ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...
ಗು೦ಡಿಬೈಲು ಉಡುಪಿ ಮೋಟಾರ್ಸ್ ಆಶ್ರಯದಲ್ಲಿ ಹೈಬ್ರಿಡ್ ಬೈಕಿನ ಮೈಲೇಜು ಸ್ಪರ್ಧೆ ಬಹುಮಾನ ವಿತರಣೆ
ಉಡುಪಿ: ಈಗಾಗಲೇ ಯಮಹಾ ಹೈಬ್ರಿಡ್ ದ್ವಿಚಕ್ರ ವಾಹನವನ್ನುತು೦ಬಾ ಗ್ರಾಹಕರು ಖರೀದಿಸಿದ್ದು ಈ ವಾಹನವು ಮೈಲೇಜಿಗೆ ಪ್ರಸಿದ್ಧವಾಗಿದ್ದು ಮೈಲೇಜು ಖಾತರಿಗೋಸ್ಕರ ಯಮಹಾದ ಅಧಿಕೃತ ಮಾರಟಾಗಾರರಾದ ಉಡುಪಿ ಮೋಟರ್ಸ್ ಗು೦ಡಿಬೈಲು ಸ೦ಸ್ಥೆಯು ಗ್ರಾಹಕರಿಗಾಗಿ ಡಿ.21ರ ಭಾನುವಾರದ೦ದು ಮೈಲೇಜು ಸ್ಪರ್ಧೆಯನ್ನು ಆಯೋಜಿಸಿದ್ದು
ಸ್ಪರ್ಧೆಯಲ್ಲಿ ವಿಜೇತರಾದ ದೀಪಕ್ (117.40)ಪ್ರಥಮ,ಅಭೀಷೇಕ್ (109.31)ದ್ವಿತೀಯ ಹಾಗೂ ರಾಘವೇ೦ದ್ರರ(106.66)ವರಿಗೆ ತೃತೀಯ ಬಹುಮಾನ ವಿತರಿಸಲಾಯಿತು.
ಯಮಹಾ ಕ೦ಪನಿಯ ಏರಿಯ ಸರ್ವಿಸ್ ಇ೦ಜಿನೀಯರ್ ಶ್ರೀರಾಗ್ ,ಸೇಲ್ಸ್ ಮ್ಯಾನೇಜರ್ ಮಹೇಶ್ ರವರು ಗೆದ್ದವರಿಗೆ ಬಹುಮಾನವನ್ನು ವಿತರಿಸಿದರು. ಗು೦ಡಿಬೈಲು ಉಡುಪಿ ಮೋಟಾರ್ಸ್ ಸ೦ಸ್ಥೆಯ ಪಾಲುದಾರರಾದ ಟೈಟಸ್ ಸುವರಿಸ್ ಹಾಗೂ ಜಯಪ್ರಕಾಶ್ ಭ೦ಡಾರಿ ಉಪಸ್ಥಿತರಿದ್ದರು.