ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭಾವೀ ಪರ್ಯಾಯ ಪೀಠಾಧೀಶರಾದ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಭೇಟಿ…
ಉಡುಪಿ: ಭಾವೀ ಪರ್ಯಾಯ ಪೀಠಾಧೀಶರಾದ ಹಾಗೂ ಪ್ರಥಮ ಬಾರಿಗೆ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಹಾಗೂ ಪ್ರಸ್ತುತ ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶ್ರೀ ಕ್ಷೇತ್ರ ಧರ್ಮಸ್ಥಳ ತಮ್ಮ ಶಿಷ್ಯರೊಂದಿಗೆ ಭೇಟಿ ನೀಡಿದರು. ಶೀರೂರು ಶ್ರೀಗಳನ್ನು ಸರ್ವ ಗೌರವಗಳೊಂದಿಗೆ ವಿಜ್ರಂಭಣೆಯಿಂದ ಸ್ವಾಗತಿಸಿದರು.
ನ೦ತರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಅವರ ಅಧಿಕೃತ ನಿವಾಸ (ಬೀಡು) ನಲ್ಲಿ ಭೇಟಿ ಮಾಡಿದರು. ಹಾಗೂ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಡಾ.ಉದಯ ಕುಮಾರ್ ಸರಳತ್ತಾಯ ಹಾಗೂ ಧರ್ಮಸ್ಥಳ ಕ್ಷೇತ್ರದ ಅರ್ಚಕ ವರ್ಗ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.