ಬೆಂಗಳೂರು: ಕೋವಿಡ್-19 ಹೆಚ್ಚಳ ಭೀತಿ ನಡುವೆಯೇ ಶೀತ ಮತ್ತು ಕೆಮ್ಮನ್ನು ಲಘುವಾಗಿ ತೆಗೆದುಕೊಳ್ಳಬೇಡಿ.. ಅವುಗಳು ಈಗ ಸಾಮಾನ್ಯ ರೋಗ ಲಕ್ಷಣಗಳಲ್ಲ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ವೈದ್ಯರು ಮತ್ತು ಅಧಿಕಾರಿಗಳು ನಾಗರಿಕರಿಗೆ ಎಚ್ಚರಿಕೆ ನೀಡಿದ್ದು, ಇನ್ನು ಮುಂದೆ ಶೀತ ಮತ್ತು ಕೆಮ್ಮನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು
ಉಡುಪಿ:ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಈಗ ಹೊಸದಾಗಿ ಕುಡಿಯುವ ನಳ್ಳಿ ನೀರಿನ ಕನೆಕ್ಷನಿಗೆ ಅವಕಾಶ ಇಲ್ಲ ಸಾರ್ವಜನಿಕರು ಬಡವರು ಹೊಸದಾಗಿ ನಳ್ಳಿ ನೀರಿನ ಜೋಡಣೆಗೆ ಅರ್ಜಿ ಸಲ್ಲಿಸಿದರೆ ಈಗ ಸಿಗುವುದಿಲ್ಲ ಎಂಬ ಉತ್ತರ ಉಡುಪಿ ನಗರಸಭೆಯ ಅಧಿಕಾರಿಗಳಿಂದ ಬರುತ್ತದೆ. ಆದರೆ ನಿನ್ನೆ ದಿನ ಉಡುಪಿಯಲ್ಲಿ ಕಾರ್ಯಚರಿಸುತ್ತಿರುವ ಜಯಲಕ್ಷ್ಮಿ ಸಿಲ್ಕ್ ಇವರಿಗೆ ಇವರ
ಮಂಗಳೂರು: ಉಡುಪಿಯಲ್ಲಿ ಚತುರ್ಥ ಬಾರಿಗೆ ಪರ್ಯಾಯ ಸರ್ವಜ್ಞ ಪೀಠಾರೋಹಣಗೈಯ್ಯಲಿರುವ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ರವಿವಾರ ಮಂಗಳೂರಿನಲ್ಲಿ ಪೌರ ಸಮ್ಮಾನ ನೆರವೇರಲಿದೆ ಎಂದು ತಿಳಿಯಲಾಗಿದೆ. ಅಪರಾಹ್ನ 3ಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಶರವು ದೇಗುಲದಿಂದ ಮೆರವಣಿಗೆ ನಡೆದು ಸಂಜೆ 4ಕ್ಕೆ ರಾಧಾಕೃಷ್ಣ ಮಂದಿರದಲ್ಲಿ ಮೇಯರ್ ಸುಧೀರ್
ಉಡುಪಿ:ಕಲ್ಕೂರ್ ಪ್ರತಿಷ್ಠಾನ ವತಿಯಿಂದ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಭಾವಿ ಪರ್ಯಾಯ ಪುತ್ತಿಗೆ ಶ್ರೀಪಾದರಿಗೆ ವೈಭವದ "ತುಲಾಭಾರ"ವನ್ನು ನೆರವೇರಿಸಲಾಯಿತು.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಂತ್ಯ ಕಾಣುವುದು ನಿಶ್ಚಿತ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಶುಕ್ರವಾರ ಹೇಳಿದ್ದಾರೆ. ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೇವೇಗೌಡರು, ಕಳೆದ 60 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನಗೇ ಇವರು ಹೇಳ್ತಾರೆ.
ಹುಬ್ಬಳ್ಳಿ: ಅಯೋಧ್ಯೆ ರಾಮಜನ್ಮಭೂಮಿ ಹೋರಾಟದ ಪ್ರಕರಣದಲ್ಲಿ ಆರೋಪಿಯಾಗಿರುವ ಕರಸೇವಕ ಶ್ರೀಕಾಂತ ಪೂಜಾರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಡಿಸೆಂಬರ್ 29ರಂದು ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪ್ರಕರಣ ಮೂರನೇ ಆರೋಪಿಯಾಗಿರುವ
ಸೊಮಾಲಿಯಾ: 15 ಮಂದಿ ಭಾರತೀಯರಿದ್ದ ಲೈಬೀರಿಯನ್ ಧ್ವಜದ ಹಡಗನ್ನು ಸೊಮಾಲಿಯಾ ಕರಾವಳಿಯ ಬಳಿ ಅಪಹರಣ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ಲೈಬೀರಿಯನ್ ಧ್ವಜದ ಹಡಗು ‘ಎಂವಿ ಲೀಲಾ ನಾರ್ಫೋಕ್’ ಎಂದು ಗುರುತಿಸಲಾಗಿದ್ದು, ಇದರಲ್ಲಿ 15 ಭಾರತೀಯ ಸಿಬ್ಬಂದಿಗಳು ಇದ್ದರು ಎನ್ನಲಾಗಿದ್ದು, ಹಡಗನ್ನು ಭಾರತೀಯ ನೌಕಾಪಡೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು
ನವದೆಹಲಿ:ಜ 04: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದಾಗ ಸಂದರ್ಭದಲ್ಲಿ ಸ್ನಾರ್ಕ್ಲಿಂಗ್ ಪ್ರಯತ್ನಿಸಿದ "ಉಲ್ಲಾಸದಾಯಕ ಅನುಭವಗಳ"ಝಲಕ್ ಗಳನ್ನು ಗುರುವಾರ ಹಂಚಿಕೊಂಡಿದ್ದಾರೆ. ಈ ಭೇಟಿ ಸಂದರ್ಭ ಪೋಟೋಗಳನ್ನು ಪ್ರಧಾನಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, "ಸಾಹಸ ಮಾಡಲು ಬಯಸುವವರ ಪಟ್ಟಿಯಲ್ಲಿ ಲಕ್ಷದ್ವೀಪ ಇರಬೇಕು.
ಉಡುಪಿ:ಲೋಕಸಭೆಯಲ್ಲಿ ಏಕಕಾಲಿಕ ವ್ಯಾಖ್ಯಾನಕಾರ (ಕನ್ಸಲ್ಟೆಂಟ್ ಇಂಟರ್‌ಪ್ರಿಟರ್ ) ಹುದ್ದೆಗೆ ಪತ್ರಕರ್ತೆ ಸುಪ್ರೀತಾ ಹೆಬ್ಬಾರ್ ನೇಮಕಗೊಂಡಿದ್ದಾರೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಶಿವಪುರದ ಇವರು ಸುಮಾರು 15 ವರ್ಷ ವಿವಿಧ ರಾಜ್ಯಮಟ್ಟದ ಸುದ್ದಿಸಂಸ್ಥೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಆಟೊಮೊಬೈಲ್ ಪತ್ರಕರ್ತೆಯಾಗಿ, "ಡ್ರೈವ್ ದಿ ಫೇಮ್” ಎಂಬ ಹೆಸರಿನ ಆಟೊಮೊಬೈಲ್ ಯೂಟ್ಯೂಬ್ ಚಾನೆಲ್
ಉಡುಪಿ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ರವರು ಉಡುಪಿ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿ, ಜಿಲ್ಲೆಗೆ ಭೇಟಿ ಮಾಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿ ಉಡುಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