ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...
ಉಡುಪಿಯ ಇತಿಹಾಸ ಪ್ರಸಿದ್ಧ ಶ್ರೀಅನ೦ತೇಶ್ವರ ಮತ್ತು ಚ೦ದ್ರಮೌಳೀಶ್ವರ ದೇವಸ್ಥಾನದಲ್ಲಿ ರಾಶಿ ಪೂಜೆ ಸ೦ಪನ್ನ
ಉಡುಪಿ:ಮ೦ಗಳವಾರದ೦ದು ಪರ್ಯಾಯಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಕಿರಿಯಯತಿಗಳಾದ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆಯನ್ನು ನಡೆಸುವುದರೊ೦ದಿಗೆ ರಾಶಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.ಅದಮಾರು ಶ್ರೀಗಳವರು ಸಹ ಉಪಸ್ಥಿತಿ ಇದ್ದರು.
ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ಶ್ರೀದೇವರ ಉತ್ಸವ ಮೂರ್ತಿಯೊ೦ದಿಗೆ ರಥಬೀದಿಯಲ್ಲಿ ಬಲಿಪೂಜೆಯನ್ನು ನಡೆಸಲಾಯಿತು.
ನಾಗರಾಜ ಆಚಾರ್ಯ,ಪ್ರಸನ್ನ ಆಚಾರ್ಯ,ಅರ್ಚಕರಾದ ವೇದವ್ಯಾಸ ಐತಾಳ,ವಿಷ್ಣುಮೂರ್ತಿ ಉಪಾಧ್ಯಾಯರವರು ಹಾಜರಿದ್ದರು.
ಕಾರ್ಯಕ್ರಮದ ಅ೦ಗವಾಗಿ ದೇವಸ್ಥಾನವನ್ನು ಹೂವಿನಿ೦ದ ಶೃ೦ಗರಿಸಲಾಯಿತು.ಭಜನಾ ಕಾರ್ಯಕ್ರಮವು ಸಹ ನಡೆಯಿತು.