ಪೊಲೀಸರ ಆಗಮನ
ವಿಚಾರ ತಿಳಿಯುತ್ತಲೇ ಹ್ಯಾಟ್ ಯೈ ಮತ್ತು ಥಂಗ್ ಲುಂಗ್ ಜಿಲ್ಲೆಗಳ ವಿಶೇಷ ಕಾರ್ಯಾಚರಣೆ ಪಡೆಗಳು ಮತ್ತು ಸ್ಥಳೀಯ ಪೊಲೀಸರು ಈ ಪ್ರದೇಶವನ್ನು ಸುತ್ತುವರೆದಿದ್ದಾರೆ. ಅಂತೆಯೇ ಬಂದೂಕುದಾರಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿಯಲ್ಲಿ ನಿರತನಾಗಿದ್ದರೆ ಇತ್ತ ಶಾಲೆಯಲ್ಲಿದ್ದ ಮಕ್ಕಳು ಮತ್ತು ಸಿಬ್ಬಂದಿ ಕ್ಯಾಂಪಸ್‌ನಿಂದ ಹತ್ತಿರದ ರಸ್ತೆಗಳಿಗೆ ಪಲಾಯನ ಮಾಡುತ್ತಿರುವುದು ಕಂಡುಬಂದಿದೆ.
ಯುವಕ ವಶಕ್ಕೆ, ಒತ್ತೆಯಾಳುಗಳ ರಕ್ಷಣೆ
ಇನ್ನು ಸತತ ಕಾರ್ಯಾಚರಣೆ ಬಳಿಕ ಗುಂಡಿನ ದಾಳಿ ನಡೆಸಿದ್ದ ಆರೋಪಿ ಯುವಕನನ್ನು ಭದ್ರತಾ ಅಧಿಕಾರಿಗಳು ಜೀವಂತ ಸೆರೆ ಹಿಡಿದಿದ್ದಾರೆ. ಅಲ್ಲದೆ ಒತ್ತೆಯಾಳು ಎಲ್ಲರನ್ನೂ ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಂದೂಕುದಾರಿ ಯುವಕ ಇಂದು ಮುಂಜಾನೆ ಅಸಭ್ಯವಾಗಿ ವರ್ತಿಸುತ್ತಿದ್ದನು, ಶಾಲೆಗೆ ಹೋಗುವ ಮೊದಲು ಹತ್ತಿರದ ನಿವಾಸದಲ್ಲಿ ತನ್ನ ತಾಯಿಗೆ ಬೆದರಿಕೆ ಹಾಕಿದ್ದ ಎಂದು ಥಂಗ್ ಲುಂಗ್ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.
ಇದೇ ಮೊದಲೇನಲ್ಲ
ಥೈಲ್ಯಾಂಡ್‌ನಲ್ಲಿ ಬಂದೂಕು ದಾಳಿಗಳು ಅಸಾಮಾನ್ಯವಲ್ಲ, ಈ ಹಿಂದೆ ಸಾಕಷ್ಟು ಬಾರಿ ಇಂತಹ ಘಟನೆಗಳು ನಡೆದಿದೆ. ಈ ಪೈಕಿ 2022 ರಲ್ಲಿ ನರ್ಸರಿಯಲ್ಲಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ನಡೆಸಿದ್ದ ಬಂದೂಕು ದಾಳಿ ಅತ್ಯಂತ ಭೀಕರ ಎನ್ನಲಾಗಿದೆ. ಈ ದಾಳಿಯಲ್ಲಿ 22 ಮಕ್ಕಳು ಸೇರಿದಂತೆ 36 ಜನರು ಸಾವನ್ನಪ್ಪಿದ್ದರು.