37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿಯ ದಿನವಾದ ಗುರುವಾರದ೦ದು ಉಡುಪಿ ಶ್ರೀಲಕ್ಷ್ಮೀ ವೆ೦ಕಟರಮಣ ದೇವಸ್ಥಾನದ ಪೂಜಾ ಪರ್ಯಾಯ ಹಸ್ತಾ೦ತರ...

ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಉಡುಪಿ:ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ ಇಲ್ಲಿ ಜರುಗಿದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಡಾ.ಅಶೋಕ್ ಹೆಚ್, ಜಿಲ್ಲಾ ಶಸ್ತ್ರಚಿಕಿತ್ಸಕರು ಇವರು ಭಾರತದಲ್ಲಿ ಲಿಂಗ ತಾರತಮ್ಯ ಹೆಣ್ಣು ಮಕ್ಕಳ ಶಿಕ್ಷಣದ ಅರಿವು ಹೆಣ್ಣು ಮಕ್ಕಳನ್ನು ಉಳನ, ಬೆಳೆಸಿ ಪೋಷಿಸುವ ಬಗ್ಗೆ ಮಾತನಾಡಿದರು.

ಡಾ.ಕವಿತಾ ಪ್ರಸೂತಿ ತಜ್ಞರು, ಮತ್ತು ಡಾ.ಅಮರನಾಥ್ ಉಸ್ತ್ರಿ ಮಕ್ಕಳ ತಜ್ಞರು ಇವನು ಹೆಣ್ಣು ಮಕ್ಕಳ ಮಹತ್ವದ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾ ವೈದ್ಯಾಧಿಕಾರಿ ಮತ್ತು ಮಕ್ಕಳ ಪಾರಾದ ಡಾ.ಸಂದೀಪ್ ಹಾಗೂ ಡಾ.ಐಶ್ವರ್ಯ, ಪ್ರಸೂತಿ ತಜ್ಞರು, ಶ್ರೀಮತಿ ಪ್ಲೋರಾ ಡಿ ಆಲ್ಲೇಡ ಶುಶೂಷಕಧೀಕ್ಷರ ದರ್ಜೆ-2 ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಿನಾಂಕ : 24.01.2026 ರಂದು ಜನಿಸಿದ ಮೂರು ನವಜಾತ ಶಿಶುಗಳಿಗೆ ಕಿಟ್ ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಾಣಂತಿ ವಾರಿಜರವರು ತನಗೆ ಹೆಣ್ಣು ಮಗು ಜನಿಸಿದ ಬಗ್ಗೆ ಸಂತನ ವ್ಯಕ್ತಪಡಿಸಿ ಹೆಣ್ಣು ಮಕ್ಕಳ ದಿನಾಚರಣೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆಸ್ಪತ್ರೆಯ ಎಲ್ಲಾ ವೈದ್ಯಾಧಿಕಾರಿಗಳು, ಮತ್ತು ಸಿಬ್ಬಂವರ್ಗದವರು ಹಾಗೂ ಬಾಣಂತಿಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಶ್ರೀಮತಿ ವಿದ್ಯಾ ಸುವರ್ಣ, ಆಪ್ತಸಮಾಲೋಚಕರು ಇವರು ಕಾರ್ಯಕ್ರಮ ವಿಮಾಪಿಸಿದರು. ಶ್ರೀಮತಿ ರೇಣುಕ ಶುಕ್ರೂಷಕಧಿಕಾರಿ ಇವರು ಧನ್ಯವಾದ ಸಮರ್ಪಣೆಗೈದರು. ಸಿಹಿ ತಿಂಡಿ ವಿತರಿಸಲಾಯಿತು.

No Comments

Leave A Comment