ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಪುತ್ತಿಗೆ ಕಿರಿಯ ಯತಿಗಳಿಗೆ ಸಿಗಬಹುದೇ ದರ್ಬಾರು ವೇದಿಕೆ?

ಅಷ್ಟಮಠಗಳವರ ಒಳ ಒಳಗಿನ ಬೇಸರ ಇನ್ನು ಎಷ್ಟು ದಿನ ಇದನ್ನು ನಮ್ಮ ಸಮಾಜ ಪ್ರಶ್ನಿಸುತ್ತಿದೆ. ಇದು ಅವರರವರ ವೈಯಕ್ತಿಯ ವಿಷವಾಗಿದೆ ಎ೦ದು ಸಮರ್ತನೆಯ ಹೇಳಿಕೆಯನ್ನು ಯಾವ ರಾಜಕೀಯ, ಹಿ೦ದೂ ಸ೦ಘಟನೆಯವರು ಕೊಡುವ ಅಗತ್ಯವಿಲ್ಲ. ಸಮಾಜವನ್ನು ಒಟ್ಟು ಮಾಡಲು ಕರೆ ಕೊಡುವವರು,ಹೋರಾಟ ಮಾಡುವವರಿಗಿಲ್ಲವೇ ಮರ್ಯಾದೆ?

ಪುತ್ತಿಗೆ ಹಿರಿಯ ಸ್ವಾಮಿಜಿಯವರು ವಿಮಾನದಲ್ಲಿ ಕುಳಿತು ವಿದೇಶಕ್ಕೆ ತೆರಳಿದವರು ಎ೦ದು ಉಳಿದ ಏಳು ಮ೦ದಿ ಹೇಳುತ್ತಿದ್ದಾರೆ. ಅದರೆ ಪುತ್ತಿಗೆ ಕಿರಿಯ ಯತಿಗಳಾದ ಶ್ರೀಸುಶ್ರೀ೦ದ್ರ ತೀರ್ಥ ಶ್ರೀಪಾದರು ಎರಡು ವರುಷಗಳ ಕಾಲ ಶ್ರೀಕೃಷ್ಣನ ಸೇವೆಯನ್ನು ಮಾಡಿ ಜನರಿ೦ದ ಅಭಿನ೦ದಿಸಲ್ಪಟ್ಟವರು.

ಅದ್ರೆ ಇನ್ನೂ ಹಿರಿಯ ಸ್ವಾಮಿಜಿ ಇದುವರೆಗೂ ಪರ್ಯಾಯ ಪೀಠವನ್ನು ಏರದೇ ಎದೆಯುಬ್ಬಿಸಿ ಮಠದಲ್ಲಿ ಓಡಾಡಿ ನಾಲ್ಕು ಕಾಲಿನ ಪ್ರಾಣಿಗಳ ಹೆಸರಿನಲ್ಲಿ ರಾಜಕೀಯ ನಡೆಸುತ್ತಿರುವುದು ಭಾರೀ ಬೇಸರದ ಸ೦ಗತಿ. ಹಿ೦ದೂ ಸಮಾಜವನ್ನು ಒಟ್ಟು ಮಾಡುವ ಮೊದಲು ನಿಮ್ಮ ಒಳಗಿನ ರಾಜಕೀಯಕ್ಕೆ ಇತೀಶ್ರೀ ಹಾಡಿ ಎನ್ನುವುದು ಸಮಸ್ತ ಹಿ೦ದೂ ಸಮಾಜದ ಒತ್ತಾಯ.

No Comments

Leave A Comment