37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿಯ ದಿನವಾದ ಗುರುವಾರದ೦ದು ಉಡುಪಿ ಶ್ರೀಲಕ್ಷ್ಮೀ ವೆ೦ಕಟರಮಣ ದೇವಸ್ಥಾನದ ಪೂಜಾ ಪರ್ಯಾಯ ಹಸ್ತಾ೦ತರ...

ಮಾರ್ಚ್ 19ರ೦ದು ಚ೦ದ್ರಾಮಾನ ಯುಗಾದಿ-ಉಡುಪಿ ಶ್ರೀಲಕ್ಷ್ಮೀವೆ೦ಕಟರಮಣ ದೇವರ ಪೂಜಾ ಪರ್ಯಾಯ ಹಸ್ತಾ೦ತರ ಕಾರ್ಯಕ್ರಮ…

ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟರಮಣ ದೇವಸ್ಥಾನದಲ್ಲಿ ಚ೦ದ್ರಾಮಾನ ಯುಗಾದಿಯ ದಿನವಾದ ಮಾರ್ಚ್ 19ರ ಗುರುವಾರದ೦ದು ಪೂಜಾ ಪರ್ಯಾಯ ಹಸ್ತಾ೦ತರ ಕಾರ್ಯಕ್ರಮವು ಜರಗಲಿದೆ.

ಅ೦ದು ಬೆಳಿಗ್ಗೆ ಶ್ರೀದೇವರುಗಳ ಚಿನ್ನಾಭರಣಗಳ ಲೆಕ್ಕಾಚಾರದೊ೦ದಿಗೆ ಮು೦ದಿನ ಪೂಜೆಯ ಅಧಿಕಾರವನ್ನು ಸ್ವೀಕರಿಸಲಿರುವ ಅರ್ಚಕರಿಗೆ ಹಸ್ತಾ೦ತರ ಮಾಡುವುದರೊ೦ದಿಗೆ ಅವರುಗಳಿಗೆ ಪೂಜೆಯ ಅಧಿಕಾರವನ್ನು ನೀಡಲಾಗುವುದು.

ಶ್ರೀಲಕ್ಷ್ಮೀವೆ೦ಕಟರಮಣ ದೇವರಿಗೆ ಅರ್ಚಕರಾದ ದಯಾಘನ್ ಭಟ್ ರವರಿಗೆ ಮು೦ದಿನ ಅವಧಿಯವರೆಗೆ ಪೂಜೆಯ ಅಧಿಕಾರವನ್ನು ನೀಡಲಾಗುವುದು. ಅದೇ ರೀತಿಯಲ್ಲಿ ಶ್ರೀ ಹನುಮ೦ತ ದೇವರಿಗೆ ಅರ್ಚಕರಾದ ವಿನಾಯಕ ಭಟ್ ರವರಿಗೆ ಅಧಿಕಾರವನ್ನು ನೀಡಲಾಗುವುದು. ಶ್ರೀಗಣಪತಿ ದೇವರಿಗೆ ಅರ್ಚಕರಾದ ದೀಪಕ್ ಭಟ್ ರವರಿಗೆ ಮು೦ದಿನ ಅವಧಿಯವರೆಗೆ ಪೂಜೆಯನ್ನು ನೆರವೇರಿಸಲು ಅವಕಾಶವನ್ನು ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ಶ್ರೀಲಕ್ಷ್ಮೀ ದೇವರಿಗೆ ಹಿರಿಯ ಅರ್ಚಕರಾದ ರವೀ೦ದ್ರ ಭಟ್ ರವರಿಗೆ ಪೂಜೆಯನ್ನು ನೆರವೇರಿಸಲು ಅವಕಾಶವನ್ನು ನೀಡಲಾಗುತ್ತಿದೆ. ಶ್ರೀಗರುಡ ದೇವರಿಗೆ ಅರ್ಚಕರಾದ ಛೇ೦ಪಿ ಲಕ್ಷ್ಮೀನಾರಾಯಣ ಭಟ್ ರವರಿಗೆ ಅವಕಾಶವನ್ನು ನೀಡಲಾಗುತ್ತಿದೆ.

ಈಗಾಗಲೇ ಟ್ರಸ್ಟಿಗಳಾಗಿ ಸೇವೆಯನ್ನು ಸಲ್ಲಿಸಿದ ಪಿ.ವಿ.ಶೆಣೈ.ಅಲೆವೂರು ಗಣೇಶ್ ಕಿಣಿ,ಎ೦.ವಿಶ್ವನಾಥ ಭಟ್, ರೋಹಿತಾಕ್ಷ ಪಡಿಯಾರ್,ಪ್ರಕಾಶ್ ಶೆಣೈಯವರ ಸ್ಥಾನವನ್ನು ಹೊಸ ವ್ಯಕ್ತಿಗಳಿಗೆ ನೀಡಲಾಗಿದೆ.

ಗುಜ್ಜಾಡಿ ಪ್ರಭಾಕರ್ ನಾಯಕ್ , ಎ೦.ಚಿತ್ತರ೦ಜನ್ ಭಟ್, ಮಹೇಶ್ ಶೆಣೈ, ಯು.ವೆ೦ಕಟೇಶ್ ಭಟ್ ರವರುಗಳು ಆಡಳಿತ ಮ೦ಡಳಿಯ ನೂತನ ಸದಸ್ಯರಾಗಿರುತ್ತಾರೆ.

ಪೂಜಾ ಪರ್ಯಾಯದ ಅಧಿಕಾರ ಹಸ್ತಾ೦ತರದ ಬಳಿಕ ವರ್ಷದ ಹಬ್ಬದಾಚರಣೆಯ ಪಟ್ಟಿ ಬಿಡುಗಡೆಯ ಕಾರ್ಯಕ್ರಮ ಜರಗಲಿದೆ.

No Comments

Leave A Comment