ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...

ಮಲ್ಪೆ ಕಡಲತೀರದಲ್ಲಿ ತೇಲಿ ಬ೦ದಿದೆ ಎನ್ನಲಾದ ವಿಗ್ರಹ ಶ್ರೀಕೃಷ್ಣ ವಿಗ್ರಹವಲ್ಲ-ವಿಸರ್ಜನೆ ಮಾಡಲಾದ ವಿಗ್ರಹ-ಇನ್ನು ಕೆಲವು ವಿಗ್ರಹ ಪತ್ತೆ

(ಕರಾವಳಿಕಿರಣ ಡಾಟ್ ಕಾ೦ ವಿಶೇಷವರದಿ)

ಉಡುಪಿ: ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಕೃಷ್ಣನ ವಿಗ್ರಹ ತೇಲಿ ಬಂದಿದೆ ಪವಾಡ ಸಂಭವಿಸಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅದರೆ ಭಾನುವಾರ ಕೃಷ್ಣಮಠದಲ್ಲಿ ಇಸ್ಕಾನ್ ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮ ಇದ್ದು, ಸುಮಾರು 18 ಬಸ್ಸುಗಳಲ್ಲಿ ಇಸ್ಕಾನ್ ಭಕ್ತರು ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಕಡಲಲ್ಲಿ ತೇಲಿ ಬಂದ ವಿಗ್ರಹವೊಂದು ಎಲ್ಲರ ಗಮನ ಸೆಳೆಯಿತು ಎನ್ನಲಾಗಿದೆ. ಅಲ್ಲಿ ಸೇರಿದ್ದ ಸಾವಿರಾರು ಮಂದಿ ಆ ವಿಗ್ರಹವನ್ನು ಮೇಲಕ್ಕೆ ತೆಗೆದು ಸಂಭ್ರಮಿಸಿದರಾದರೂ ಉಡುಪಿಯ ಕೃಷ್ಣ ದೇವರು ಕೂಡ ಕಡಲಲ್ಲೇ ಲಭ್ಯವಾದ ಕಾರಣ, ಭಾವುಕ ಭಕ್ತರು ಅದೇ ಪವಾಡ ಮತ್ತೊಮ್ಮೆ ಸಂಭವಿಸಿದೆ ಎಂದು ಕುಣಿದು ಸಂಭ್ರಮಿಸಿದ್ದಾರೆ.

ಅಲ್ಲಿ ಸೇರಿದ್ದ ಸಾವಿರಾರು ಇಸ್ಕಾನ್ ಭಕ್ತರು ಆ ವಿಗ್ರಹವನ್ನು ಕೃಷ್ಣನೆಂದೇ ಭಾವಿಸಿ ಅಲ್ಲಿಂದ ಕೊಂಡೊಯ್ದರು. ಆದರೆ ಮೇಲ್ನೋಟಕ್ಕೆ ಇದು ಕರಾವಳಿಯಲ್ಲಿನ ದೇಗುಲಗಳ ಪ್ರವೇಶ ದ್ವಾರದ ಬಳಿ ಇರುವ ಜಯ- ವಿಜಯರ ವಿಗ್ರಹ ಅನ್ನುವುದು ತಿಳಿದು ಬರುತ್ತದೆ.

ದೇವಾಲಯದಲ್ಲಿ ಭಿನ್ನಗೊಂಡ ವಿಗ್ರಹಗಳನ್ನು ಸಮುದ್ರಕ್ಕೆ ಮುಳುಗಿಸಿ ಬಿಡುವ ಪರಿಪಾಠ ನಮ್ಮ ಕರಾವಳಿಯ ಪದ್ದತಿ. ಈ ರೀತಿ ಮುಳುಗಿಸಿ ಬಿಟ್ಟ ಜಯ- ವಿಜಯರ ವಿಗ್ರಹವೇ ತೇಲಿ ಬಂದು ಭಕ್ತರ ಸಂಭ್ರಮಕ್ಕೆ ಕಾರಣವಾಗಿದೆ. ಇದು ಕಡಲಲ್ಲಿ ತೇಲಿ ಬಂದ ಕೃಷ್ಣನ ವಿಗ್ರಹ ಎಂದು ಎಲ್ಲರೂ ಸಂಭ್ರಮಿಸಿ ಕುಣಿಯುವಂತಾಗಿದೆ.

ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.ಅದರೆ ಅದು ಶ್ರೀಕೃಷ್ಣ ವಿಗ್ರಹವಲ್ಲ ಎ೦ಬುದು ಅವರಿಗೆ ಮತ್ತೆ ಮನವರಿಕೆಯಾಗಿದೆ ಎ೦ಬ ಮಾಹಿತಿ ತಿಳಿದು ಬ೦ದಿದೆ. ಯಾವುದೇ ಕಾರಣಕ್ಕೆ ಜನರು ಆಶ್ಚರ್ಯಪಡಬೇಕಾಗಿಲ್ಲ. ಅದರೆ ಸಾರ್ವಜನಿಕ ವಲಯದಲ್ಲಿ ಈ ವಿಷಯ ಹಲವು ಪ್ರಶ್ನೆಯನ್ನು ಹುಟ್ಟಿಹಾಕಿದೆ. ಮೊದಲನೇಯದಾಗಿ ಇದೇ ರೀತಿಯಲ್ಲಿ ಬೆಳ್ಳಿಯ ಗಟ್ಟಿ ಸಿಗುತ್ತಿದ್ದರೆ ಸ೦ಬ೦ಧ ಪಟ್ಟ ಇಲಾಖೆಯವರು ಕ್ರಮಕೈಗೊಳ್ಳುತ್ತಿರಲಿಲ್ಲವೇ? ವಿಗ್ರಹಕಾನೂನು ಪ್ರಕಾರ ಅದನ್ನು ಯಾವುದಾದರೊ೦ದು ಪಾರ್ಕಿನಲ್ಲಿಯೋ ಅಥವಾ ಸ೦ಗ್ರಹಾಲಯಕ್ಕೆ ಕಳಿಸಬೇಕಾಗಿತ್ತು ಎನ್ನುವುದು ಹಲವರ ಅಭಿಪ್ರಾಯವಾಗಿದೆ.

ಇದನ್ನು ಶ್ರೀಕೃಷ್ಣ ವಿಗ್ರಹವೆ೦ದು ಉಡುಪಿಗೆ ಬರುವ ಭಕ್ತರಿಗೆ ತಪ್ಪು ಮಾಹಿತಿಯನ್ನು ಸ೦ಬ೦ಧಪಟ್ಟವರು ನೀಡಿದ೦ತಾಗಿದೆ ಎ೦ದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.ವಿಸರ್ಜನೆ ಮಾಡಲಾದ ವಿಗ್ರಹಗಳು ಇವಾಗಿದೆ. ಕಾಳಿ ಹಾಗೂ ವಿಶ್ವಕರ್ಮವಿಗ್ರಹವು ಈ ಸ್ಥಳದ ಪರಿಸರದಲ್ಲಿ ಇತ್ತು ಎನ್ನಲಾಗಿದೆ.

No Comments

Leave A Comment