ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಐದು ವರ್ಷಗಳಿಂದ ಉಡುಪಿ ನಗರಸಭೆ ಆಡಳಿತದಲ್ಲಿದ್ದ ಬಿಜೆಪಿಯ ಭ್ರಷ್ಟಾಚಾರ ಮತ್ತು ಅಭಿವೃದ್ಧಿ ಇಲ್ಲದ ನಗರಸಭೆ -ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ:ಕಳೆದ ಐದು ವರ್ಷಗಳಿಂದ ಉಡುಪಿ ನಗರಸಭೆ ಆಡಳಿತದಲ್ಲಿದ್ದ ಬಿಜೆಪಿಯ ಭ್ರಷ್ಟಾಚಾರ ಮತ್ತು ಅಭಿವೃದ್ಧಿ ಇಲ್ಲದ ನಗರಸಭೆಯ ಆಡಳಿತಕ್ಕೆ ಸಾಕ್ಷಿಯಾಗಿದೆ. ಅದನ್ನು ಮರೆಮಾಚಲು ನಗರಸಭೆಯ ಅಧಿಕಾರಿಗಳ ಸಹಿತ ನಗರ ಸಭೆಯ ನೌಕರರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿ ಉಡುಪಿಯ ಜನರನ್ನು ಜನರನ್ನು ಮೋಸಗೊಳಿಸುವ ತಂತ್ರವನ್ನು ಬಿಜೆಪಿಯ ಮಾಜಿ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರು ಮಾಡುತ್ತಿದ್ದಾರೆ೦ದು ಸುರೇಶ್ ಶೆಟ್ಟಿ ಬನ್ನಂಜೆ ಆರೋಪಿಸಿದ್ದಾರೆ.
ಐದು ವರ್ಷಗಳಿಂದ ಉಡುಪಿ ನಗರಸಭೆ ಆಡಳಿತ ಬಿಜೆಪಿಯ ಆಡಳಿತಕ್ಕೆ ಒಳಗಾಗಿದ್ದು ಈ ಸಂದರ್ಭದಲ್ಲಿ ಯಾವುದೇ ನಗರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಣದೆ ಅಭಿವೃದ್ಧಿಹೀನ ನಗರಸಭೆ ಎಂದು ಹೆಸರು ಗಳಿಸಿದ ಈ ಬಿಜೆಪಿಯವರಿಗೆ ಐದು ವರ್ಷಗಳಲ್ಲಿ ಎರಡು ಅಧ್ಯಕ್ಷರು ಎರಡು ಶಾಸಕರುಗಳು ಈ ಬಿಜೆಪಿಯವರೇಯಾಗಿದ್ದು. ಉಡುಪಿ ನಗರಸಭೆಯಲ್ಲಿ ಈ ಬಿಜೆಪಿಯವರ ಭ್ರಷ್ಟಾಚಾರ ತುಂಬಿ ತುಳುಕಿದ್ದು . ನಗರಸಭೆಯನ್ನು ಗುಡಿಸಿ ಗುಂಡಾಂತರ ಮಾಡಿದ ಈ ಬಿಜೆಪಿಯವರಿಗೆ .ಇದೀಗ ಉಡುಪಿಯ ಜನರನ್ನು ಮೋಸ ಗೊಳಿಸಲು ಜಿಲ್ಲಾಧಿಕಾರಿಯವರ ಬಳಿ ಉಡುಪಿ ನಗರಸಭೆ ಅಧಿಕಾರಿಗಳು ಹಾಗೂ ನೌಕರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಮನವಿ ಮೂಲಕ ನೀಡಿ ಉಡುಪಿಯ ಜನರನ್ನು ಮೋಸ ಮೋಸಗೊಳಿಸಲು ಯತ್ನಿಸುತ್ತಿದ್ದಾರೆ.
ಇದು ನಮ್ಮ ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡಿನ ಮತದಾರರು ಜನಸಾಮಾನ್ಯರು ಈ ಬಿಜೆಪಿಯವರ ಸುಳ್ಳು ಹೇಳಿಕೆ ಬೆಂಬಲಿಸದೆ ಈ ಬಿಜೆಪಿಯವರಿಗೆ ತಕ್ಕ ಉತ್ತರವನ್ನು ಮತದಾನದ ಮೂಲಕ ಉಡುಪಿಯ ಜನತೆ ನೀಡಲಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ ರಾಜ್ಯ ಸಂಘಟನೆ ಇದರ ಅಧ್ಯಕ್ಷರು ಉಡುಪಿ ನಗರಸಭೆಯ ನಾಮ ನಿರ್ದೇಶಕ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