Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!...ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ನಿರ್ಮೂಲನೆ ಮಾಡುತ್ತೇವೆ: ಇಸ್ರೇಲ್ ಬೆದರಿಕೆ...

ಸರ್ವೋಚ್ಚ ನಾಯಕನ ಆಯ್ಕೆಗಾಗಿ 88 ಸದಸ್ಯರು ಸೇರಿದ್ದ ಕಟ್ಟಡ ಧ್ವಂಸಗೈದ ಇಸ್ರೇಲ್; 9 ಸಾವಿರ ಕೋಟಿಯ ಅಮೆರಿಕದ ರೇಡಾರ್ ಧ್ವಂಸ!

ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಿಂದಾಗಿ ಇರಾನ್ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ನಾಯಕನನ್ನು ಕಳೆದುಕೊಂಡಿರುವ IRGC ಮನಬಂದಂತೆ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ತೀವ್ರಗೊಳಿಸಿದೆ. ಇದು ಮುಸ್ಲಿಂ ರಾಷ್ಟ್ರಗಳಲ್ಲಿ ಇರಾನ್ ಕುರಿತು ಅಸಹನೆಗೆ ಕಾರಣವಾಗಿದೆ. ಹೀಗಾಗಿ ಇರಾನ್‌ ಹೊಸ ಸರ್ವೋಚ್ಚ ನಾಯಕನ ಚುನಾವಣಾ ಪ್ರಕ್ರಿಯೆ ಶುರು ಮಾಡಿತ್ತು. 88 ಹಿರಿಯ ಧಾರ್ಮಿಕ ಮುಖಂಡರನ್ನು ಒಳಗೊಂಡಿರುವ ತಂಡ ದೇಶದ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ.

ವರದಿಗಳ ಪ್ರಕಾರ, ಕೋಮ್ ನಗರದಲ್ಲಿ ವೈಮಾನಿಕ ದಾಳಿ ನಡೆಸಿದೆ. ಹಿರಿಯ ಧಾರ್ಮಿಕ ಮುಖಂಡರು ಸೇರಿದ್ದ ತಜ್ಞರ ಸಭೆ ಕಟ್ಟಡದ ಮೇಲೆ ಇಸ್ರೇಲ್ ದಾಳಿ ಮಾಡಿದೆ ಎನ್ನಲಾಗಿದೆ. ದಾಳಿಯಲ್ಲಿ ಕಟ್ಟಡಕ್ಕೆ ವ್ಯಾಪಕ ಹಾನಿಯಾಗಿದೆ. ಇನ್ನು ದಾಳಿ ವೇಳೆ ಸಭೆಯಲ್ಲಿ ತೊಡಗಿದ್ದ ಧಾರ್ಮಿಕ ಮುಖಂಡರು ಬದುಕಿದ್ದಾರೋ? ಇಲ್ಲವೋ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಯುದ್ಧ ಶುರುವಾದ ಮೊದಲ ದಿನವೇ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಅಮೆರಿಕ ಮತ್ತು ಇಸ್ರೇಲ್ ಹತ್ಯೆ ಮಾಡಿತ್ತು. ಅಂದಿನಿಂದ ಇರಾನ್ ನಲ್ಲಿ ಸರ್ವೋಚ್ಚ ನಾಯಕನ ಸ್ಥಾನ ಖಾಲಿ ಇದೆ.

IRGC ಹೇಳಿಕೆಯ ಪ್ರಮುಖ ಅಂಶಗಳು (IRNA ಮತ್ತು ಇತರ ಇರಾನಿನ ಮಾಧ್ಯಮಗಳ ಪ್ರಕಾರ): ದಾಳಿಯು ಬೆಳಗಿನ ಜಾವ ನಡೆಯಿತು. 20 ಡ್ರೋನ್‌ಗಳು ಮತ್ತು 3 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಲಾಯಿತು. ಮುಖ್ಯ ಕಮಾಂಡ್ ಮತ್ತು ಸಿಬ್ಬಂದಿ ಕಟ್ಟಡವನ್ನು ನಾಶಪಡಿಸಲಾಯಿತು. Early warning system ಅನ್ನು ಕತಾರ್‌ನಲ್ಲಿರುವ ಅಲ್ ಉದೈದ್ ವಾಯುನೆಲೆಯಲ್ಲಿ ಸ್ಥಾಪಿಸಲಾಗಿತ್ತು. ಇದು ವಿಶೇಷವಾಗಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ.

2013ರಲ್ಲಿ ಈ ರಾಡಾರ್ ವ್ಯವಸ್ಥೆಯನ್ನು ಅಮೆರಿಕ ಸುಮಾರು 1.1 ಬಿಲಿಯನ್ ಡಾಲರ್ ವೆಚ್ಚದಲ್ಲಿ ಸ್ಥಾಪಿಸಿತ್ತು. ಇದೀಗ ಇದನ್ನೇ ಧ್ವಂಸಗೈದಿರುವುದಾಗಿ ಇರಾನ್ ಹೇಳಿಕೊಂಡಿದೆ. US-ಇಸ್ರೇಲಿ ದಾಳಿಗೆ ಪ್ರತಿಕ್ರಿಯೆಯಾಗಿ ಆಪರೇಷನ್ ಟ್ರೂ ಪ್ರಾಮಿಸ್ 4ರ ಭಾಗವಾಗಿ ಈ ದಾಳಿಯನ್ನು ನಡೆಸಲಾಯಿತು ಎಂದು IRGC ಹೇಳಿದೆ.

No Comments

Leave A Comment