ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತಕ್ಕೆ ಬಲಿಯಾದ ಮುರಳಿ ಕೃಷ್ಣ!......
ಉಪ್ಪೂರು ಕೆ.ಜಿ ರೋಡ್ ಬಳಿ ಟ್ರಕ್ ನ ಚಕ್ರದಡಿ ಸಿಲುಕಿ ಬೈಕ್ ಸವಾರನ ದಾರುಣ ಸಾವು
ಉಡುಪಿ: ಟ್ರಕ್ ನ ಚಕ್ರದಡಿ ಸಿಲುಕಿ ಬೈಕ್ ನ ಸವಾರನೋರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಪ್ಪೂರು ಕೆ.ಜಿ ರೋಡ್ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ಸವಾರನನ್ನು ಬ್ರಹ್ಮವಾರ ಮಟಪಾಡಿಯ ನಿವಾಸಿ ಅಭಿಷೇಕ್ ನಾಯಕ್ (25) ಎಂದು ಗುರುತಿಸಲಾಗಿದೆ. ಇವರು ಉಡುಪಿ ವಿದ್ಯೋದಯ ಆ೦ಗ್ಲ ಮಾದ್ಯಮ ಪಬ್ಲಿಕ್ ಸ್ಕೂಲ್ ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಚಕ್ರದಡಿಗೆ ಸಿಲುಕಿದ ಪರಿಣಾಮ ಬೈಕ್ ಸವಾರನ ದೇಹವು ಛಿದ್ರಗೊಂಡಿದೆ. ಘಟನಾ ಸ್ಥಳದಲ್ಲಿದ್ದು ಬ್ರಹ್ಮಾವರ ಆರಕ್ಷಕ ಠಾಣೆಯ ಮುಖ್ಯ ಆರಕ್ಷಕ ಮಹಾಲಿಂಗ ಮಹಜರು ಪ್ರಕ್ರಿಯೆ ನಡೆಸಿದರು.
ಶಾಲೆಯ ಆಡಳಿತ ಮ೦ಡಳಿ ಹಾಗೂ ಸಿಬ್ಬ೦ದಿ ವರ್ಗದವರು ಹಾಗೂ ಅಪಾರ ಮ೦ದಿ ಅಭಿಮಾನಿಗಳು ಸ೦ತಾಪವನ್ನು ಸೂಚಿಸಿದ್ದಾರೆ.