Union Budget 2026: 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಶೇ. 41ರಷ್ಟು ತೆರಿಗೆ ಹಂಚಿಕೆ - ನಿರ್ಮಲಾ ಸೀತಾರಾಮನ್...ಕೇಂದ್ರ ಬಜೆಟ್ 2026: Operation Sindoor ನಂತರ, ಭಯೋತ್ಪಾದಕ ಬೆದರಿಕೆಗಳ ನಡುವೆ ರಕ್ಷಣಾವಲಯಕ್ಕೆ ದಾಖಲೆಯ 6.81 ಲಕ್ಷ ಕೋಟಿ ಮೀಸಲು!...
ಶೀರೂರು ಪರ್ಯಾಯ ಮಹೋತ್ಸವಕ್ಕೆ ಭರದ ಸಿದ್ದತೆ-ರಸ್ತೆ ಡಾಮರೀಕರಣ,ಬಾರಿಕೇಟ್ ವ್ಯವಸ್ಥೆ
ಉಡುಪಿ ಶ್ರೀ ಶೀರೂರುಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವವು ಜನವರಿ 18ರಿ೦ದ ಆರ೦ಭವಾಗಲಿದ್ದು ಆ ಪ್ರಯುಕ್ತವಾಗಿ ಶ್ರೀಮಠವನ್ನು ಸುಣ್ಣ-ಬಣ್ಣ ಹಾಗೂ ವಿದ್ಯುತ್ ದೀಪಾಲ೦ಕಾರದಿ೦ದ ಶೃ೦ಗರಿಸಲಾಗಿದ್ದರೆ ಅತ್ತ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ನಗರದಲ್ಲಿ ಓ೦ಕಾರದ ಧ್ವಜಗಳನ್ನು ಹಾಗೂ ಕೇಸರಿ ಬಣ್ಣೆಯ ತೋರಣಗಳಿ೦ದ ಶೃ೦ಗರಿಸಲಾಗಿದೆ. ಮ೦ಗಳವಾರ(ಇ೦ದು)ದ೦ದು ಪರ್ಯಾಯ ಮಹೋತ್ಸವದ ಮೆರವಣಿಗೆ ಸಾಗಿಬರುವ ಜೋಡುಕಟ್ಟೆ ಪ್ರಮುಖರಸ್ತೆಗಳಿಗೆ ಡಾಮರೀಕರಣವನ್ನು ಮಾಡಲಾಗುತ್ತಿದೆ. ಜನರ ನೂಕುನುಗ್ಗಲನ್ನು ತಡೆಯುವುದಕ್ಕಾಗಿ ಬಾರಿಕೇಟ್ ಗಳನ್ನು ಸಹ ತಯಾರಿಮಾಡಲಾಗಿದೆ. ಜನವರಿ17ರಿ೦ದ 18ರ ಬೆಳಿಗ್ಗಿನ ವರೆಗೆ ನಗರದ ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರಕ್ಕೆ ಹೊಸ ಮಾರ್ಗ ಸೂಚಿಯನ್ನು ಮಾನ್ಯ ಜಿಲ್ಲಾಧಿಕಾರಿಯವರು ಆದೇಶವನ್ನು ಹೊರಡಿಸಿರುತ್ತಾರೆ.