ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತಕ್ಕೆ ಬಲಿಯಾದ ಮುರಳಿ ಕೃಷ್ಣ!......
ಶ್ರೀಕೃಷ್ಣನ ದರ್ಶನ ಪಡೆದು, ಶ್ರೀ ವೇದವರ್ಧನತೀರ್ಥ ಶ್ರೀಪಾದರನ್ನ ಭೇಟಿಯಾದ ‘ಆಭರಣ್ ಟೈಮ್ ಲೆಸ್’ ಜ್ಯುವೆಲರಿ ಎಂ.ಡಿ ಡಾ.ಪ್ರತಾಪ್
ಉಡುಪಿ: ಜ. 22 : ಕರ್ನಾಟಕದ ಹೆಸರಾಂತ ಆಭರಣ ಮಳಿಗೆಗಳಲ್ಲಿ ಒಂದಾದ “ಆಭರಣ್ ಟೈಮ್ ಲೆಸ್” ಜ್ಯುವೆಲರಿ ಬೆಂಗಳೂರು ಇದರ ಎಂ.ಡಿ ಡಾ.ಪ್ರತಾಪ್ ಮಧುಕರ ಕಾಮತ್ ಅವರು ಜನವರಿ 21ರಂದು ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದು ಪರ್ಯಾಯ ಶ್ರೀ ಶೀರೂರು ಶ್ರೀ ಕೃಷ್ಣ ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.
ಈ ಸಂದರ್ಭದಲ್ಲಿ ಶ್ರೀ ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಪರ್ಯಾಯ ಸ್ವಾಗತ ಸಮಿತಿಯ ಮಟ್ಟಾರ್ ರತ್ನಾಕರ ಹೆಗ್ಡೆ, ಮೋಹನ್ ಭಟ್, ಮಧುಕರ ಮುದ್ರಾಡಿ, ಸುಪ್ರಸಾದ ಶೆಟ್ಟಿ, ನಂದನ್ ಜೈನ್, ಉಪಸ್ಥಿತರಿದ್ದರು.