ವಾಷಿಂಗ್ಟನ್: ವಾರ್ಷಿಕ ಆರ್ಥಿಕ ಆದಾಯ ಗುರಿ ತಲುಪುವ ಸಲುವಾಗಿ ಮತ್ತೆ ಟೆಕ್ ದೈತ್ಯ ಮೆಟಾ ಸಂಸ್ಥೆ ತನ್ನ ಸಾವಿರಾರು ಸಿಬ್ಬಂದಿಗಳನ್ನು ವಜಾಮಾಡಲು ಮುಂದಾಗಿದೆ. ಹೌದು.. ಫೇಸ್‌ಬುಕ್ (Facebook) ಹಾಗೂ ಇನ್‌ಸ್ಟಾಗ್ರಾಮ್‌ನ (Instagram) ಮಾತೃಸಂಸ್ಥೆ ಮೆಟಾ (Meta), ಮತ್ತೆ ತನ್ನ ಉದ್ಯೋಗಿಗಳನ್ನು ಕಡಿತಗೊಳಿಸಲು ಯೋಜಿಸಿದ್ದು, ಈ ವಾರದಲ್ಲಿ ಮೆಟಾ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲಿದೆ
ನ್ಯೂ ಯಾರ್ಕ್: ಅಮೆರಿಕದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಭಾರತ ಮೂಲದ ಮಹಿಳೆ ಸಾವನ್ನಪ್ಪಿದ್ದು ಆಕೆಯ ಪುತ್ರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಭಾರತ ಮೂಲದ ರೋಮಾ ಗುಪ್ತಾ (63 ವರ್ಷ) ಅವರು ಭಾನುವಾರ ಲಾಂಗ್ ಐಲ್ಯಾಂಡ್‌ನ ರಿಪಬ್ಲಿಕ್ ಏರ್‌ಪೋರ್ಟ್‌ಗೆ ವಾಪಸಾಗುತ್ತಿದ್ದಾಗ ನಾಲ್ಕು ಆಸನಗಳ ಸಿಂಗಲ್ ಎಂಜಿನ್ ಪೈಪರ್ ಚೆರೋಕೀ ವಿಮಾನವು ಬೆಂಕಿಗೆ
ಉಡುಪಿ: ಮಾ 06 ಶಾರದ ಮಂಟಪದಿಂದ ಬೀಡಿನ ಗುಡ್ಡೆ ರಸ್ತೆ ಸುಸ್ಥಿತಿಯಲ್ಲಿದ್ದರೂ ಅದನ್ನು ಅಗೆದು ಕಾಂಕ್ರೀಟೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಿದ್ದಾರೆ. ವಾಹನ ಸಂಚಾರಕ್ಕೆ ಸದೃಢವಾಗಿರುವ ರಸ್ತೆಯನ್ನು ಅಗೆದು ಮರು ಕಾಂಕ್ರೀಟೀಕರಣ ಮಾಡುವುದು
ಬೆಂಗಳೂರು: ಮದುವೆಗೂ ಮುಂಚೆ ಫ್ಯಾಶನ್ ಶೋಗಳಲ್ಲಿ ತೊಡಗಿಸಿಕೊಂಡ ಅದೆಷ್ಟೋ ಮಹಿಳೆಯರು ಮದುವೆ ನಂತರ ಸಂಸಾರ, ಮಕ್ಕಳು ಎಂದು ಬ್ಯುಸಿ ಆಗಿರುತ್ತಾರೆ. ಅಂತಹ ಮಹಿಳೆಯರಲ್ಲಿ ಆಸಕ್ತಿಯನ್ನು ಮುಂದುವರೆಸಲು ನಗರದ ಶಾಂಘ್ರೀಲಾ ಹೋಟೆಲ್'ನಲ್ಲಿ ಭಾನುವಾರ ಮಿಸೆಸ್ ಇಂಟರ್‌ನ್ಯಾಶನಲ್ ಸೂಪರ್ ಕ್ವೀನ್ 2023 ಸ್ಪರ್ಧೆಯನ್ನು ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ವಿವಾಹಿತ ಮಹಿಳೆಯರ ಮಸ್ತ್ ರ‍್ಯಾಂಪ್ ವಾಕ್
ಮಂಗಳೂರು: ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್ ನನ್ನು ಮಾರ್ಚ್ 15ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಕಸ್ಟಡಿಗೆ ನೀಡಲಾಗಿದೆ. ಸ್ಫೋಟದಲ್ಲಿ ಗಂಭೀರ ಸುಟ್ಟು ಗಾಯಗೊಂಡಿದ್ದ ಶಂಕಿತ ಉಗ್ರ ಶಾರಿಕ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಎರಡೂವರೆ ತಿಂಗಳ ಬಳಿಕ ಇಂದು ಆತ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಡಿಸ್ಚಾರ್ಜ್ ಮಾಡಲಾಗಿತ್ತು.
