ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...

ರಾಜ್ಯದಲ್ಲಿ ‘ಸೀಸನಲ್ ಫ್ಲೂ’ ಹೆಚ್ಚಳ ಹಿನ್ನೆಲೆ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ!

ಬೆಂಗಳೂರು: ರಾಜ್ಯದಲ್ಲಿ ಸೀಸನಲ್ ಫ್ಲೂ ಹೆಚ್ಚಳ ಆಗ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಡಿಸೆಂಬರ್, ಜನವರಿಯಿಂದ ಮಾರ್ಚ್ ತನಕ ಸೀಸನಲ್ ಫ್ಲೂ ಹೆಚ್ಚಳದ ಭೀತಿ ಇರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಸೋಂಕಿತರ ಎಂಜಿಲಿನಿಂದ ಹರಡುವ ಸೋಂಕು ಇದಾಗಿದ್ದು ಮುನ್ನಚ್ಚರಿಕೆ ವಹಿಸುವಂತೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಮಕ್ಕಳು, ಹಿರಿಯರು, ಗರ್ಭಿಣಿಯರು, ಕೋಮಾರ್ಬಿಟೀಸ್ ಪೇಶೆಂಟ್ ಗಳಿಗೆ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆಯಿದ್ದು, ಜ್ವರ, ಕೆಮ್ಮು, ಕೆಂಪು ಗುಳ್ಳೆ, ಹಸಿವು ಆಗದಿರುವುದು, ಮೈಕೈ ನೋವು, ಶೀತ, ಒಣ ಕೆಮ್ಮು ಇದರ ಪ್ರಮುಖ ಗುಣ ಲಕ್ಷಣಗಳಾಗಿವೆ.

ಸೀಸನಲ್ ಫ್ಲೂ ಸಾಮಾನ್ಯವಾಗಿ ಒಂದು ವಾರಗಳು ಕಾಲ ಇದ್ದು, ಕೆಲವೊಂದು ಸಲ 3 ವಾರಗಳ ಕಾಲ ಇರಲಿದೆ. ಹೀಗಾಗಿ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ.

ಸೂಚನೆಗಳು ಏನಿದೆ?

  • ಐಎಲ್ಐ, ಸಾರಿ ಪ್ರಕರಣಗಳ ಬಗ್ಗೆ ಗಮನ ಹರಿಸಲು ಸೂಚನೆ

  • ಪ್ರತಿ ದಿನ ಕನಿಷ್ಠ 5ರಷ್ಟು ಐಎಲ್ಐ ಕೇಸ್, 100ರಷ್ಟು ಸಾರಿ ಕೇಸ್ ಗಳ ಪರೀಕ್ಷೆ ಮಾಡಬೇಕು

  • ಎಲ್ಲಾ ಪ್ರಯೋಗಾಲಯಗಳಲ್ಲಿ ಸೂಕ್ತ ಟೆಸ್ಟಿಂಗ್ ಕಿಟ್ ಇರಿಸಿಕೊಳ್ಳಲು ಸೂಚನೆ

  • ಅಗತ್ಯ ಔಷಧಗಳ ಶೇಖರಣೆ, ಪಿಪಿಇ ಕಿಟ್ ಗಳು, ಎನ್95 ಮಾಸ್ಕ್ ಸೇರಿ ಅಗತ್ಯ ಔಷಧಗಳ ಶೇಖರಣೆಗೆ ಸೂಚನೆ

  • oseltamivir ಮಾತ್ರೆಗಳನ್ನು ದಾಸ್ತಾನ ಮಾಡಿ ಅಗತ್ಯಕ್ಕೆತಕ್ಕಂತೆ ಪ್ರಿಸ್ಕ್ರೈಬ್ ಮಾಡಬೇಕು

  • ಇನ್ಫ್ಲೂಯೆನ್ಸಾ ಲಸಿಕೆ ಶೇಖರಣೆ, ಹೆಲ್ತ್ ಕೇರ್ ವರ್ಕರ್ಸ್, ಗರ್ಭಿಣಿಯರು, ಹೈ ರಿಸ್ಕ್ ರೋಗಿಗಳು ಸೂಕ್ತ ಲಸಿಕೆ ಪಡೆಯುವಂತೆ ಸಲಹೆ

  • ಕ್ಲಿನಿಕಲ್ ಮ್ಯಾನೇಜ್ಮೆಂಟ್ ಹಾಗೂ ಕ್ರಿಟಿಕಲ್ ಕೇರ್ ಸಿದ್ಧತೆ, ವೆಂಟಿಲೇಟರ್ಗಳ ಸಿದ್ಧತೆಗೆ ಸಲಹೆ

  • ಕಮ್ಯುನಿಟಿ ಅವೇರ್ನೆಸ್, ರಿಯಲ್ ಟೈಮ್ ಮಾನಿಟರಿಂಗ್ ನಡೆಸುವಂತೆ ಸಲಹೆ

No Comments

Leave A Comment