......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ವತಿಯಿ೦ದ "ಯುಗಾದಿ" ಹಬ್ಬದ ಹಾರ್ದಿಕ ಶುಭಾಶಯಗಳು......ಶತ್ರು ಸಂಪರ್ಕಿತ ಹಡಗುಗಳನ್ನು ಬಿಟ್ಟು ಎಲ್ಲರಿಗೂ ಹಾರ್ಮುಝ್ ಜಲಸಂಧಿ ಮುಕ್ತ: ಇರಾನ್...
ಸುಚಿತ್ರಾಳ ಮೊಬೈಲ್ ರಹಸ್ಯ ಬಯಲು, ಈಕೆ ಸಂಪರ್ಕದಲ್ಲಿದ್ದವರಿಗೆ ಎಸ್ಪಿ ಮಹತ್ವದ ಕರೆ
ಕಾರವಾರ:ಫೆ.06, ಕಲರ್ಫುಲ್ ರೀಲ್ಸ್ ಮಾಡಿಕೊಂಡು ಸಂಸಾರದಿಂದ ದೂರವಾಗಿ ನೌಟಂಕಿ ಆಡುತ್ತಿದ್ದ ಕಲಾಕರ್ ಸುಚಿತ್ರಾ ಕಥೆಗಳೇ ಬೆಚ್ಚಿ ಬೀಳಿಸುವಂತಿವೆ. ಗಂಡ, ಮಕ್ಕಳಿಗಿಂತ ಜ್ಯೋತಿಷಿ ಕಮಲಾಕರ್ನೇ ಹೆಚ್ಚು ಅಂತಿದ್ದವಳಿಗೆ ಒಬ್ಬಿಬ್ಬರ ಸಹವಾಸ ಇರಲಿಲ್ವಂತೆ. ಸುಚಿತ್ರಾ ಮೊಬೈಲ್ ಇಣಕಿದ ಪೊಲೀಸರಿಗೆ ಆಕೆಯ ಸಂಪರ್ಕ ಕ್ರಾಂತಿಯೇ ಅನಾವರಣ ಆಗಿವೆ. ಹೌದು.. ವಸಂತ್ ನಾಯ್ಕ್ ಕೊಲೆ ಕೇಸ್ನಲ್ಲಿ ಜೈಲುಪಾಲಾಗಿರುವ ರೀಲ್ಸ್ ರಾಣಿ ಸುಚಿತ್ರಾ ಕರಾಳ ಕಥೆಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಐನಾತಿಯ ಮೊಬೈಲ್ ಪರಿಶೀಲನೆ ಮಾಡಿದ್ದು, ಪತಿ ಮಹೇಶ್ ನಾಯಕ್ ಮಾಹಿತಿಯಿಂದ ಬೆಚ್ಚಿ ಬೀಳಿಸುವ ಸಂಗತಿಗಳು ಬಯಲಾಗಿವೆ. ಸುಚಿತ್ರಾಗೆ ಹಲವು ಯುವಕರ ಸಂಪರ್ಕ ಇರುವುದು ಮೊಬೈಲ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಉತ್ತರ ಕನ್ನಡ, ಶಿವಮೊಗ್ಗ, ಕಲಬುರಗಿ ಭಾಗದ ಯುವಕರ ಈಕೆ ಜತೆ ಚಾಟ್ನಲ್ಲಿದ್ದಾರೆ ಎನ್ನುವ ಸಂಗತಿ ಬಯಲಾಗಿದೆ.
ಸಂಪರ್ಕದಲ್ಲಿದ್ದ ಹುಡುಗರು ಆತಂಕ
ರಾಣಿ ಸುಚಿತ್ರಾಳ ಮತ್ತಷ್ಟು ಕರ್ಮಕಾಂಡಗಳು ಬಯಲಾಗುತ್ತಿವೆ. ಕೇವಲ ಜ್ಯೋತಿಷಿ ಕಮಲಾಕರ್ ಭಟ್ ಮಾತ್ರವಲ್ಲ ಬೇರೆ ಬೇರೆ ಯುವಕರೊಂದಿಗೆ ಸಂಪರ್ಕದಲ್ಲಿದ್ದಾಳೆ ಎನ್ನುವ ಸ್ಫೋಟಕ ಮಾಹಿತಿ ಬಯಲಿಗೆ ಬಂದಿದೆ. ಸುಚಿತ್ರಾಳ ಮೊಬೈಲ್ ಪರಿಶೀಲನೆ ವೇಳೆ ಕಲಬುರಗಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕೆಲ ಹುಡುಗರ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಸುಚಿತ್ರಾಳ ಪತಿ,ಮಗಳು ಬಾಯಿ ಬಿಡುತ್ತಿದ್ದಂತೆ ಯುವಕರು ದಂಗಾಗಿದ್ದಾರೆ. ಕೆಲವರು ಇನ್ಸ್ಟಾ ಅಕೌಂಟ್ ಡಿಲಿಟ್ ಮಾಡಿದ್ರೆ ಇನ್ನೂ ಕೆಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಹುಡುಗರ ಜೊತೆ ಇವಳು ನಿತ್ಯ ಸಂಪರ್ಕ ದಲ್ಲಿ ಇದ್ದಳು ಎಂದು, ಸುಚಿತ್ರಾಳ ಪತಿ ಹತ್ತಾರು ಆರೋಪಗಳನ್ನ ಮಾಡಿದ್ದ. ಈ ಬೆನ್ನಲ್ಲೇ ತಮ್ಮ ಬಂಡವಾಳ ಬಯಲಾಗುತ್ತಾ ಎಂಬ ಆತಂಕದಲ್ಲಿ, ಸಂಪರ್ಕದಲ್ಲಿದ್ದ ಹುಡುಗರು ಆತಂಕಗೊಂಡಿದ್ದಾರೆ.
