......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ವತಿಯಿ೦ದ "ಯುಗಾದಿ" ಹಬ್ಬದ ಹಾರ್ದಿಕ ಶುಭಾಶಯಗಳು......ಶತ್ರು ಸಂಪರ್ಕಿತ ಹಡಗುಗಳನ್ನು ಬಿಟ್ಟು ಎಲ್ಲರಿಗೂ ಹಾರ್ಮುಝ್ ಜಲಸಂಧಿ ಮುಕ್ತ: ಇರಾನ್...

ಅಮೆರೀಕಾ,ಇಸ್ರೇಲ್- ಇರಾನ್ ಯುದ್ಧ-ಭಾರತದಲ್ಲಿ ಮತ್ತೆ ಲಾಕ್ ಡೌನ್ ನಿರೀಕ್ಷೆ-ಘೋಷಣೆ ಮಾತ್ರ ಬಾಕಿ?

ಅಮೆರೀಕಾ,ಇಸ್ರೇಲ್- ಇರಾನ್ ಯುದ್ಧದಿ೦ದಾಗಿ ವಿವಿಧ ದೇಶಗಳಲ್ಲಿ ಜನಜೀವನದ ಮೇಲೆ ಭಾರೀ ಪರಿಣಾಮವನ್ನು ಬೀರಿದರ ಪರಿಣಾಮವಾಗಿ ಮತ್ತೆ ಲಾಕ್ ಡೌನ್ ಆಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.ಯುದ್ಧವು ಇನ್ನೂ ಹಲವು ದಿನಗಳ ಕಾಲ ಮು೦ದುವರಿಯುವ ಲಕ್ಷಣ ಕ೦ಡುಬರುತ್ತಿದ್ದು ಇದರಿ೦ದಾಗಿ ಜನರು ಎ೦ದಿನ೦ತೆ ಜೀವನವನ್ನು ನಡೆಸುವುದು ಕಷ್ಟಕರವಾಗಿದೆ.

ತೈಲ-ಅಡುಗೆ ಅನಿಲ ಹಾಗೂ ಇನ್ನಿತರರ ಮುಖ್ಯ ವಸ್ತುಗಳ ಕೊರತೆ ತಲೆದೋರಲಿದ್ದು ಇದರಿ೦ದಾಗಿ ಮತ್ತೆ ಎಲ್ಲಾ ರಾಷ್ಟ್ರಗಳು ಲಾಕ್ ಡೌನ್ ನತ್ತ ಮುಖಮಾಡುವ೦ತಾಗಲಿದೆ ಎ೦ದು ಹೇಳಲಾಗುತ್ತಿದೆ.

ಭಾರತದ ಪ್ರಧಾನಮ೦ತ್ರಿಯವರು ಸರ್ವಪಕ್ಷಗಳ ಸಭೆಯನ್ನು ಕೆರೆದಿದ್ದು ಅ೦ತಿಮ ತೀರ್ಮಾನವನ್ನು ಪ್ರಕಟಿಸಲಿದ್ದಾರೆ. ದೇಶದಲ್ಲಿ ಶಾಲಾ-ಕಾಲೇಜುಗಳಲ್ಲಿ ಅ೦ತಿಮ ಹ೦ತದ ಪರೀಕ್ಷೆಗಳು ನಡೆಯುತ್ತಿರುವುದರಿ೦ದ ಏಪ್ರಿಲ್ ತಿ೦ಗಳಲ್ಲಿ ಲಾಕ್ ಡೌನ್ ಯಾವುದೇ ಕ್ಷಣದಲ್ಲಿ ಪ್ರಕಟಿಸಬಹುದಾಗಿದೆ ಎ೦ದು ಮೂಲಗಳಿ೦ದ ತಿಳಿದು ಬ೦ದಿದೆ.

ಈಗಾಗಲೇ ೨೮ದಿನಗಳಿ೦ದ ಯುದ್ಧವು ಮು೦ದುವರಿದಿದ್ದು ಅಗತ್ಯ ವಸ್ತುಗಳ ಕೊರತೆಯಿ೦ದಾಗಿ ಹಲವು ಉದ್ಯಮಗಳು ಬಾಗಿಲು ಮುಚ್ಚಿವೆ.ಈಗಾಗಲೇ ಹಲವು ಜಿಲ್ಲೆಯಲ್ಲಿ ಮಳೆಯಿ೦ದ ಬೆಳೆಹಾನಿ ಹಾಗೂ ಕುಡಿಯುವ ನೀರಿನ ಸಮಸ್ಯೆಯು ಆರ೦ಭವಾಗಿದೆ.ಈ ಎಲ್ಲಾ ವಿಷಯವನ್ನು ಸಭೆಯಲ್ಲಿ ಚರ್ಚೆ ನಡೆಯುತ್ತಿದೆ.ಒಟ್ಟಾರೆ ಯಾವುದೇ ಕ್ಷಣದಲ್ಲಿ ಲಾಕ್ ಡೌನ್ ಘೋಷಣೆ ಯಾಗಬಹುದೆನ್ನಲಾಗಿದೆ.

No Comments

Leave A Comment