ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...

ಜನಸಾಮಾನ್ಯರಿಗೆ ಮೋಸ ಮಾಡಿದಂತ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಡೋಂಗಿ ಬಿಜೆಪಿ ನಾಯಕರೇ ಉತ್ತರಿಸಿ- ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ರಾಜ್ಯದ ಬಿಜೆಪಿಯ ನಾಯಕರುಗಳಾದ ಅಶೋಕ್ ಮತ್ತು ವಿಜಯೇಂದ್ರ ಇವರು ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರೆಂಟಿಯ ಗೃಹಲಕ್ಷ್ಮಿ ಹಣ ಎರಡು ತಿಂಗಳಲ್ಲಿ ಕೊಡಲಿಲ್ಲ ಎಂಬುದರ ಬಗ್ಗೆ ಬಹಳ ದೊಡ್ಡದಾಗಿ ಪ್ರಚಾರವನ್ನು ಮಾಡುತ್ತಿದ್ದಾರೆ.

ಬಿಜೆಪಿ ನಾಯಕರೇ ನಿಮಗೆ ಯೋಗ್ಯತೆ ಇದೆಯಾ ಇದರ ಬಗ್ಗೆ ಮಾತನಾಡಲು? ನಮ್ಮ ಗ್ಯಾರಂಟಿಯನ್ನು ಟೀಕಿಸಿ ಅಣಕಿಸಿದಂತ ನಿಮಗೆ ಇದರ ಬಗ್ಗೆ ಮಾತನಾಡುವ ಯಾವ ನೈತಿಕತೆಯಿಲ್ಲ . ಎರಡು ತಿಂಗಳ ಹಣವನ್ನು ಮುಂದಿನ ದಿನಗಳಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಖಂಡಿತವಾಗಿ ಜನಸಾಮಾನ್ಯರಿಗೆ ನೀಡುತ್ತದೆ .ಇದರ ಬಗ್ಗೆ ನಿಮ್ಮ ಪ್ರತಿಭಟನೆ ಮಾಡುವುದು ಅಗತ್ಯ ಇಲ್ಲ. ನಿಮ್ಮ ಪ್ರತಿಭಟನೆ ಏನಿದ್ದರೂ ಕೇಂದ್ರದ ಮೋದಿ ಸರಕಾರ ವಿರುದ್ಧ ಜನಸಾಮಾನ್ಯರಿಗೆ ಕಳೆದ ಹತ್ತು ವರ್ಷದಲ್ಲಿ ಜನಸಾಮಾನ್ಯರು ಬಳಸುವಂತಹ ಅಡುಗೆ ಅನಿಲದ ಸಬ್ಸಿಡಿಯನ್ನು ನೀಡದೆ ಮೋದಿ ಸರಕಾರ ನಿಮ್ಮ ಈ ಬಿಜೆಪಿ ಸರಕಾರ ಮೋಸ ಮಾಡಿದೆ? .

ಈ ಲಕ್ಷಾಂತರ ಕೋಟಿ ಹಣ ಎಲ್ಲಿ ಹೋಗಿದೆ ?ಎಂಬುದರ ಬಗ್ಗೆ ಪ್ರಪ್ರಥಮವಾಗಿ ಜನಸಾಮಾನ್ಯರಿಗೆ ತಿಳಿಸಿ. ಅದನ್ನು ಬಿಟ್ಟು ನಮ್ಮ ಮಹಿಳಾ ಸಚಿವರ ಬಗ್ಗೆ ಮತ್ತು ನಮ್ಮ ಕಾಂಗ್ರೆಸ್ ಪಕ್ಷದ ಬಗ್ಗೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಿ. ಜನಸಾಮಾನ್ಯರಿಗೆ ನೀವು ಮಾಡುತ್ತಿರುವ ಮೋಸದ ಬಗ್ಗೆಯೂ ಸ್ವಲ್ಪ ತಿಳಿಸಿ .ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಉಡುಪಿ ನಗರಸಭೆಯ ನಾಮನಿರ್ದೇಶಕ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನಿಸಿದ್ದಾರೆ.

No Comments

Leave A Comment