ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಸೂರತ್: 2019ರ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ಸೆಷನ್ಸ್ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದ್ದು, ಮುಂದಿನ ವಿಚಾರಣೆಯನ್ನು ಮೇ 3ಕ್ಕೆ ನಿಗದಿಪಡಿಸಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಇಂದು ಮೇಲ್ಮನವಿ ಸಲ್ಲಿಸಿದರು.

ಬೆಂಗಳೂರು: ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿ ಎರಡು ಮನಸ್ಸಿನಲ್ಲಿದೆ. ಟಿಕೆಟ್ ನೀಡದಿರಲು ಪಕ್ಷವು ಈಗಾಗಲೇ ನಿರ್ಧಾರ ಕೈಗೊಂಡಿದ್ದು, ಹೊಸ ಮುಖಕ್ಕಾಗಿ ಹುಡುಕಾಟ ನಡೆಸುತ್ತಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ಈಶ್ವರಪ್ಪ ಬಿಜೆಪಿಯಲ್ಲಿ ಕುರುಬ ಸಮುದಾಯದ ಪ್ರಮುಖ ನಾಯಕರಾಗಿದ್ದು, ಕಟ್ಟಾ

ಬೆಂಗಳೂರು: ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಪರ್ವ ಗರಿಗೆದರಿದೆ. ಅಸಮಾಧಾನಗೊಂಡ ಶಾಸಕರು, ಮಾಜಿ ಶಾಸಕರು, ಬೇರೊಂದು ಪಕ್ಷಕ್ಕೆ ನೆಗೆಯುತ್ತಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಇದು ಪ್ರತಿನಿತ್ಯ ಕಂಡುಬರುತ್ತಿದೆ. ಕೂಡ್ಲಿಗೆ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

ಸಾಂಬಾ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಡ್ರೋನ್‌ನಿಂದ ಬೀಳಿಸಲಾಗಿದೆ ಎಂದು ಶಂಕಿಸಲಾದ ಪ್ಯಾಕೇಜ್‌ನಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ಸಾಮಗ್ರಿಗಳ ಸಂಗ್ರಹವನ್ನು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಮುಂಜಾನೆ ರಖ್ ಬರೋತಿಯ ರೈಲ್ವೆ ಮಾರ್ಗದ ಬಳಿ ಪತ್ತೆಯಾದ ಪ್ಯಾಕೇಜ್‌ನಲ್ಲಿ ಚೀನಾ ನಿರ್ಮಿತ ಮೂರು

ರಾಂಚಿ (ಜಾರ್ಖಂಡ್): ಜಾರ್ಖಂಡ್ ರಾಜ್ಯದ ಛತ್ರದಲ್ಲಿ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿದ್ದು, ಐವರು ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಹತ್ಯೆಗೀಡಾದ ಐವರ ಪೈಕಿ ಇಬ್ಬರಿಗೆ ತಲಾ 25 ಲಕ್ಷ ರೂ ಹಾಗೂ ಮೂವರ ಪತ್ತೆಗೆ ತಲಾ 5 ಲಕ್ಷ ರೂ ಇನಾಮು ಘೋಷಣೆ ಮಾಡಲಾಗಿತ್ತು. ಸಿಆರ್‌ಪಿಎಫ್ ಕೋಬ್ರಾ ಬೆಟಾಲಿಯನ್, ಜೆಎಪಿ ಮತ್ತು ಐಆರ್‌ಬಿ ಜೊತೆಗೆ ಪಲಾಮು

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನಕ್ಕೊಳಗಾಗಿರುವ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ರೋಸ್ ಅವೆನ್ಯೂ ಕೋರ್ಟ್ ಏಪ್ರಿಲ್ 17 ರವರೆಗೆ ವಿಸ್ತರಿಸಿದೆ. ಸಿಸೋಡಿಯಾ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾದ ಹಿನ್ನೆಲೆಯಲ್ಲಿ ಎಎಪಿ ನಾಯಕನ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಕೋರಿ

