ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ತರ೦ಗವಾರಪತ್ರಿಕೆಯ ಪರ್ಯಾಯ ವಿಶೇಷಾ೦ಕ ಲೋಕಾರ್ಪಣೆ…
ಉಡುಪಿ:ತರ೦ಗವಾರಪತ್ರಿಕೆಯ ಪರ್ಯಾಯ ವಿಶೇಷಾ೦ಕ ಶೀರೂರು ಮಠಾಧೀಶರಾದ ಶ್ರೀಶ್ರೀ ವೇದವರ್ಧನ ತೀರ್ಥಶ್ರೀಪಾದರು ಮ೦ಗಳವಾರ ಮಧ್ಯಾಹ್ನ ಶ್ರೀಮಠದಲ್ಲಿ ಬಿಡುಗಡೆಗೊಳಿಸಿದರು. ತರ೦ಗ ಸ೦ಪಾದಕಿ ಡಾ. ಸ೦ಧ್ಯಾ ಎಸ್ ಪೈ, ಸ೦ಸ್ಥೆಯ ಅಧಿಕಾರವರ್ಗದ ಸದಸ್ಯರು, ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿಗಳಾದ ಮೋಹನ್ ಭಟ್, ಜೊತೆ ಕಾರ್ಯದರ್ಶಿ ಮಧುಕರ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು.