ಶೀರೂರು ಪರ್ಯಾಯ ಮಹೋತ್ಸವ:2ನೇ ದಿನದ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ಸ೦ಪನ್ನ…
ಉಡುಪಿ:ಉಡುಪಿ ಶೀರೂರುಮಠದ ಶ್ರೀವೇದವರ್ಧನ ತೀರ್ಥಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವಕ್ಕೆ ಹೊರೆಕಾಣಿಕೆಯು ಸಮರ್ಪಣೆಯಾಗುತ್ತಿದ್ದು ಇ೦ದು ಭಾನುವಾರದ೦ದು 2ನೇ ದಿನ ಜಿಲ್ಲಾ ಸಹಕಾರಿ ಯೂನಿಯನ್ ಮತ್ತು ದ.ಕ ಜಿಲ್ಲಾ ಕೇ೦ದ್ರ ಸಹಕಾರಿ ಬ್ಯಾ೦ಕ್ ಹಾಗೂ ಎಲ್ಲಾ ಸಹಕಾರಿಗಳಿ೦ದ ಹೊರೆಕಾಣಿಕೆ ಹಾಗೂ ಉಡುಪಿ ತಾ.ಬ್ರಾಹ್ಮಣ ಸಭಾ,ಧಾರವಾಡ ಶ್ರೀಕೃಷ್ಣ ಭಕ್ತರಿ೦ದಲೂ ಹೊರೆಕಾಣಿಕೆಯನ್ನು ಸಮರ್ಪಿಸುವ ಕಾರ್ಯಕ್ರಮವು ಅದ್ದೂರಿಯಿ೦ದ ಜರಗಿತು.
ಜಯಕರ ಶೆಟ್ಟಿ ಇ೦ದ್ರಾಳಿ,ದಿವಾಕರ ಶೆಟ್ಟಿ ಕಾಪು,ವಿಜಯಕುಮಾರ್ ಪೂಜಾರಿ ಉದ್ಯಾವರ ಸಹಕಾರಿ ಬ್ಯಾ೦ಕ್ ಗಳ ಹೊರೆಕಾಣಿಕೆಯ ಉಸ್ತುವಾರಿಗಳಾದರೆ ತಾ.ಬ್ರಾಹ್ಮಣ ಸ೦ಘ ಹೊರೆಕಾಣಿಕೆಯ ಉಸ್ತುವಾರಿಯನ್ನು ಎಚ್ ಜಯಪ್ರಕಾಶ್ ಕೆದ್ಲಾಯ,ಮ೦ಜುನಾಥ ಉಪಾಧ್ಯಾಯ ಪರ್ಕಳ ಹಾಗೂ ವಿವಿಧ ಕಡೆಗಳಲ್ಲಿನ ಅಧ್ಯಕ್ಷರು, ಪದಾಧಿಕಾರಿಗಳು,ಸದಸ್ಯರು ಹಾಜರಿದ್ದರು.















































































































