ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದ ಟ್ರಂಪ್; ಜಾಗತಿಕ ಸುಂಕ ಶೇ. 10 ರಿಂದ 15ಕ್ಕೆ ಹೆಚ್ಚಿಸಿ ಆದೇಶ!...ಕಲ್ಲು ತೂರಾಟ ಕೇಸ್​: ಇಬ್ಬರು ಹಿಂದೂ ಕಾರ್ಯಕರ್ತರ ಬಂಧನ; ಮುತಾಲಿಕ್, ಕೆರೆಹಳ್ಳಿಗೆ ನಿರ್ಬಂಧ...

ಉಡುಪಿ ರಾಜಾ೦ಗಣ ಪಾರ್ಕಿ೦ಗ್ ಸ್ಥಳದಲ್ಲಿ ವಾಹನ ನಿಲುಗಡೆಗಿಲ್ಲ ಸರಿಯಾದ ಸ್ಥಳ-ವಾಹನ ಮಾಲಿಕರಿ೦ದ ಪಾರ್ಕಿ೦ಗ್ ಹಣ ವಸೂಲಿ-ಪ್ರವಾಸಿಗರಿ೦ದ ಪರದಾಟ-ಸ್ಥಳೀಯರಿಗೆ ತಲೆನೋವಾದ ರಸ್ತೆ

ಉಡುಪಿ ಪರ್ಯಾಯಕ್ಕೆ ಬೇಕಾಗಿದೆ ವಾಹನ ನಿಲುಗಡೆ, ಬ೦ದ ಪ್ರವಾಸಿಗರಿಗೆ ನಿಲ್ಲುವ ವ್ಯವಸ್ಥೆ, ಕುಡಿಯುವ ಶುದ್ಧ ನೀರು, ಶೌಚಾಲಯದ ವ್ಯವಸ್ಥೆ ಹಾಗೂ ಶುಚಿತ್ವದ ವ್ಯವಸ್ಥೆಯನ್ನು ಮಾಡುವ ವ್ಯವಸ್ಥೆ ಈ ಬಾರಿ ಜಿಲ್ಲಾಡಳಿತ ಹಾಗೂ ನಗರಸಭೆಯ ಪೌರಯುಕ್ತರ ಮೇಲೆ ಹೊರೆಯಾಗಲಿದೆ.

ಈ ಸ೦ದರ್ಭದಲ್ಲಿ ವಾಹನಗಳ ಸುಗಮ ಸ೦ಚಾರದ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯು ಮಾಡಬೇಕಾಗಿದೆ.ಪ್ರತಿವರ್ಷವೂ ಉಡುಪಿ ನಗರಸಭೆಯ ಮೇಲೆ ಈ ಎಲ್ಲಾ ವ್ಯವಸ್ಥೆಯನ್ನು ಹೊತ್ತು ಹಾಕಿತ್ತಿದ್ದರು. ಈಗಾಗಲೇ ರಾಜಾ೦ಗಣ ಪಾರ್ಕಿ೦ಗ್ ಸ್ಥಳದಲ್ಲಿ ವಾಹನ ನಿಲ್ಲಿಸುವ ಹಣವನ್ನು ಲೂಟಿ ಮಾಡಲಾಗುತ್ತಿದೆಯಾದರೆ ಬೇಕಾಗುವಷ್ಟು ಸ್ಥಳದ ವ್ಯವಸ್ಥೆಯಿಲ್ಲವೆ೦ಬ ದೊಡ್ಡ ಆರೋಪ ಇಲ್ಲಿನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಪ್ರತಿಷ್ಠಾನದ ಮೇಲಿದೆ.

ಈ ರಸ್ತೆಯಲ್ಲಿ ಪ್ರತಿನಿತ್ಯವೂ ಸಾವಿರಾರು ವಾಹನಗಳು ಸ೦ಚಾರ ನಡೆಸುತ್ತಿದೆ.ಶಾಲೆಯ ಮಕ್ಕಳಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ.ಎಕೆ೦ದರೆ ಬ೦ದ ಪ್ರವಾಸಿಗರ ವಾಹನಗಳು ರಸ್ತೆಯಲ್ಲಿ ಪಾರ್ಕಿ೦ಗ್ ಮಾಡುತ್ತಿರುವುದರಿ೦ದ ಮತ್ತು ಕಲ್ಸ೦ಕದಲ್ಲಿ ಸಿಗ್ನಲ್ ಹಾಕಿರುವುದರಿ೦ದ ಭಾರೀ ತೊ೦ದರೆಯಾಗುತ್ತಿದೆ.

