ತಿದ್ದರು.ಅದರೆ ಅವರ ಕಾಲಾವಧಿಯ ಬಳಿಕ ದೆಹಲಿಯಲ್ಲಿ ಉಡುಪಿಯ ಬಗ್ಗೆ ಯಾರ ಮಾತು ನಡೆಯದ೦ತಹ