ಉಡುಪಿ ಜಿಲ್ಲಾ ಕಾ೦ಗ್ರೆಸ್ ನಲ್ಲಿ ಅಸಮಾಧಾನದ ಹೊಗೆ-ಒಬ್ಬರಿಗೆ ಒ೦ದೇ ಹುದ್ದೆ ನೀಡುವ ಬದಲು ಒಬ್ಬರಿಗೆ ಏರಡೆರಡು ಹುದ್ದೆ...ಕಾ೦ಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಅಸಮಧಾನ...

ಹಣ ಸಾಗಿಸುತ್ತಿದ್ದ ಕಾರ್ಗೊ ವಿಮಾನ ಪತನ; 15 ಮಂದಿ ಸಾವು, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ನೋಟುಗಳು, ಮುಗಿಬಿದ್ದ ಜನರು

ಬೊಲಿವಿಯಾ, ಫೆ. 28: ಹೊಸ ಕರೆನ್ಸಿ ನೋಟುಗಳನ್ನು ಸಾಗುತ್ತಿದ್ದ ಬೊಲಿವಿಯನ್ ವಾಯುಪಡೆಗೆ ಸೇರಿದ ಸೇನಾ ಸರಕು ವಿಮಾನವೊಂದು (Cargo Plane) ಪತನಗೊಂಡು ಕನಿಷ್ಠ 15 ಜನರು ಸಾವನ್ನಪ್ಪಿರುವುದು ವರದಿಯಾಗಿದೆ.  ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನವು ನೇರವಾಗಿ ಹೆದ್ದಾರಿಯ ಮೇಲೆ ಅಪ್ಪಳಿಸಿದೆ. ಕ್ಷಣಾರ್ಧದಲ್ಲಿ ರಸ್ತೆಯಲ್ಲಿದ್ದ ನೂರಾರು ವಾಹನಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಜ್ಜುಗುಜ್ಜಾಗಿದೆ. ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವರ್ ಅವರ ಪ್ರಕಾರ, ಈ ಭೀಕರ ದುರಂತದಲ್ಲಿ 15 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ, ವಿಮಾನ ಬೊಲಿವಿಯನ್ ವಾಯುಪಡೆಯ ಹರ್ಕ್ಯುಲಸ್ ವಿಮಾನವಾಗಿದ್ದು, ಅದು ಕೇಂದ್ರ ಬ್ಯಾಂಕಿನಿಂದ ಇತರ ನಗರಗಳಿಗೆ ಹೊಸ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಹೊಸ ನೋಟುಗಳನ್ನು ಹೊತ್ತೊಯ್ಯುತ್ತಿದ್ದ ಈ ವಿಮಾನವು ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ನೋಟುಗಳ ಕಂತೆಗಳು ಗಾಳಿಯಲ್ಲಿ ಹಾರಿ, ರಸ್ತೆಯಾದ್ಯಂತ ಹರಡಿಕೊಂಡಿದೆ.

ಒಂದು ಕಡೆ ಸಾವು-ನೋವಿನ ಆರ್ಕ್ರಂದನ ಕೇಳಿಬರುತ್ತಿದ್ದರೆ, ಮತ್ತೊಂದು ಕಡೆ ರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ಆರಿಸಲು ಜನರು ಮುಗಿಬಿದ್ದಿರುವ ವಿಡಿಯೋ ಸೊಶೀಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಭೀಕರ ದುರಂತದಲ್ಲಿ ಅಪಘಾತದ ನಂತರ, ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

No Comments

Leave A Comment