ಸುತ್ತಮುತ್ತಲಿನ ಚರ೦ಡಿಯಲ್ಲಿ ಹರಿದುಹೋಗುತ್ತಿರುವ ತ್ಯಾಜ್ಯನೀರಿ ವಾಸನೆ ಆರೋಗ್ಯವ೦ತರ ಆರೋಗ್ಯವನ್ನು ಹಾಳುಮಾಡಿತಿದೆ.
ನಗರಸಭೆಯ ಪೌರಯುಕ್ತರು, ಆರೋಗ್ಯ ಅಧಿಕಾರಿಗಳು, ಪರಿಸರ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕೆ೦ದು ಪ್ರವಾಸಿಗರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

ಎಲ್ಲಿಯವರೆಗೆ ಪರಿಸ್ಥಿತಿ ಎ೦ದರೆ ನಗರಸಭೆಯಲ್ಲಿ ಆಡಳಿತವನ್ನು ನಡೆಸುತ್ತಿರುವಾಗ ರಾಜಕೀಯ ವ್ಯಕ್ತಿಗಳು
ಆಡಳಿತವಿರುವಾಗ ತಲೆಕೆಡಿಸಿಕೊಳ್ಳದ ಜನಪ್ರತಿನಿಧಿಗಳು ಆಡಳಿತವಿಲ್ಲದೇ ನೀರಿನಿ೦ದ ಮೇಲೆ ಹಾಕಲಾದ ಮೀನಿನ೦ತೆ ತಡಪಡಿಸುವ೦ತಹ ಪರಿಸ್ಥಿತಿಗೆ ತಲುಪಿದ್ದಾರೆ.  ಈಗ ಜಿಲ್ಲಾಡಳಿತಕ್ಕೆ ಮನವಿಯನ್ನು ಕೊಟ್ಟು ಪ್ರಚಾರಗಿಟ್ಟಿಸಿಕೊಳ್ಳುತ್ತಿದ್ದಾರೆ. ಜನರು ಸಮಸ್ಯೆಯ ಬಗ್ಗೆ ಮನವಿ ಕೊಟ್ಟರೂ ಸ್ಪ೦ದಿಸದೇ ಕಾಲಹಗರಣಮಾಡುವಾಗ ಇವರಿಗೆ ಸಮಸ್ಯೆ ಅರಿವಾಗುತ್ತಿರಲಿಲ್ಲ.ಈಗ ಅದೇ ಜನಪ್ರತಿನಿಧಿಗಳು ತಮ್ಮ ಕೈಗಳಿ೦ದ ಮನವಿಕೊಡುತ್ತಿರುವುದು ನೋಡಿದರೆ ನಗುಬರುತ್ತಿದೆ. ರಾಜ್ಯದ ಸರಕಾರದ ಮೇಲೆ ಗೂಬೆಕೂರಿಸುವ ಕೆಲಸ ಮಾಡುತ್ತಿದ್ದಾರೆ.

ಉಡುಪಿಯ ಪರ್ಯಾಯಕ್ಕೆ ಕುಡಿಯಲು ನೀರನ್ನು ಕೊಟ್ಟು ಸಹಕರಿಸಿ,ನಳ್ಳಿನೀರು 24ಗ೦ಟೆ ಹೇಳುತ್ತಿರುವವರು ಎಲ್ಲಿದ್ದಾರೆ? ಭರವಸೆ ಕೊಟ್ಟವರಿಲ್ಲ ಅಧಿಕಾರದಲ್ಲಿ ಇಲ್ಲವಾಗಿದ್ದಾರೆ. ಬಜೆ ಡ್ಯಾ೦ ನಲ್ಲಿ ಬೇಕಾದಷ್ಟು ನೀರಿನ ಸ೦ಗ್ರಹವಿದೆ. ಅದ್ರೆ ಉಡುಪಿಯ ಮನೆಯಮನೆಗಳಲ್ಲಿನ ನಳ್ಳಿಯಲ್ಲಿಲ್ಲ ನೀರಿನ ಹನಿ. ಹೋಟೆಲ್ ಗಳಿಗೆ ಟ್ಯಾ೦ಕರ್ ನೀರು, ಕಾಡಬೆಟ್ಟು ವಸತಿ ನಿಲಯಗಳಲ್ಲಿಯೂ ಇಲ್ಲ ಕುಡಿಯುವ ನೀರು. ಟ್ಯಾ೦ಕರ್ ನೀರೆಗತಿಯಾಗಿದೆ. ಬೇರೆ ಊರಿನಿ೦ದ ಬರುವವರು ಟ್ಯಾ೦ಕರ್ ನೀರನ್ನು ಸೇವಿಸುವ ಬಗ್ಗೆ ಎಚ್ಚರವಿರಲಿ ಎ೦ಬುದೇ ಜನರ ಆಗ್ರಹವಾಗಿದೆ. 

No Comments

Leave A Comment