ಯಾರಿಗಾದ್ರೂ ಮೋಸ ಮಾಡಿದ್ರೆ ದೂರು ಕೊಡಬಹುದು
ಇನ್ನು ಈ ಬಗ್ಗೆ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ದೀಪನ್ ಮಾತನಾಡಿದ್ದು, ಅವರಗುಪ್ಪ ಗ್ರಾಮದಲ್ಲಿ ವಸಂತ್ ನಾಯ್ಕ್ ಹತ್ಯೆ ಪ್ರಕರಣದ ಆರೋಪಿ ಸುಚಿತ್ರಾ ಜಾಲತಾಣ ಬೇರೆ ಹುಡುಗರ ಜೊತೆಗೆ ಸಂಪರ್ಕ ಇದ್ದಳೆಂದು ಪತಿ ಹೇಳಿದ್ದಾರೆ. ಹೀಗಾಗಿ ಸುಚಿತ್ರಾಳ ಸಾಮಾಜಿಕ ಜಾಲತಾಣಗಳ ಖಾತೆ, ಮೊಬೈಲ್ ಪರಿಶೀಲನೆ ಮಾಡುತ್ತಿದ್ದೇವೆ. . ಸುಚಿತ್ರಾ ಯಾರಿಗಾದ್ರೂ ಮೋಸ ಮಾಡಿದ್ರೆ ದೂರು ಕೊಡಬಹುದು. ದೂರು ಕೊಟ್ಟವರಿಗೆ ಯಾವುದೇ ಸಮಸ್ಯೆ ಆಗಲ್ಲ. ದೂರು ಆಧರಿಸಿ ಸುಚಿತ್ರಾ ವಿರುದ್ಧ ತನಿಖೆಗೆ ಆದೇಶಿಸಲಾಗುವುದು. ಆದ್ರೆ. ಈವರೆಗೂ ಮೋಸ ಹೋದವರು ಯಾರೂ ದೂರು ಕೊಟ್ಟಿಲ್ಲ ಎಂದು ಹೇಳಿದರು.
ಇಬ್ಬರು ಪೊಲೀಸ್ ಸಿಬ್ಬಂದಿ ವರ್ಗಾವಣೆ
ವಸಂತ್ ನಾಯ್ಕ್ ಹತ್ಯೆಗೆ ಪೊಲೀಸರ ವೈಫಲ್ಯವೆ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ದೀಪನ್, ವೈಫಲ್ಯ ಮಾಹಿತಿ ಮೇರೆಗೆ ಸಿದ್ದಾಪುರ ಠಾಣೆಯ ಇಬ್ಬರನ್ನ ವರ್ಗಾವಣೆ ಮಾಡಿದ್ದಾರೆ. ಎಎಸ್ಐ ಗಣಪತಿ ಭಟ್ ಹಾಗೂ ಹೆಡ್ಕಾನ್ಸ್ಟೇಬಲ್ ಚಂದ್ರಶೇಖರ್ನನ್ನ ಹಳಿಯಾಳ ಉಪವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಸದ್ಯ ಎಸ್ ಸಿದ್ದಾಪುರ ಮೂಲದ ಜ್ಯೋತಿಷಿ ಕಮಲಾಕರ ಭಟ್ ಎರಡು ಮಕ್ಕಳ ತಾಯಿಯ ಸಂಗ ಮಾಡಿ ಕಾರವಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಆದ್ರೆ ಇತ್ತಿಚ್ಚಿಗೆ ಹಣ, ಆಸ್ತಿ ಮತ್ತು ಹೆಚ್ಚು ಪ್ರಚಾರ ಪಡೆದಿದ್ದ ಜ್ಯೋತಿಷಿ ವಿವಾಹಿತ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪ. ಪ್ರಾರಂಭದಲ್ಲಿ ಸತ್ಯನಾ ಎಂಬ ಪ್ರಶ್ನೆ ಮೂಡಿತ್ತು. ಒಂದೊಂದು ಫೋಟೋ ರಿಲೀಸ್ ಆಗುತ್ತಿರುವ ಬೆನ್ನಲ್ಲೇ ಆರೋಪ ಸತ್ಯ ಇರಬಹುದು ಎನ್ನಲಾಯ್ತು… ಇಂದು ಅದಕ್ಕೂ ಒಂದು ಹೆಜ್ಜೆ ಮುಂದೆ ಹೊಗಿದ್ದು, ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ಮಾತನಾಡಿದ್ದಾರೆ ಎನ್ನಲಾದ ರಾಸಲೀಲೇಯ ಆಡಿಯೋದ ಒಂದೋಂದು ಪದ ಪುಂಜವು ಕೇಳುವವರಿಗೆ ಅಸಹ್ಯ ಮೂಡಿಸುವಂತಿದೆ.