......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ವತಿಯಿ೦ದ "ಯುಗಾದಿ" ಹಬ್ಬದ ಹಾರ್ದಿಕ ಶುಭಾಶಯಗಳು......ಶತ್ರು ಸಂಪರ್ಕಿತ ಹಡಗುಗಳನ್ನು ಬಿಟ್ಟು ಎಲ್ಲರಿಗೂ ಹಾರ್ಮುಝ್ ಜಲಸಂಧಿ ಮುಕ್ತ: ಇರಾನ್...

Ayatollah Ali Khamenei ಸಾವು: 40 ದಿನಗಳ ಶೋಕಾಚರಣೆಗೆ ಆದೇಶ, ಇರಾನ್ ಸೇನಾಧಿಕಾರಿ, ರಕ್ಷಣಾ ಸಚಿವ ಕೂಡ ಹತ

ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಅಮೆರಿಕ ಮತ್ತು ಇಸ್ರೇಲ್ ಸೇನಾದಾಳಿಯಲ್ಲಿ ಹತರಾದ ಬೆನ್ನಲ್ಲೇ ಇರಾನ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, 40 ದಿನಗಳ ಶೋಕಾಚರಣೆಗೆ ಸ್ಥಳೀಯ ಆಡಳಿತ ಆದೇಶ ನೀಡಿದೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಸೇನಾದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಸಾವಿಗೀಡಾಗಿದ್ದು, ಶನಿವಾರ ಮುಂಜಾನೆ ತಮ್ಮ ಕಚೇರಿಯಲ್ಲಿ ಅವರು “ತಮ್ಮ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾಗ” ಕೊಲ್ಲಲ್ಪಟ್ಟರು ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಟಿವಿ ಐಆರ್‌ಐಬಿ ಹೇಳಿದೆ.

ಈ ಬೆಳವಣಿಗೆ ಬೆನ್ನಲ್ಲೇ ಇರಾನ್ ಸ್ಥಳೀಯ ಆಡಳಿತ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಇರಾನ್ ನಾದ್ಯಂತ 40 ದಿನಗಳ ಶೋಕಾಚರಣೆಗೆ ಆದೇಶ ಹೊರಡಿಸಿದೆ. ಅಂತೆಯೇ ಖಮೇನಿಯವರ ಮಗಳು, ಅಳಿಯ ಮತ್ತು ಮೊಮ್ಮಗ ಕೂಡ ಈ ದಾಳಿಯಲ್ಲಿ ಸಾವನ್ನಪ್ಪಿದ್ದು, ಇದು ಭಯೋತ್ಪಾದಕ ದಾಳಿ ಎಂದು ಐಆರ್‌ಜಿಸಿ ಹೇಳಿದೆ. ಅಲ್ಲದೆ “ಇರಾನಿನ ರಾಷ್ಟ್ರದ ಸೇಡಿನ ಕೈ… ಅವರನ್ನು ಹೋಗಲು ಬಿಡುವುದಿಲ್ಲ” ಎಂದು ಪ್ರತೀಕಾರದ ಎಚ್ಚರಿಕೆ ನೀಡಿದೆ.

ಇರಾನ್ ಸೇನಾಧಿಕಾರಿ, ರಕ್ಷಣಾ ಸಚಿವ ಕೂಡ ಹತ

ಇದೇ ವೇಳೆ ಇಸ್ರೇಲ್ ದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ಇರಾನ್‌ ರೆವಲ್ಯೂಷ್ನರಿ ಗಾರ್ಡ್ಸ್‌ (ಐಆರ್‌ಜಿಸಿ) ಕಮಾಂಡರ್‌ ಮೊಹಮ್ಮದ್‌ ಪಕ್‌ಪೂರ್‌ ಕೂಡ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಕಳೆದ ವರ್ಷ ಮಾಜಿ ಕಮಾಂಡರ್‌ ಹುಸೇನ್‌ ಸಲಾಮಿ ಹತ್ಯೆಯ ಬಳಿಕ ಪಕ್‌ಪೂರ್‌ ಜೂನ್‌ನಲ್ಲಿ ಆ ಸ್ಥಾನಕ್ಕೇರಿದರು.

ಇವರಿಗೆ ಐಆರ್‌ಜಿಸಿಯ ಸಾಮರ್ಥ್ಯ, ಸಿದ್ಧತೆ ಮತ್ತು ಆಂತರಿಕ ಒಗ್ಗಟ್ಟು ಹೆಚ್ಚಿಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ ನಿನ್ನೆ ಆರಂಭವಾದ ಇಸ್ರೇಲ್-ಅಮೆರಿಕ ಸೇನಾ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೊದಲೇ ಎಚ್ಚರಿಕೆ ನೀಡಿದ್ದ ಅಮೆರಿಕ

ಇನ್ನು ಕಳೆದ ವಾರವಷ್ಟೇ ಪಾಕ್‌ಪೂರ್‌, ‘ಯಾವುದೇ ತಪ್ಪು ಹೆಜ್ಜೆ ಇಡಬೇಡಿ. ನಮ್ಮ ಸೇನೆ ಟ್ರಿಗರ್‌ ಮೇಲೆ ಬೆರಳಿಟ್ಟು ಸನ್ನದ್ಧವಾಗಿದೆ’ ಎಂದು ಅಮೆರಿಕಕ್ಕೆ ಎಚ್ಚರಿಸಿದ್ದರು. ಇದೀಗ ಶನಿವಾರದ ದಾಳಿಯಲ್ಲಿ ಇವರ ಹತ್ಯೆಯಾಗಿದೆ.

No Comments

Leave A Comment