ವಾಷಿಂಗ್ಟನ್:ಏ 02 , ಶುಕ್ರವಾರದ ಮುಂಜಾನೆಯಿಂದ ಶನಿವಾರದವರೆಗೆ ಅಮೆರಿಕದ ದಕ್ಷಿಣ ಮತ್ತು ಮಧ್ಯ ಪಶ್ಚಿಮ ಭಾಗದಲ್ಲಿ ಬೀಸಿದ ಭೀಕರ ಸುಂಟರಗಾಳಿ ಮತ್ತು ಚಂಡಮಾರುತಕ್ಕೆ ಕನಿಷ್ಠ 21ಸಾವನ್ನಪ್ಪಿ, ಹಲವರು ಗಂಭೀರ ಗಾಯಗೊಂಡು, ಅಪಾರ ಆಸ್ತಿ ಪಾಸ್ತಿ ನಷ್ಟ ಉಂಟುಮಾಡಿದ ಘಟನೆ ನಡೆದಿದೆ. ರಾಷ್ಟ್ರೀಯ ಹವಾಮಾನ ಸೇವೆಯ ಚಂಡಮಾರುತ ಮುನ್ಸೂಚನಾ ಕೇಂದ್ರದ ಮಾಹಿತಿ

ಕುವೈತ್‌:ಏ 02.ಕುವೈತ್‌ನಲ್ಲಿ ಭಾರತೀಯ ವಲಸಿಗರೇ ಹೆಚ್ಚಾಗಿದ್ದಾರೆ. ಒಳ್ಳೆಯ ಉದ್ಯೋಗ , ವೇತನದ ಕನಸಿನೊಂದಿಗೆ ಅರಬ್ ದೇಶದಕ್ಕೆ ವಲಸೆ ಹೋಗಿರುವ ಭಾರತೀಯರಿಗೆ ಅದರಲ್ಲೂ ಚಾಲಕರಿಗೆ ಇದೀಗ ಉದ್ಯೋಗ ಅಭದ್ರತೆ ಶುರುವಾಗಿದೆ. ಕುವೈತ್ ಸರ್ಕಾರ ತನ್ನ ದೇಶದಲ್ಲಿರುವ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ, ಹಾಗೂ ವಿಶ್ವವಿದ್ಯಾನಿಲಯದಿಂದ ಪದವಿ ಪಡೆಯದೇ ಚಾಲಕರಾಗಿ ದುಡಿಯುತ್ತಿರುವ ವಿದೇಶಿ ಚಾಲಕರ

ಬೆಂಗಳೂರು: ನಗರದ ಪಾರ್ಕ್ನಲ್ಲಿ ಸ್ನೇಹಿತನ ಜೊತೆ ಕುಳಿತಿದ್ದ ಯುವತಿಯನ್ನು ನಾಲ್ವರು ಕಾಮುಕರು ಎಳೆದೊಯ್ದು ಚಲಿಸುತ್ತಿರುವ ಕಾರ್‌ನಲ್ಲಿಯೇ ಸಾಮೂಹಿಕ ಅತ್ಯಾಚಾರ ನಡೆಸಿದ ಪೈಶಾಚಿಕ ಕೃತ್ಯ ನಗರದ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಮಾರ್ಚ್ 25ರ ರಾತ್ರಿ 10 ಗಂಟೆಗೆ ಘಟನೆ ನಡೆದಿದೆ. ಸರ್ಕಾರಿ

ಸುರತ್ಕಲ್: ಕುಳಾಯಿ ಗ್ರಾಮದ ಮಾನಸ (22ವರ್ಷ) ಇದೇ ಮಾ.25 ರಿಂದ ಕಾಣೆಯಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. 5 ಅಡಿ ಎತ್ತರ, ಬಿಳಿ ಮೈ ಬಣ್ಣ, ಕಪ್ಪು ಕೂದಲು, ಎಣ್ಣೆ ಕಪ್ಪು ಮೈಬಣ್ಣ, ತೆಳ್ಳಗಿನ ಶರೀರ, ಬಲ ಕೈಯಲ್ಲಿ ನವೀಲು ಗರಿಯ