ಬೆಂಗಳೂರು, ಜು.01,ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇ ಗೌಡಗೆ ಜಾಮೀನು ಮಂಜೂರಾಗಿದೆ. ದೇವರಾಜೇ ಗೌಡ ಜಾಮೀನು ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ.ಜಿ ಉಮಾ ಅವರಿದ್ದ ಏಕಸದಸ್ಯ ಪೀಠ ಜಾಮೀನು ನೀಡಿ ಇಂದು ಆದೇಶ ನೀಡಿದೆ. ಈ ಹಿಂದೆ ಹಾಸನದ 5ನೇ ಹೆಚ್ಚುವರಿ
ಬೆಂಗಳೂರು, (ಜುಲೈ 01) : ಮೈಮೇಲೆ ಕೆಜಿಗಟ್ಟಲೇ ಚಿನ್ನ, ಕೈಯಲ್ಲಿ ಎಕೆ 47, ಹಿಂದೆ-ಮುಂದೆ ಬಾಡಿಗಾರ್ಡ್ಸ್ ಇಟ್ಟುಕೊಂಡು ಸುಂದರಿಯರ ನಡುವೆ ರೀಲ್ಸ್ ಶೋಕಿ ಮಾಡುತ್ತಿದ್ದವ ಇದೀಗ ಜೈಲು ಸೇರಿದ್ದಾನೆ. ಈ ವ್ತಕ್ತಿಯ ಹೆಸರು ಅರುಣ್ ಕಟಾರೆ ಅಂತ. ಈತ ಎಕೆ 47 ರೈಫಲ್ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್ ಆಗಿಟ್ಟುಕೊಂಡು,
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯು ಸೋಮವಾರ ಬೆಳಗ್ಗೆ ನಗರದ ಪತ್ರಿಕಾಭವನದಲ್ಲಿ ಜರುಗಿತು. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ಪತ್ರಿಕೆಗಳು ಜನರ ಧ್ವನಿಯಾಗಿ ಸ್ವಾತಂತ್ರ್ಯ ಪೂರ್ವದಿಂದಲೇ ಕಾರ್ಯ ನಿರ್ವಹಿಸುತ್ತ ಬಂದಿವೆ.
ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಇಂಡಿಯಾ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಮತ್ತು ಪರಿಗಣಿತ ವಿಶ್ವವಿದ್ಯಾನಿಲಯ, ಪ್ರಮುಖ ಬಹುಶಿಸ್ತೀಯ ವಿಶ್ವವಿದ್ಯಾನಿಲಯವು ಡಾ. ರವಿರಾಜ ಎನ್. ಸೀತಾರಾಮ್, ನಿರ್ದೇಶಕ – ಯೋಜನೆ ಮತ್ತು ಮಾನಿಟರಿಂಗ್, ಆಗಿದ್ದ ಇವರು ಮುಖ್ಯ ನಿರ್ವಹಣಾ ಅಧಿಕಾರಿಯಾಗಿ (ಸಿಓಓ) ನೇಮಕಗೊಂಡಿದ್ದಾರೆ. ಡಾ. ರವಿರಾಜ ಅವರು
ಕೋಟ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್‍ತಿ (97) ವಯೋಸಹಜ ಅಸೌಖ್ಯದಿಂದ ಜೂ.30ರಂದು ನಿಧನ ಹೊಂದಿದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರು ಉತ್ತಮ ಕೃಷಿಕರಾಗಿದ್ದರು.ಪೂಜಾರಿಯವರು ತನ್ನ ರಾಜಕೀಯ ಜೀವನದಲ್ಲಿ ಉನ್ನತ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಪೀಡಿತ ಪ್ರದೇಶಗಳಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿದ್ದು, ಭೂಕುಸಿತಕ್ಕೆ ಗುರಿಯಾಗಿರುವ ಮಂಗಳೂರು ಸಮೀಪದ ಪಂಜಿಮಗರು ಎಂಬಲ್ಲಿ ಮತ್ತೊಂದು ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ. ಭಾರೀ ಮಳೆಯಿಂದ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿರುವ ಸುಬ್ರಹ್ಮಣ್ಯ ಪ್ರದೇಶದಲ್ಲಿ
ಪುಣೆ: ಮಳೆಗಾಲದಲ್ಲಿ ಜನರು ಜಲಸಮಾಧಿಯಾಗುವ ದುರ್ಘಟನೆಗಳು ಮುಂದುವರಿದಿದೆ. ಮಹಾರಾಷ್ಟ್ರ ರಾಜ್ಯದ ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಹಿಂಭಾಗದ ಜಲಪಾತದಲ್ಲಿ ಮುಳುಗಿ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ಜಲಸಮಾಧಿಯಾಗಿದ್ದಾರೆ. ನಿನ್ನೆ ಭಾನುವಾರ ಮಧ್ಯಾಹ್ನ 12:30 ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತರನ್ನು ಶಹಿಸ್ತಾ ಅನ್ಸಾರಿ (36), ಅಮಿಮಾ ಅನ್ಸಾರಿ (13)
ಹೊಸದಿಲ್ಲಿ: ದಿಲ್ಲಿಯಲ್ಲಿ ಸುರಿಯುತ್ತಿರುವ ಮಳೆಗೆ ಎರಡೇ ದಿನಗಳ ಅಂತರದಲ್ಲಿ ಒಟ್ಟು 11 ಮಂದಿ ಬಲಿಯಾಗಿದ್ದಾರೆ. ಶನಿವಾರ ಒಂದೇ ದಿನ ನಡೆದಿರುವ ಮಳೆ ಸಂಬಂಧಿ ಅವಘಡಗಳಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ ಮುಂಗಾರು ಮಳೆಯ ಅವಾಂತರಗಳನ್ನು ಎದುರಿಸಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರಗಳು ತಿಳಿಸಿದ್ದರೂ, ರಸ್ತೆಗಳು ಜಲಾವೃತಗೊಂಡಿರುವುದರಿಂದ ಈವರೆಗೆ ಒಟ್ಟು
ಮುಂಬೈ : ಟಿ20 ವಿಶ್ವಕಪ್ ನಲ್ಲಿ ಭಾರತ ಚಾಂಪಿಯನ್ ಆದ ಬೆನ್ನಿಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾದಿಯಲ್ಲಿ ರವೀಂದ್ರ ಜಡೇಜ ಕೂಡ ಸಾಗಿದ್ದಾರೆ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಜಯ ಸಾಧಿಸಿದ
ಈಶಾನ್ಯ ಬೊರ್ನೊ ರಾಜ್ಯದಲ್ಲಿ ಶನಿವಾರ ಶಂಕಿತ ಮಹಿಳಾ ಆತ್ಮಹತ್ಯಾ ಬಾಂಬರ್ ಗಳ ಸರಣಿ ದಾಳಿಯಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ ಮತ್ತು 30 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗ್ವೋ ಜಾ ಪಟ್ಟಣದಲ್ಲಿ ಮದುವೆ, ಅಂತ್ಯಕ್ರಿಯೆ ಮತ್ತು ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿದೆ. ಈ ಪ್ರದೇಶದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಇಸ್ಲಾಮಿಸ್ಟ್