ಭುವನೇಶ್ವರ: ಒಡಿಶಾದ ಖುರ್ದಾದ ತಂಗಿ ಪೊಲೀಸ್ ವ್ಯಾಪ್ತಿಯ ಭೂಶುಂದಪುರ ಗ್ರಾಮದ ಬಳಿ ಪಟಾಕಿ ತಯಾರಿಕೆ ಘಟಕದಲ್ಲಿ ಸೋಮವಾರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಹಲವರಿಗೆ ಗಂಭೀರ ಗಾಯಗಳಾಗಿವೆ. ಮೃತರೆಲ್ಲರೂ ಪುರುಷರಾಗಿದ್ದು, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಖುರ್ದಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿದ್ಧಾರ್ಥ್ ಕಟಾರಿಯಾ ತಿಳಿಸಿದ್ದಾರೆ. ಗಾಯಾಳುಗಳನ್ನು
ಕೋಲ್ಕತ್ತಾ: ಈಶಾನ್ಯ ರಾಜ್ಯಗಳಲ್ಲಿ ಹೀನಾಯ ಸೋಲಿನಿಂದ ಎಚ್ಚೆತ್ತ ತೃಣಮೂಲ ಕಾಂಗ್ರೆಸ್, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಮಾನ ಅಂತರ ಕಾಯ್ದುಕೊಳ್ಳಲು ಮತ್ತು ಈ ಎರಡೂ ಪಕ್ಷಗಳನ್ನು ವಿರೋಧಿಸುವ ಪ್ರಾದೇಶಿಕ ಪಕ್ಷಗಳೊಂದಿಗೆ ಕೈಜೋಡಿಸಲು ಮುಂದಾಗಿದೆ. ತ್ರಿಪುರಾದಲ್ಲಿ ಟಿಎಂಸಿ ನೋಟಾ ಪಡೆದ ಮತಗಳಿಗಿಂತ ಕಡಿಮೆ ಮತ ಪಡೆದಿದ್ದು, ಮೇಘಾಲಯದಲ್ಲೂ ಪಕ್ಷದ ಶಾಸಕರ ಸಂಖ್ಯೆ 11 ರಿಂದ
ಪಾಟ್ನಾ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂದಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದ ಶೋಧ ಕಾರ್ಯ ನಡೆಸಿದ್ದಾರೆ. ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಪಾಟ್ನಾದ ಅವರ ನಿವಾಸದಲ್ಲಿ ಸೋಮವಾರ ವಿಚಾರಣೆ ನಡೆಸುತ್ತಿದ್ದಾರೆ.
ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ನ್ಯಾಯಾಲಯ ಮಾರ್ಚ್ 20 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು 14 ದಿನಗಳ ಅಂದರೆ ಮಾರ್ಚ್ 20 ವರೆಗೆ
ಲಖನೌ: ಇಡೀ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶದ ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎನ್ಕೌಂಟರ್ ನಡೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. ಕೇವಲ 8 ದಿನಗಳ ಅಂತರದಲ್ಲಿ ನಡೆದ 2ನೇ ಎನ್ಕೌಂಟರ್ ಇದಾಗಿದೆ. 2005ರಲ್ಲಿ ನಡೆದಿದ್ದ ಬಿಎಸ್‌ಪಿ ಶಾಸಕನ ಕೊಲೆ ಪ್ರಕರಣದ