ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಮಂಗಳೂರು: ಹಲ್ಲೆ, ಜೀವಬೆದರಿಕೆಯೊಡ್ಡಿದ ಪ್ರಕರಣಕ್ಕೆ  ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ಘನ ನ್ಯಾಯಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಬಂಟ್ವಾಳದ ಫರಂಗಿಪೇಟೆ ಕೊಡಿಮಜಲು ಹೌಸ್ ನಿವಾಸಿ ಮೊಹಮ್ಮದ್ ಅತಾವುಲ್ಲಾ(40), ಬಂಟ್ವಾಳದ ಫರಂಗಿಪೇಟೆ ಕುಂಜತ್ಕಲ್ ಹೌಸ್ ನಿವಾಸಿ ತೌಸೀರ್ ಅಲಿಯಾಸ್ ಪತ್ತೊಂಜಿ ತೌಚಿ(31) ದಸ್ತಗಿರಿ ಮಾಡಿದ ಆರೋಪಿಗಳು. ಮಂಗಳೂರು

ಉಡುಪಿ: ಅನಾರೋಗ್ಯದ ಕಾರಣ ಮಾಜಿ ಮೀನುಗಾರಿಕಾ ಸಚಿವ, ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರು ಮಂಗಳವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಮೋದ್ ಮಧ್ವರಾಜ್ ಅವರು ವಿಪರೀತ ಜ್ವರ, ಗಂಟಲಿನ ಸೋಂಕು - ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ರಾತ್ರಿ ಅವರು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ 18 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿರುವ ಒಮರ್ ಅಬ್ದುಲ್ಲಾ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರ ತಂದೆ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಮಂಗಳವಾರ ಘೋಷಿಸಿದ್ದಾರೆ. ಮಿತ್ರಪಕ್ಷ ಕಾಂಗ್ರೆಸ್ ಜೊತೆಗೂಡಿ ಕೇಂದ್ರಾಡಳಿತ ಪ್ರದೇಶದಲ್ಲಿ ಪಕ್ಷ ಸರ್ಕಾರ ರಚಿಸಲಿದೆ

ಉಡುಪಿ:ವಸ್ತ್ರೋದ್ಯಮದಲ್ಲಿ ಹೆಸರುವಾಸಿಯಾದ, ಕರಾವಳಿ ಕರ್ನಾಟಕದ ಅತಿ ವಿಶಾಲವಾದ ಉಡುಪಿಯ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಪುರುಷರ ಉಡುಪುಗಳ ಪ್ರತ್ಯೇಕ ವಿಸ್ತೃತ ವಿಭಾಗ ಅಕ್ಟೋಬರ್ 9 ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಆಡಳಿತ ಪಾಲುದಾರ ಸಂತೋಷ್ ವಾಗ್ಳೆ ತಿಳಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಗ್ರಾಹಕರೇ ದೇವರು' ಎಂಬ ಪರಿಕಲ್ಪನೆಯೊಂದಿಗೆ ಕಳೆದ ನಾಲ್ಕು

ತೀವ್ರ ವಾಗ್ವಾದದ ವೇಳೆ ಶಿರೋಮಣಿ ಅಕಾಲಿದಳದ ಮುಖಂಡರೊಬ್ಬರು ಹಾರಿಸಿದ ಗುಂಡು ತಗುಲಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರೊಬ್ಬರು ಗಾಯಗೊಂಡಿದ್ದಾರೆ. ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.ಗಾಯಗೊಂಡ ಸ್ಥಳೀಯ ಎಎಪಿ ನಾಯಕ ಮನದೀಪ್ ಸಿಂಗ್ ಬ್ರಾರ್ ಅವರನ್ನು ಪಂಜಾಬ್‌ನ ಜಲಾಲಾಬಾದ್ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು

ಸುಳ್ಯ ಸರಕಾರಿ ಆಸ್ಪತ್ರೆಗೆ ತಪಾಸಣೆಗೆಂದು ಕರೆತಂದ ಕೈದಿಯೊರ್ವ ಪರಾರಿಯಾದ ಘಟನೆ ನಡೆದಿದೆ. ಕೈದಿ ಓರ್ವನನ್ನು ಆರೋಗ್ಯ ತಪಾಸಣೆ ಮಾಡಿಸಲು ಆಸ್ಪತ್ರೆಗೆ ಇಬ್ಬರು ಪೊಲೀಸ್ ಸಿಬ್ಬಂದಿ ಕರೆ ತಂದಿದ್ದು ಈ ವೇಳೆ ಓರ್ವ ಪೊಲೀಸ್ ಚೀಟಿ ಮಾಡಿಸುವ ಸಂದರ್ಭದಲ್ಲಿ ಕೈದಿ ತಪ್ಪಿಸಿಕೊಂಡಿದ್ಧಾನೆ. ತನ್ನ ಕೈಯಲ್ಲಿ ಇದ್ದ ಕೋಳದೊಂದಿಗೆ ಎಸ್ಕೆಪ್ ಆಗಿದ್ದು ಇದೀಗ ಪೊಲೀಸ್

ಮಂಗಳೂರು: ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಸೋದರ ಮುಮ್ತಾಜ್ ಅಲಿಯ ಕಾರು ಕೂಳೂರು ಸೇತುವೆ ಬಳಿ ಇಂದು ಭಾನುವಾರ ಬೆಳಗ್ಗೆ ಪತ್ತೆಯಾಗಿದೆ. ಮುಮ್ತಾಜ್ ನಾಪತ್ತೆಯಾಗಿದ್ದು, ಅವರು ನದಿಗೆ ಬಿದ್ದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಹೀಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕೂಳೂರು ನದಿಯ ಸೇತುವೆ ಬಳಿ ಕಪ್ಪು ಬಣ್ಣದ ಬಿಎಂಡಬ್ಲ್ಯು ಕಾರು ಪತ್ತೆಯಾಗಿದೆ.

ದೇರ್ ಅಲ್-ಬಾಲಾ: ಮಧ್ಯ ಗಾಜಾ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 21 ಜನರು ಮೃತಪಟ್ಟಿದ್ದಾರೆ ಎಂದು ಪ್ಯಾಲೇಸ್ತೀನ್ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ದೇರ್ ಅಲ್-ಬಲಾಹ್ ಪಟ್ಟಣದ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಯ ಬಳಿ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುತ್ತಿರುವ ಮಸೀದಿ ಮೇಲೆ ದಾಳಿ ನಡೆಸಲಾಗಿದೆ ಎಂದು ಆಸ್ಪತ್ರೆ