ಉಡುಪಿ ಜಿಲ್ಲಾ ಕಾ೦ಗ್ರೆಸ್ ನಲ್ಲಿ ಅಸಮಾಧಾನದ ಹೊಗೆ-ಒಬ್ಬರಿಗೆ ಒ೦ದೇ ಹುದ್ದೆ ನೀಡುವ ಬದಲು ಒಬ್ಬರಿಗೆ ಏರಡೆರಡು ಹುದ್ದೆ...ಕಾ೦ಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಅಸಮಧಾನ...
ಟೆಕ್ಸಾಸ್’ನಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ನಾಲ್ವರ ಸಾವು, ಭಯೋತ್ಪಾದಕ ಕೃತ್ಯ ಶಂಕೆ..!
ಹ್ಯೂಸ್ಟನ್: ಆಸ್ಟಿನ್‌ನ ನಗರದ ವೆಸ್ಟ್ ಸಿಕ್ಸ್‌ಥ್ ಸ್ಟ್ರೀಟ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 21 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ನಾಲ್ವರು ಸಾವನ್ನಪ್ಪಿದ್ದು, ಭಯೋತ್ಪಾದನಾ ಕೃತ್ಯ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಎಫ್’ಬಿಐ ತನಿಖೆ ಕೈಗೊಂಡಿದೆ.
ಮೃತ ಭಾರತೀಯ ವಿದ್ಯಾರ್ಥಿನಿಯನ್ನು ಸವಿತಾ ಶನ್ (ಶಣ್ಮುಗಸುಂದರಂ) ಎಂದು ಗುರುತಿಸಲಾಗಿದೆ. ಸವಿತಾ ಅವರು University of Texas at Austinನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದರು. ಪದವಿ ಪೂರ್ಣಗೊಳಿಸಲು ಕೆಲವೇ ತಿಂಗಳು ಬಾಕಿ ಇತ್ತು ಎಂದು ತಿಳಿದುಬಂದಿದೆ.
ವಿಶ್ವವಿದ್ಯಾಲಯದ ಅಧ್ಯಕ್ಷ ಜಿಮ್ ಡೇವಿಸ್ ಅವರು ಮಾತನಾಡಿ, ಸವಿತಾ ಪ್ರತಿಭಾನ್ವಿತ ವಿದ್ಯಾರ್ಥಿನಿ ಹಾಗೂ ತಂದೆ-ತಾಯಿಗೆ ಪ್ರೀತಿಯ ಮಗಳಾಗಿದ್ದಳು. ಆಕೆಯ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಮತ್ತೊಬ್ಬರನ್ನು 19 ವರ್ಷದ ರೈಡರ್ ಹ್ಯಾರಿಂಗ್ಟನ್ ಎಂದು ಗುರುತಿಸಲಾಗಿದೆ. ಘಟನೆ ಭಾನುವಾರ ಮುಂಜಾನೆ ಸುಮಾರು 1.59ಕ್ಕೆ Buford’s Backyard Beer Garden ಹೊರಭಾಗದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಶಂಕಿತ 53 ವರ್ಷದ ನ್ಡಿಯಾಗಾ ಡಿಯಾಗ್ನೆ (ಸೆನೆಗಲ್ ಮೂಲದ ಅಮೆರಿಕಾ ನಾಗರಿಕ) ಮೊದಲು ಎಸ್‌ಯುವಿಯಿಂದ ಗುಂಡು ಹಾರಿಸಿ ಬಳಿಕ ರೈಫಲ್ ಹಿಡಿದು ಹೊರಬಂದಿದ್ದಾನೆ. ತುರ್ತು ಕರೆ ಬಂದ ಕೆಲವೇ ಕ್ಷಣಗಳಲ್ಲಿ ಶಂಕಿತನನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಂಕಿತನ ನಿವಾಸದಲ್ಲಿ ಇರಾನ್ ಧ್ವಜ ಹಾಗೂ ದ್ವೇಷಕಾರಿ ಬರಹಗಳು ಪತ್ತೆಯಾಗಿದ್ದು, ಉಗ್ರ ಸಂಘಟನೆ ಹಿನ್ನೆಲೆಯ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಘಟನೆಯಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಕನಿಷ್ಠ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಗಾಯಗೊಂಡಿರುವ 14 ಮಂದಿಯಲ್ಲಿ ಭಾರತೀಯ ಕರಣ್ ಭಕ್ತ ಎಂಬ ವಿದ್ಯಾರ್ಥಿ ಕೂಡ ಇದ್ದಾರೆಂದು ತಿಳಿದುಬಂದಿದೆ. ಈ ಘಟನೆ ಟೆಕ್ಸಾಸ್ ನಲ್ಲಿ ವಾಸಿಸುವ ಭಾರತೀಯ ಮೂಲದ ಸಮುದಾಯವನ್ನು ಬೆಚ್ಚಿಬೀಳಿಸಿದೆ.
ಈ ನಡುವೆ ಆಸ್ಟಿನ್‌ನ ಭಾರತೀಯ ಸಂಘಟನೆಗಳು ಶನ್ ಕುಟುಂಬಕ್ಕೆ ನೆರವು ಒದಗಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿವೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.