ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಜಯಮಾಲಾ, ಸಾ.ರಾ. ಗೋವಿಂದುಗೆ ‘ಡಾ. ರಾಜ್​ಕುಮಾರ್ ಪ್ರಶಸ್ತಿ’ ಪ್ರಕಟ

2020 ಹಾಗೂ 2021ನೇ ಸಾಲಿನ ‘ಡಾ. ರಾಜ್​ಕುಮಾರ್ ಪ್ರಶಸ್ತಿ’  ಪ್ರಕಟ ಮಾಡಲಾಗಿದೆ. ಜೊತೆಗೆ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ ಹಾಗೂ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ ಕೂಡ ಘೋಷಣೆ ಆಗಿದೆ. ಹಿರಿಯ ನಟಿ ಜಯಮಾಲಾ  ಅವರಿಗೆ 2020ನೇ ಸಾಲಿನ ಡಾ. ರಾಜ್​ಕುಮಾರ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು ಅವರು 2020ನೇ ಸಾಲಿನ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಹಿರಿಯ ಛಾಯಾಗ್ರಾಹಕರಾದ ಪ್ರಗತಿ ಅಶ್ವತ್ಥ್​ ನಾರಾಯಣ​ ಅವರಿಗೆ 2020ನೇ ಸಾಲಿನ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ ಘೋಷಣೆ ಮಾಡಲಾಗಿದೆ. ಚಿತ್ರರಂಗದಲ್ಲಿ ಮಾಡಿದ ಜೀವಮಾನ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ.

ನಿರ್ಮಾಪಕ ಸಾ.ರಾ. ಗೋವಿಂದು ಅವರಿಗೆ 2021ನೇ ಸಾಲಿನ ‘ಡಾ. ರಾಜ್​ಕುಮಾರ್ ಪ್ರಶಸ್ತಿ’ ಘೋಷಣೆ ಆಗಿದೆ. ನಿರ್ದೇಶಕ ಶಿವರುದ್ರಯ್ಯ ಅವರು 2021ನೇ ಸಾಲಿನ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಹಿರಿಯ ನಟ ಎಂ.ಕೆ. ಸುಂದರ್ ರಾಜ್​ ಅವರಿಗೆ 2021ನೇ ಸಾಲಿನ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ ಘೋಷಣೆ ಮಾಡಲಾಗಿದೆ.

‘ಡಾ. ರಾಜ್​ಕುಮಾರ್ ಪ್ರಶಸ್ತಿ’ ಪುರಸ್ಕೃತರಿಗೆ ತಲಾ 5 ಲಕ್ಷ ರೂಪಾಯಿ ನಗದು ಹಾಗೂ 50 ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಜೀವಮಾನ ಸಾಧನೆಗಾಗಿ 1993ರಿಂದ ‘ಡಾ. ರಾಜ್​ಕುಮಾರ್ ಪ್ರಶಸ್ತಿ’ ನೀಡಲಾಗುತ್ತಿದೆ. ಮೊದಲು ಈ ಪ್ರಶಸ್ತಿಯನ್ನು ಪಡೆದವರು ಕೆ.ಎಸ್. ಅಶ್ವತ್ಥ್. 2019ರಲ್ಲಿ ನಟಿ ಉಮಾಶ್ರೀ ಅವರು ‘ಡಾ. ರಾಜ್​ಕುಮಾರ್ ಪ್ರಶಸ್ತಿ’ ಪಡೆದಿದ್ದರು.

ಈಗ ಹಿರಿಯ ನಟಿ ಜಯಮಾಲಾ ಅವರು ‘ಡಾ. ರಾಜ್​ಕುಮಾರ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಜಯಮಾಲಾ ಅವರು 1974ರಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಭೂತಯ್ಯನ ಮಗ ಅಯ್ಯು’, ‘ಗಿರಿ ಕನ್ಯೆ’, ‘ಪ್ರೇಮದ ಕಾಣಿಕೆ’, ‘ಶಂಕರ್ ಗುರು’, ‘ದಾರಿ ತಪ್ಪಿದ ಮಗ’, ‘ತಾಯಿ ಸಾಹೇಬ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

2021ನೇ ಸಾಲಿನ ‘ಡಾ. ರಾಜ್​ಕುಮಾರ್ ಪ್ರಶಸ್ತಿ’ಗೆ ಭಾಜನರಾಗಿರುವ ಹಿರಿಯ ನಿರ್ಮಾಪಕ ಸಾರಾ ಗೋವಿಂದು ಅವರು ಕೂಡ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಸಿನಿಮಾ ನಿರ್ಮಾಣ ಮಾತ್ರವಲ್ಲದೇ ಕನ್ನಡ ಪರ ಹೋರಾಟದಲ್ಲೂ ಅವರು ಗುರುತಿಸಿಕೊಂಡಿದ್ದಾರೆ. ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ.

No Comments

Leave A Comment